ಶಿವಮೊಗ್ಗ : ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿ ಟಿ ಟಿ ಸಿ) ಶಿವಮೊಗ್ಗ ಮತ್ತು ಆರ್‌ಟಿಓ ಕಚೇರಿ ವತಿಯಿಂದ ಜ.31 ರಂದು ರಂದು 36 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ ದಿನಾಚರಣೆ -2025 ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಆರ್.ಟಿ.ಓ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಮೋಟಾರ್‌ಗಳ ಸುಸ್ಥಿತಿ ಮತ್ತು ದುಸ್ಥಿತಿ ಕುರಿತು ಕಾಳಜಿ ವಹಿಸುವುದರ ಬಗ್ಗೆ ಮತ್ತು ಮೋಟಾರುಗಳಿಂದ ಪರಿಸರ ಮಾಲಿನ್ಯ ತಡೆಗಟ್ಟುವುದುರ ಬಗ್ಗೆ , ರಸ್ತೆಯಲ್ಲಿ ಅಪಘಾತಗಳನ್ನು ತಡೆಗಟ್ಟುವುದರಲ್ಲಿ ಯುವಜನತೆಯ ಮಹತ್ವದ ಬಗ್ಗೆ ಮತ್ತು ಆರ್ ಟಿ ಓ ಚಿಹ್ನೆಗಳ ವಿವರಣೆ ನೀಡಿದರು. ನಂತರ ಆರ್‌ಟಿಓ ಅಧಿಕಾರಿಗಳು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿ, ವಿಜೇತರಿಗೆ ಬಹುಮಾನವನ್ನು ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರಗೇಂದ್ರ ಬಿ. ಶಿರೋಲ್ಕರ್, ಹಿರಿಯ ಮೋಟಾರು ವಾಹನ ನಿರೀಕ್ಷಕ ಪಿ. ಎಮ್. ಮಲ್ಲೇಶಪ್ಪ, ಕಚೇರಿ ಅಧೀಕ್ಷಕ ರಾಮಚಂದ್ರಪ್ಪ ಎಚ್. ಸಿ., ಸಿಬ್ಬಂದಿ ವರ್ಗದವರು ಹಾಗೂ ಜಿ ಟಿ ಟಿ ಸಿ ಯ ಘಟಕ ಮುಖ್ಯಸ್ಥ ಎಚ್ ಪಿ ನಾಗರಾಜ, ಪ್ರಾಂಶುಪಾಲರಾದ ದೀಪಕ್ ಕುಮಾರ್ ವಿ ಆರ್ ಹಾಗೂ ಸಿಬ್ಬಂದಿ ವರ್ಗದ ಉಪಸ್ಥಿತರಿದ್ದರು.
- ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
