ಮಹಾಭಾರತದ… ಸ್ವಾತಂತ್ರ ಭಾರತದ ರಿಯಲ್ ಹೀರೋ ಯಾರು? ಗಾಂಧಿ… ಮಹಾತ್ಮ ಗಾಂಧಿ ಸ್ವಾತಂತ್ರ ಭಾರತದ ರಿಯಲ್ ಹೀರೋನಾ? ಗಾಂಧೀಜಿ ಸ್ವಾತಂತ್ರ ಭಾರತದ ರಿಯಲ್ ಹೀರೋ ಆಗಿದ್ದರೆ, ಗೋಡ್ಸೆ ಎಂಬ ಗೂಂಡಾ ಗಾಂಧೀಜಿಯನ್ನು ಯಾಕೆ ಕೊಲೆ ಮಾಡಿದ ? ಅಲ್ಲ… ಗಾಂಧೀಜಿ ಅವನೊಬ್ಬ ನಾಯಕನಲ್ಲ! ಗೋಡ್ಸೆ ಅವನೊಬ್ಬ ಖಳನಾಯಕನಲ್ಲ!! ಅವರಿಬ್ಬರೂ ಅಂಧ ಭಕ್ತರು…! ಹಾಗಾದರೆ ಸ್ವಾತಂತ್ರ ಭಾರತದ ರಿಯಲ್ ಹೀರೋ ಯಾರು ಅಂತ ಕೇಳ್ತೀರಾ…? ಸಿಂಬಲ್ ಆಫ್ ನಾಲೆಜ್, ವಿಶ್ವ ಜ್ಞಾನಿ, ಮಹಾ ಮಾನವತಾವಾದಿ ಡಾಕ್ಟರ್ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್… ಸ್ವಾತಂತ್ರ ಭಾರತದ ರಿಯಲ್ ಹೀರೋ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಈ ಕಹಿ ನಗ್ನ ಸತ್ಯವನ್ನು, ಈ ದೇಶದ ಮನುವಾದಿಗಳಿಗೆ ಅರಗಿಸಿಕೊಳ್ಳಲಾಗದು ಬಂಧುಗಳೇ.
ಬಂಧುಗಳೇ…
ನಾನೀಗ ತಮಗೆ ಕೆಲವು ಕಹಿ ನಗ್ನ ಸತ್ಯಗಳನ್ನು ತಮ್ಮೆದುರಿಗೆ ತೆರೆದಿಡಲು ಹೊರಟಿದ್ದೇನೆ. ಅದನ್ನು ಅರ್ಥೈಸಿಕೊಂಡು, ಅರಗಿಸಿಕೊಂಡು, ಜಾಗೃತಗೊಂಡು ಎಚ್ಚೆತ್ತುಕೊಳ್ಳುತ್ತೀರ ಎಂಬ ಆಶಯದೊಂದಿಗೆ ಈ ಲೇಖನವನ್ನು ಬರೆಯಲು ಪ್ರಯತ್ನಿಸುತ್ತಿದ್ದೇನೆ. ತಾವು ಇದನ್ನು ಅರ್ಥೈಸಿಕೊಂಡು ಜಾಗೃತರಾದಾಗ ಈ ನನ್ನ ಶ್ರಮ ಸಾರ್ಥಕ ಎಂದು ನಾನು ಭಾವಿಸುತ್ತೇನೆ.
