
ಬೆಂಗಳೂರು: ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ನಿಟ್ಟಿನಲ್ಲಿ ಅಕ್ಷಯ ಸ್ಕೂಲ್ ಆಫ್ ಆರ್ಟ್ಸ್ ವತಿಯಿಂದ ಇದೇ ಫೆಬ್ರವರಿ 10 ರಂದು “ಭಾವ ತರಂಗಿನಿ – ಯುವ ಪ್ರತಿಭೋತ್ಸವ 2025” ಅನ್ನು ಬೆಂಗಳೂರಿನ ಜೆ.ಸಿ.ರಸ್ತೆಯ ‘ನಯನ ಸಭಾಂಗಣ’ ದಲ್ಲಿ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9740956185
ನೃತ್ಯ, ಸಂಗೀತ, ರಂಗಭೂಮಿಯಲ್ಲಿ ಆಸಕ್ತಿ, ಅಭಿರುಚಿ ಇರುವವರಿಗೆ ಬೆಂಗಳೂರಿನಲ್ಲಿರುವ ಅಕ್ಷಯ ಸ್ಕೂಲ್ ಆಫ್ ಆರ್ಟ್ಸ್ ಉತ್ತಮ ತರಬೇತಿ, ಮಾರ್ಗದರ್ಶನ ನೀಡುತ್ತಾ ಬಂದಿದೆ. ಅಕ್ಷಯ ಸ್ಕೂಲ್ ಆಫ್ ಆರ್ಟ್ಸ್ ನ ಸಂಸ್ಥಾಪಕರಾದ ಶ್ರೀಮತಿ ಅಕ್ಷಯ ಸುಂದರಿ ಅವರು ನೂರಾರು ಮಕ್ಕಳಿಗೆ ತರಬೇತಿಯನ್ನು ನೀಡಿದ್ದಾರೆ. ಬೆಂಗಳೂರಿನ ಕೃಷ್ಣರಾಜಪುರಂ ಹಾಗೂ ಯಲಹಂಕದಲ್ಲಿ ಇವರ ಕಚೇರಿಗಳಿವೆ.
ಶ್ರೀಮತಿ ಅಕ್ಷಯ ಸುಂದರಿ ಅವರು ಅನೇಕ ಪ್ರಶಸ್ತಿ-ಪುರಸ್ಕಾರಗಳಿಂದ ಸನ್ಮಾನಿತರಾಗಿದ್ದಾರೆ.
- ಕರುನಾಡ ಕಂದ
