ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿಯ ಆಜೂರು ತೋಟದ ಮಹಾಮನೆಯಲ್ಲಿ ಆಜೂರು ಪ್ರತಿಷ್ಠಾನವು ಹಮ್ಮಿಕೊಂಡಿದ್ಧ ಲಿಂ.ರಾಮಪ್ಪ ಆಜೂರು,ಲಿಂ ಗಂಗಮ್ಮ ಆಜೂರು 35ನೇ ಗಂಗಾರಾಮೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಉತ್ತಮ ಪುಸ್ತಕ ರಚನೆಗಾಗಿ ಸಾಹಿತಿಗಳಿಗೆ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ಕನ್ನಡ ವರ್ಣಾಕ್ಷರಗಳಲ್ಲಿ ಅಕ್ಷರ ಭಾಗ್ಯ ಚುಟುಕು ಕಾವ್ಯ ಕೃತಿ ರಚನೆಯ ಕವಯಿತ್ರಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದ ಶ್ರೀಮತಿ ಭಾಗ್ಯ ಶ್ರೀ ಗವಿಶಿದ್ಧಯ್ಯ ಹಳ್ಳಿಕೇರಿಮಠ ಅವರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಷ.ಶಿ.ಡಾ.ಮುರಾಘರಾಜೇಂಧ್ರ ಮಹಾಸ್ವಾಮಿಗಳು ಮುಗಳಖೋಡ, ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಹಂದಿಗುಂದ,ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಬೆಲ್ಲದ ಬಾಗೇವಾಡಿ, ಪೂಜ್ಯ ಶ್ರೀ ಪ್ರಭು ಸ್ವಾಮಿಗಳು ಚಿಮ್ಮಡ, ಪೂಜ್ಯ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ವಿರಕ್ತಮಠ ಬೆಂಡವಾಡ, ಪೂಜ್ಯ ಶ್ರೀ ಮಹಾಂತ ಸ್ವಾಮಿಗಳು ವಿರಕ್ತಮಠ ಶೇಗುಣಿಸಿ, ಪೂಜ್ಯ ಶ್ರೀ ನಾರಯಣ ಶರಣರು ಗೋಕಾಕ, ಪೂಜ್ಯ ಶ್ರೀ ಶಶಿಕಾಂತ ಗೂರಜಿ ದರೂರು, ಪೂಜ್ಯ ಶ್ರೀ ಈರಯ್ಯ ಸ್ವಾಮಿಗಳು ಖಣದಾಳ, ಪೂಜ್ಯ ಶ್ರೀ ಚಿದಾನಂದ ಹುಬ್ಬಳ್ಳಿ ಶರಣರು , ಬಳ್ಳಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ರುದ್ರಪ್ಪ ನಿಷ್ಠಿ.ಎಸ್ ಆರ್ ಹೀರೆಮಠ ಆಜೂರು ಪ್ರತಿಷ್ಠಾನದ ಅಧ್ಯಕ್ಷರಾದ ಬಸವರಾಜ ಆಜೂರು ಸೇರಿದಂತೆ ಕವಿಗಳು ,ಕಲಾವಿದರು ಪಾಲ್ಗೊಂಡಿದ್ದರು.
ದಿನಾಂಕ -3-2-2025
ಬಿ.ಆಜೂರು,
ಆಜೂರು ಪ್ರತಿಷ್ಠಾನ ಹಾರೋಗೇರಿ
Ph – 9980248730.
9481448808.