Who is real hero of Mahabharat ? ಮಹಾಭಾರತದ ರಿಯಲ್ ಹೀರೋ ಯಾರು ಎಂದು ಕೇಳಿದರೆ ಪುರಾಣಗಳು ಓದಿದ ಅಂಧಭಕ್ತರು ಹೇಳುತ್ತಾರೆ, ಮಹಾಭಾರತ ರಿಯಲ್ ಹೀರೋ ಕೃಷ್ಣ. ಮಹಾಭಾರತದ ನಿಜವಾದ ಹೀರೋ ಭೀಷ್ಮ, ಕರಣ, ಭೀಮ… ಇತ್ಯಾದಿ ತಮಗೆ ತೋಚಿದಂತೆ ಮಹಾಭಾರತವೆಂಬ ಪುರಾಣದಲ್ಲಿ ಬರುವ ಕಾಲ್ಪನಿಕ ಪಾತ್ರಗಳ ಹೆಸರುಗಳು ಹೇಳುತ್ತಾ ಹೋಗುತ್ತಾರೆ. ಆದರೆ ಇತಿಹಾಸ ಓದಿದವರು,”ಮಹಾಭಾರತದ ರಿಯಲ್ ಹೀರೋ ಅಶೋಕ… ಪ್ರಿಯದರ್ಶಿ, ಸಾಮ್ರಾಟ್ ಅಶೋಕ… ಅಶೋಕ ಮೌರ್ಯನೇ ಮಹಾಭಾರತದ ರಿಯಲ್ ಹೀರೋ” ಎಂದು ಹೇಳುತ್ತಾರೆ. ಮಹಾಭಾರತದ ರಿಯಲ್ ಹೀರೋ ಅಶೋಕ ಎಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಯಾಕೆ ಅಂದರೆ
ನೂರಾರು ರಾಜರುಗಳಿಂದಾಗಿ
ತುಂಡುತುಂಡಾಗಿ ಹೋಗಿದ್ದ ಭಾರತವನ್ನು ತನ್ನ ಸೈನ್ಯ ಬಲದಿಂದ ಗೆದ್ದುಕೊಂಡು, ತುಂಡುತುಂಡಾಗಿ ಹೋಗಿದ್ದ ಭಾರತವನ್ನು ಮಹಾಭಾರತವನ್ನಾಗಿ ಮಾಡಿದ್ದು ಅಶೋಕ… ಸಾಮ್ರಾಟ್ ಅಶೋಕ!
ಇವನ ಸಾಮ್ರಾಜ್ಯದ ಗಡಿ ರೇಖೆ ಇರಾನಿನಿಂದ ಬ್ರಹ್ಮದವರವರಿಗೆ ವಿಸ್ತರಿಸಿತ್ತು. ಬುದ್ಧನ ಪಂಚಶೀಲ ತತ್ವದಿಂದ ಕೂಡಿದ್ದ ಸಮತಾ ಸಮಾಜ ಇವನ ಆಡಳಿತದಲ್ಲಿತ್ತು. ಅಶೋಕನ ಈ ಮಹಾಭಾರತವನ್ನು ಗುಲಾಮ ಭಾರತವನ್ನಾಗಿ ಮಾಡಿದ್ದು ಯಾರು? ಸಮಾನತೆಯ ಸಾರವನ್ನು ಸಾರಿದ ಬುದ್ಧನ ಅನುಯಾಯಿ ಅಶೋಕನ ಅಂಶಸ್ಥರ ಸ್ಥಿತಿ ಇವತ್ತೇನಾಗಿದೆ?
ಇವರ ಈ ದುಸ್ಥಿತಿಗೆ ಕಾರಣ ಯಾರು… !?
ಇನ್ಯಾರು ಸ್ವಾಮಿ, ಅವರೇ… ಮನುವಾದಿಗಳು, ದುಷ್ಟ ಪಾಪಿಗಳು,ಸ್ವಾರ್ಥಿಗಳು, ಷಡ್ಯಂತ್ರಕಾರಿಗಳು, ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ವೇದ,ಪುರಾಣ, ಉಪನಿಷತ್ತು, ಇದ್ರಲೋಕ, ಬ್ರಹ್ಮಲೋಕ, ಸ್ವರ್ಗ-ನರಕ, ಪಾಪ-ಪುಣ್ಯ, ದೇವರು-ಧರ್ಮ, ವರ್ಣ-ಅಸ್ಪೃಶ್ಯತೆ… ವರ್ಣಬೇಧ, ಜಾತಿಭೇದ.. ಮನಸ್ಸಿಗೆ ಬಂದಿದ್ದೆಲ್ಲವನ್ನು ಸೃಷ್ಟಿಸಿ; ಮನುಷ್ಯ ಮನುಷ್ಯರಲ್ಲಿಯೇ ತಾರತಮ್ಯ ಉಂಟುಮಾಡಿ ಸಮತಾ ಸಮಾಜದಲ್ಲಿ ಬಿರುಕು ಮೂಡಿಸಿದರು.
ರಾಮಾಯಣ, ಮಹಾಭಾರತ…ಕಲ್ಪನೆಯ
ಕಂತೆಗಳು! ಭೀಮ, ಅರ್ಜುನ, ಕರ್ಣ, ಕೃಷ್ಣ, ಶಕುನಿ… ಇತ್ಯಾದಿ ಇವರೆಲ್ಲರೂ ಕಲ್ಪನೆಯ ಕಂತೆ ಮಹಾಭಾರತದಲ್ಲಿ ಬರುವ ಡುಬ್ಲಿಕೇಟ್ ಹೀರೋ ಮತ್ತು ವಿಲನ್ ಗಳು!
1.ಚಂದ್ರಗುಪ್ತ ಮೌರ್ಯ
2.ಬಿಂದುಸಾರ
3.ಅಶೋಕ
4.ದಶರಥ
5.ಜಲೌಕ
6.ಸಾಲಿಶೋಕ
7.ಸಂಪ್ರತಿ
8.ಕುನಾಲ
9.ಸುಧನ್ವ
10.ಬ್ರಹದ್ರಥ ಮೌರ್ಯ…ಮೌರ್ಯ ಸಾಮ್ರಾಜ್ಯದ ಈ ಎಲ್ಲ ರಾಜರುಗಳು
ಭಾರತದ ಹೀರೋಗಳು… ಇವರಲ್ಲಿ ಅಶೋಕ ಮಹಾಭಾರತದ ರಿಯಲ್ ಗ್ರೇಟ್ ಹೀರೋ!
ಈ ನಗ್ನ ಸತ್ಯವನ್ನು ಭಾರತದ ಮೂಲ ನಿವಾಸಿಗಳು ಅರ್ಥೈಸಿಕೊಂಡಾಗ ಮಾತ್ರ ಈ ದೇಶದ ಬಡವರು ಮತ್ತು ಶೋಷಿತರು ಏಳಿಗೆ ಹೊಂದಲು ಸಾಧ್ಯವಾಗುತ್ತದೆ.
ಭಾರತ ಮೊದಲಿನಂತೆ ವಿಶ್ವಗುರುವಾಗಿ ಕಂಗೊಳಿಸುತ್ತದೆ.ಸೂಪರ್ ಪವರ್ ಕಂಟ್ರಿಯಾಗಿ ಮಿನುಗುತ್ತದೆ.ಅರ್ಥೈಸಿಕೊಳ್ಳದೇ ಹೋದರೆ ಬ್ಯಾಡ್ ಇಂಡಿಯನ್ ಡರ್ಟಿ ಕಂಟ್ರಿಯಾಗಿಯೇ, ಅಂಧಭಕ್ತರ ಮೂರ್ಖ ಭಾರತವಾಗಿ ಮುಂದುವರಿಯುತ್ತದೆ ಎಂದು ಹೇಳಲು ವಿಷಾದ ಉಂಟಾಗುತ್ತದೆ…!
ಪ್ರಿಯ ಬಹುಜನ ಭಾರತೀಯರೇ, ಸಾವರ್ಕರ್ ಎಂಬ ಮನುವಾದಿ ತನ್ನ ಒಂದು ಪುಸ್ತಕದಲ್ಲಿ ಈ ರೀತಿ ಬರೆದುಕೊಂಡಿದ್ದಾನಂತೆ –
“ಭಾರತದ ಮೂಲ ನಿವಾಸಿಗಳು ಆರ್ಯ ಬ್ರಾಹ್ಮಣರ ಗುಲಾಮರಾಗಿ, ಅಂಧಭಕ್ತರಾಗಿ ಮುಂದುವರಿಯಬೇಕು ಅಂದರೆ, ಅವರು ವಾಸಿಸುವ ಗಲ್ಲಿಗಳಲ್ಲಿ ಎರಡೆರಡು ದೇವರ ಗುಡಿಗಳನ್ನು ಕಟ್ಟಿಸಿ, ಮತ್ತು ಅವರಿಗಾಗಿಯೇ ನಾಲ್ಕು ನಾಲ್ಕು ಸರಾಯಿ ಅಂಗಡಿಗಳು ಇರುವಂತೆ ನೋಡಿಕೊಳ್ಳಿ. ಶಿಕ್ಷಣದಿಂದ ದೂರ ಇಡಿ. ಒಂದು ವೇಳೆ ಈ ಜನಗಳು ಶಿಕ್ಷಿತರಾಗಿ ಒಳ್ಳೆಯ ಹುದ್ದೆಗಳು ಪಡೆದುಕೊಂಡರೆ ನಮಗೆ (ಬ್ರಾಹ್ಮಣವಾದಿಗಳಿಗೆ) ತುಂಬ ಅಪಾಯ ಇದೆ. ಬಹುಜನ ಭಾರತೀಯರು ವೈಚಾರಿಕ ಪ್ರಜ್ಞಾವಂತರಾದರೆ ಸಾವಿರಾರು ವರ್ಷಗಳಿಂದಲೂ ಕಾಪಾಡಿಕೊಂಡು ಬಂದ ನಮ್ಮ ಶ್ರೇಷ್ಠತೆ ಕಳೆದುಕೊಂಡು ಬೀದಿ ಭಿಕಾರಿಗಳಾಗಿ ಅಲೆಯಬೇಕಾಗುತ್ತದೆ. ದೇಶ ಬಿಟ್ಟು ಓಡಿ ಹೋಗಬೇಕಾಗುತ್ತದೆ…!” ಅಂದು ಸಾವರ್ಕರ್ ಹೇಳಿದ ಈ ಕಹಿ ನಗ್ನ ಸತ್ಯ ಇಂದಿಗೂ ಪ್ರಸ್ತುತವಾಗಿದೆ.ಸಾವರ್ಕರ್ , ಗೋಲ್ವಳ್ಕರ್, ಗೋಡ್ಸೆ ಎಂಬ ಗೂಂಡನ, ಆರ್ ಎಸ್ ಎಸ್ ನ ಈ ಗುಲಾಮ ಸರ್ಕಾರ ಇವತ್ತು ಏನು ಮಾಡುತ್ತಿದೆ ? ಅಂದು ಸಾವರ್ಕರ್ ಹೇಳಿದ್ದನ್ನೇ ಇಂದಿನ ಮನುವಾದಿ ಸರ್ಕಾರ ಚಾಚು ತಪ್ಪದೇ ಕಾರ್ಯರೂಪಕ್ಕೆ ತರುತ್ತಿದೆ. ಶಾಲೆ, ಆಸ್ಪತ್ರೆ , ಕಾರ್ಖಾನೆಗಳು ಕಟ್ಟಿಸಬೇಕಾದಲ್ಲಿ ಮಂದಿರಗಳು ಕಟ್ಟಿಸುತ್ತಿದೆ. ದೇವರು-ಧರ್ಮದ ಹೆಸರಿನಲ್ಲಿ ಜಗಳ ಹಚ್ಚಿ ತಮಾಷೆ ನೋಡುತ್ತಿದೆ. ಡೈಮಂಡ್ ಖರೀದಿಸಲು ಮೂರು ಪರ್ಸೆಂಟ್ (GST) ತೆರಿಗೆ ಕಟ್ಟಬೇಕು; ಅದೇ ಪುಸ್ತಕ ಖರೀದಿಸಿದರೆ 18 ಪರ್ಸೆಂಟ್ ಜಿ ಎಸ್ ಟಿ ನೀಡಬೇಕೆಂದು ಹೇಳುತ್ತಿದೆ ಮನುವಾದಿ ಮೂರ್ಖ ಸರಕಾರ. ಮೂರ್ಖ ರಾಜ, ಅಂಧ ಭಕ್ತ ಪ್ರಜೆಗಳು… ಚೆನ್ನಾಗಿದೆ ಅಲ್ವಾ!? ಶೋ.. ಅದು ಇರ್ಲಿ ಬಿಡಿ. ಈಗ ವಾಪಸ್ ವಿಷಯಕ್ಕೆ ಬರೋಣ.
1.ಶತ ಶತಮಾನಗಳಿಂದ
ಅನ್ಯಾಯ-ಅತ್ಯಾಚಾರ, ಮೋಸ-ವಂಚನೆಗೆ ಒಳಗಾದ, ತುಳಿತಕ್ಕೊಳಗಾದ, ಶೋಷಣೆಗೆ ಒಳಗಾದ ಮಹಿಳೆಯರು ಮತ್ತು ಶೂದ್ರರು-ಪಂಚಮರು… ಅಸ್ಪೃಶ್ಯರೆನಿಸಿಕೊಂಡವರೆಲ್ಲೂ ಉದ್ಧಾರ ಆಗಿದ್ದು ಡಾಕ್ಟರ್ ಅಂಬೇಡ್ಕರ್ ಎಂಬ ಮಹಾ ಮೇಧಾವಿ ಬರೆದ ಸಂವಿಧಾನದಿಂದ.
ಮೂಲನಿವಾಸಿ ಭಾರತೀಯರ ಸಭ್ಯ ಸಂಸ್ಕೃತಿ ಹಾಳಾಗಿದ್ದು ವಿದೇಶಿ ಮನುವಾದಿ ಬ್ರಾಹ್ಮಣರಿಂದ….!
ಮೂಲನಿವಾಸಿ ಭಾರತೀಯರು ಯಾರೂ ಸಹ ತಾವು ಕೀಳು ಜಾತಿಯವರು, ಅಸ್ಪೃಶ್ಯರು, ಬಡವರು ಆಗಬೇಕು ಎಂದು ನಿರ್ಧಾರ ಮಾಡಿರಲಿಲ್ಲ.ಕೆಲ ದುಷ್ಟ ಪಾಪಿಗಳು ಷಡ್ಯಂತ್ರ ರಚಿಸಿ ಅವರನ್ನು ಆ ರೀತಿಯಾಗಿ ಮಾಡಿದರು.
2.ಶೂದ್ರರು…ನಾಯಿ,ಬೆಕ್ಕು, ನರಿ, ಹಂದಿಗಳಗಿಂತಲೂ ಮುರ್ಖರಾಗಿದ್ದಾರೆ!
ಅದು ಹೇಗೆ ಅಂದರೆ, ಕಲ್ಲು-ಮಣ್ಣಿನಿಂದ ಇಲಿಯೊಂದನ್ನು ತಯ್ಯಾರಿಸಿ ‘ಇದು ನಿನ್ನ ಶಿಕಾರ್ ಇದೆ; ಬೇಟೆಯಾಡಿ ಇದನ್ನು ತಿನ್ನು’ಎಂಬಂತೆ ಬೆಕ್ಕಿನ ಮುಂದೆ ಕಲ್ಲಿನ ಇಲಿ ತಂದಿರಿಸಿದರೆ, ಬೆಕ್ಕು ಆ ಇಲಿಯನ್ನು ಬೇಟೆ ಆಡಿ ತಿನ್ನುವುದಿಲ್ಲ.ಇದೇ ರೀತಿ
ನಾಯಿ, ನರಿ, ಹಂದಿಗಳಿಗೂ ಸಹ ಕಲ್ಲು-ಮಣಿನಿಂದ ಆಹಾರ ತಯಾರಿಸಿ ಪೇಂಟ್ ಹೊಡೆದು-ಬಣ್ಣ ಬಳಿದು, ಅವುಗಳ ಮುಂದೆ ಇರಿಸಿದರೆ ಅವುಗಳೂ ಸಹ ತಿನ್ನುವುದಿಲ್ಲ. ಡುಪ್ಲಿಕೇಟ್ ಎಂದು ಕಂಡು ಹಿಡಿದು ಬಿಡುತ್ತವೆ. ಆದರೆ ಶೂದ್ರರು, ಮನುವಾದಿ ಬ್ರಾಹ್ಮಣ ಹೇಳಿದೆಲ್ಲವನ್ನು ಸತ್ಯವೆಂದು ನಂಬಿ ಗೋಮೂತ್ರ ಪವಿತ್ರವಾದ ತೀರ್ಥ – ಸಗಣೆ ಪ್ರಸಾದ ಎಂದು ತಿನ್ನಲು ಹೇಳಿದ್ರೆ ತಿಂದು ಮುಗಿಸಿ, ಕುಡಿದು ಬಿಡುತ್ತಾರೆ ಮುಠಾಳರು! ಎಂದು ಬಹುಜನ ಮಹಾ ಚಿಂತಕ ಅರುಣ್ ಕುಮಾರ್ ಗುಪ್ತ ಹೇಳುತ್ತಿರುವ ಈ ಮಾತು(ಗಳು) ನಿಜಕ್ಕೂ ಕಹಿ ನನ್ನ ಸತ್ಯವಾಗಿವೆ.
3.ದೇವರು-ಧರ್ಮ… ಅನ್ನುವುದೊಂದು ದಂಧೆಯಾಗಿ ! ದುಡಿದು ತಿನ್ನಲಾಗದ ದುಷ್ಟರ ಷಡ್ಯಂತ್ರವಾಗಿದೆ!! ಮನುಷ್ಯ… ದೇವರು-ಧರ್ಮ ಇಲ್ಲದೆ ಬದುಕಬಲ್ಲ. ಆದರೆ, ಪರಸ್ಪರ ಪ್ರೀತಿ, ವಿಶ್ವಾಸ-ನಂಬಿಕೆ, ಮಾನವೀಯತೆ ಇಲ್ಲದೆ ಮನುಷ್ಯ , ಮನುಷ್ಯನಂತೆ ನೆಮ್ಮದಿಯಾಗಿ ಬದುಕಿರಲು ಅಸಾಧ್ಯವಾಗಿದೆ. ಭೂಮಿ, ಆಕಾಶ, ನೀರು, ಬೆಂಕಿ, ಗಾಳಿ… ಈ ಪಂಚಭೂತಗಳಿಂದ ಜೀವ ಜಗತ್ತು ಸೃಷ್ಟಿ ಕೊಂಡಿರುತ್ತದೆ. ಈ ಸೃಷ್ಟಿಗೆ ಕಾರಣವಾದ ಪಂಚ(ಮಹಾ)ಭೂತವೇ ನಮ್ಮ ದೇವರು. ಪ್ರೀತಿ, ವಿಶ್ವಾಸ, ಮಾನವೀಯತೆಯ ಮಾನವ ಧರ್ಮವಾಗಿದೆ…! ಈ ಬದುಕು ನೋವು-ನಲಿವಿನಿಂದ ಕೂಡಿದೆ. ನನ್ನ ಹೆಂಡತಿ ನನ್ನಮಕ್ಕಳು, ಹಣ,ಆಸ್ತಿ ಅಂತಸ್ತು, ನನ್ನ ಜಾತಿ- ನನ್ನ ಧರ್ಮ… ನನ್ನದೆನ್ನುವುದೆಲ್ಲವೂ ಇಲ್ಲಿ ಮಿತ್ಯವಾಗಿದೆ! ಭ್ರಮೆಯಾಗಿದೆ! ಜನನ-ಮರಣ… ಇದೊಂದೇ ಪರಮ ಸತ್ಯವಾಗಿದೆ!
ಎಂದು ವೈಚಾರಿಕ ಪ್ರಜ್ಞಾವಂತರು ಹೇಳುತ್ತಾರೆ.
4.ವ್ಯಾಪಾರಕ್ಕೆಂದು ಬಂದ ಬ್ರಿಟಿಷರು ಹಿಂದೂ-ಮುಸ್ಲಿಮ್ ಎಂದು ಎರಡು ಭಾಗಗಳಾಗಿ ಮಾಡಿ ಈ ದೇಶವನ್ನಾಳಲು ನೋಡಿದರು. ಆದರೆ ಅನ್ನ- ನೀರನ್ನು ಹುಡುಕುತ್ತಾ ಬಂದ ಯುರೇಷಿಯನ್ ಭಿಕಾರಿಗಳು,ನಿಯತ್ತಿಲ್ಲದ ನಾಯಿಗಳು ತಿಂದ ತಟ್ಟೆಯಲ್ಲಿಯೇ ಕಕ್ಕ ಮಾಡಿದ್ದಲ್ಲದೇ ದೇಶದ ಮೂಲನಿವಾಸಿ ಭಾರತೀಯರನ್ನು 6000 ಗಿಂತಲೂ ಅಧಿಕ ಜಾತಿಗಳಲ್ಲಿ ವಿಂಗಡಿಸಿ ಪ್ರಸ್ತುತ ಭಾರತವನ್ನಾಳುತ್ತಿದ್ದಾರೆ. ಮೂರ್ಖ ಮೂಲನಿವಾಸಿಗಳು ಈ ಕಹಿ ನಗ್ನ ಸತ್ಯವನ್ನು ಅರ್ಥೈಸಿಕೊಂಡು ಜಾಗೃತರಾಗಬೇಕಾಗಿದೆ! ಷಡ್ಯಂತ್ರಕಾರಿಗಳ ವಿರುದ್ಧ ಸಮರ ಸಾರಬೇಕಾಗಿದೆ…!
ಭಾರತದ ಮೂಲನಿವಾಸಿಗಳೇ, ಏಳಿ… ಎಚ್ಚೆತ್ತುಕೊಳ್ಳಿ! ಜಾಗೃತರಾಗಿ!! ಹೋರಾಡಲು ಸಿದ್ಧರಾಗಿ!!!
ಮನುವಾದಿಗಳಿಗೆ ಕೆಲ ಪ್ರಶ್ನೆಗಳು
ಭಾರತ ನನ್ನ ತಾಯಿನಾಡು !
ಬುದ್ಧ, ಬಸವ ಅಂಬೇಡ್ಕರ್ ,ಸಾಹು, ಫುಲೆ,ಪೇರಿಯಾರ್, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹ ಪುರುಷರು-ಸಮಾಜ ಸುಧಾರಕರು ಹುಟ್ಟಿದ ಪುಣ್ಯ ಭೂಮಿ ನನ್ನದು! ಶ್ರೀಮಂತಿಕೆಯ ತವರೂರು ಆಗಿದ್ದ ಈ ನನ್ನ ದೇಶ ಇವತ್ತು ಏನಾಗಿದೆ…?
“ಭಾರತವು ಜಾತ್ಯಾತೀತ ರಾಷ್ಟ್ರ… ಇಲ್ಲಿ ಹಿಂದು, ಜೈನ, ಸಿಖ್, ಮುಸ್ಲಿಂ, ಕ್ರಿಸ್ತ, ಪಾರ್ಸಿ, ಲಿಂಗಾಯತ ಹಾಗೂ ವಿವಿಧ ಬುಡಕಟ್ಟು ಧರ್ಮ ಮತ್ತು ಆಚರಣೆಗಳ ಜನ ವಾಸವಾಗಿದ್ದಾರೆ. ಅವರವರ ವೇಷ – ಭಾಷೆ, ರೀತಿ ನೀತಿ ಬೇರೆಬೇರೆಯಾಗಿದ್ದರೂ ಸಹ ನಾವೆಲ್ಲರೂ ಒಂದೇ ಎಂಬ ಏಕತೆ ಭಾವ ಅವರಲ್ಲಿದೆ . ವಿವಿಧತೆಯಲ್ಲಿ ಏಕತೆಯುಳ್ಳ ರಾಷ್ಟ್ರ ಈ ಭಾರತ…! ಸಂಸ್ಕೃತ ಭಾಷೆ ಮತ್ತು ವೈದಿಕ ಸಾಹಿತ್ಯ, ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆಗಳು ಭಾರತೀಯರಲ್ಲಿ ಏಕತೆಯ ಭಾವವನ್ನು ತುಂಬಿವೆ”ಎಂದು ಇತಿಹಾಸದ ಪಾಠ ಹೇಳುತ್ತದೆ. ಇದೆಲ್ಲ ನಿಜವೇ ?
ಇಲ್ಲ.ನಿಜ ಅಲ್ಲ ! ಬರೀ ಸುಳ್ಳು. ಇದೆಲ್ಲಾ ಪುಸ್ತಕದ ಬದನೆಕಾಯಿ.ಸತ್ಯ ಹೇಳಲು ನಾಚಿಕೆ ಉಂಟಾಗಿ, ಆತ್ಮವಂಚನೆ ಮಾಡಿಕೊಂಡು ಹೇಳುವ ಮಾತಿದು…! ಸತ್ಯ ಹೇಳಬೇಕು ಅಂದರೆ ಈ ದೇಶದ ಜನಕ್ಕೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗೋಲ್ಲ . ಇವರೂ ಉದ್ದಾರ ಆಗಲ್ಲ. ಬೇರೆಯವರಿಗೂ ಉದ್ಧಾರ ಆಗಲು ಬಿಡಲ್ಲ ಈ ಜನ.ದಿನ ಬೆಳಗಾದರೆ ಸಾಕು, ಜಾತಿ- ಧರ್ಮ, ಭಾಷೆ ಎಂದು ಕಿತ್ತಾಡುತ್ತಿರುತ್ತಾರೆ ಅನಾಗರಿಕ ಮೌಢ್ಯ ಜನ.ಈ ವೈದಿಕ ಸಾಹಿತ್ಯದಿಂದಲೇ ಮೂಢನಂಬಿಕೆ ಬೆಳೆದು ಕೆಲ ಜನರ ವ್ಯಕ್ತಿತ್ವ ಕುಂಠಿತಗೊಂಡಿದೆ”ಎಂದು ಹೇಳಿದರೆ ತಪ್ಪಾಗಲಾರದು
ಸ್ನೇಹಿತ ಬಂಧುಗಳೇ…!
“ಸಾಲಾ ಏಕ್ ಮಚ್ಚರ್ ಆದ್ಮಿ ಇಂನ್ಸಾನ್ಕೂ ಹಿಜಡಾ ಬನಾ ದೇತಾ ಹೈ !” ಹಿಂದಿ ಚಿತ್ರನಟ ನಾನಾ ಪಾಟೇಕರ್ ಡೈಲಾಗ್ ನಂತೆ ಒಬ್ಬ ಮನುವಾದಿ ಪುರಾಣಗಳು ಬರೆದು ಇಡೀ ದೇಶವನ್ನೇ ಹಾಳು ಮಾಡಿದ”ಎಂದು ಹೇಳಿದರೆ ತಪ್ಪಾಗಲಾರದು.ಬಂಧುಗಳೇ..!
ಮಠ ಮಂದಿರಗಳಲ್ಲಿ ಕುಳಿತು ದೇವರ ಹೆಸರು ಹೇಳುತ್ತಾ ಮಡಿ – ಮೈಲಿಗೆ ಎಂದು ಮೇಲು-ಕೀಳು, ವರ್ಣ- ಅಸ್ಪೃಶತೆ ಆಚರಿಸುತ್ತಿರುವ ಮನುವಾದಿ ಜನರಿಗೆ ನನ್ನ ಕೆಲ ಪ್ರಶ್ನೆಗಳು-
೧.ಮಹಮ್ಮದ್ ಬಿನ್ ಖಾಸಿಂ ಮತ್ತು ಘಜ್ನಿ ಮಹಮ್ಮದರಂಥ ಮುಸ್ಲಿಮರು ಹತ್ತಾರು ಬಾರಿ ನಿಮ್ಮ ದೇವಾಲಯಗಳನ್ನು ಧ್ವಂಸಗೊಳಿಸಿ ಅಪಾರವಾದ ಸಂಪತ್ತನ್ನು ಲೂಟಿಮಾಡಿ ತಮ್ಮ ದೇಶಕ್ಕೆ ಹೊತ್ತೊಯ್ಯುವಾಗ, ಪರಮ ಶಕ್ತಿಯುಳ್ಳ ನಿಮ್ಮದೇವರಗಳು ಅವರನ್ನು ಯಾಕೆ ತಡೆಯಲಿಲ್ಲ ?
೨.ಅಲ್ಲಾವುದ್ದೀನ್ ಖಿಲ್ಜಿ ಅಂತಹವರು ನಿಮ್ಮ ಹುಟ್ಟಡಗಿಸಿ, ನಿಮ್ಮ ಹೆಂಡತಿ- ಮಕ್ಕಳನ್ನು ಬಲಾತ್ಕರಿಸಿ, ನಿಮ್ಮ ರಾಜ್ಯ ತಮ್ಮದಾಗಿಸಿಕೊಂಡರಲ್ಲ,ಆಗ ನಿಮ್ಮ ಪೌರುಷ ಎಲ್ಲಿ ಹೋಗಿತ್ತು ?
೩.ನಿಮ್ಮ ಪರಾಕ್ರಮ ಕೇವಲ ಶೂದ್ರ- ದಲಿತ ಜನರಿಗೆ ಮಾತ್ರ ಮೀಸಲಾಗಿತ್ತಾ-ಹೇಗೆ ?
ಥೂ…! ಧಿಕ್ಕಾರವಿರಲಿ ನಿಮ್ಮಂಥ ನಪುಂಸಕರಿಗೆ . ಬಹುಜನ ಭಾರತೀಯರು ಜಾಗೃತಗೊಳ್ಳುವ ಕಾಲ ಸನಿಹವಾಗುತ್ತಿದೆ.
ಇನ್ನೂ ಕಾಲ ಮಿಂಚಿಲ್ಲ . ಈಗಲಾದರೂ ಶೀಘ್ರದಲ್ಲಿಯೇ ಎಚ್ಚೆತ್ತುಕೊಂಡು ಠಕ್ಕ ನರಿಯಂತೆ ಬಾಳುವುದನ್ನು ನಿಲ್ಲಿಸಿ. ಒಳ್ಳೆ ಮನುಷ್ಯರಾಗಿ ಬಾಳಲು ಪ್ರಯತ್ನಿಸಿ. ದೇಶದಲ್ಲಿ ಕೋಮು ಗಲಭೆಗೆ ಕಾರಣರಾಗದೆ ಜಾತಿ ಧರ್ಮ ಬೇಧ- ಭಾವ ಮಾಡದೇ ನಾವೆಲ್ಲರೂ ಒಂದೇ ನಾವೂ ಭಾರತೀಯರೆಂಬ ಅಭಿಮಾನದಿಂದ ಬಾಳಿ ಬದುಕಿ. ಎಲ್ಲರೊಂದಿಗೆ ಸ್ನೇಹ ಸಹೋದರತೆಯಿಂದ ಜೀವನ ಸಾಗಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
- ಜಿ.ಎಲ್.ನಾಗೇಶ,
ಧನ್ನೂರ(ಆರ್)- ೫೮೫೩೩೦
ಬಸವಕಲ್ಯಾಣ ತಾಲೂಕು
ಬೀದರ್ ಜಿಲ್ಲೆ
