ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಹೊರ ವಲಯದ ಹುಣಸೆಮರ ಪಟ್ಟಣದ ಯಲ್ಲಮ್ಮ ದೇವಿ ದೇವಸ್ಥಾನದ ಎದುರುಗಡೆ, ಇರುವ ಬೇವಿನ ಮರದಲ್ಲಿ ಹಾಲಿನ ರೂಪದಲ್ಲಿ ಹರಿಯುತ್ತಿರುವ ನೊರೆ – ದ್ರವ ಪದಾರ್ಥದ ಹಾಲು.
ಶುಕ್ರವಾರ ಸಾಯಂಕಾಲ 4:30 ನಿಮಿಷದ ಸುಮಾರಿಗೆ ಬೇವಿನ ಮರದಲ್ಲಿ ಹಾಲಿನ ರೂಪದ ದ್ರವ ರೂಪ ಉಕ್ಕಿ ಹರಿದು ಕೆಳಗೆ ಬೀಳುತ್ತಿರುವುದನ್ನು ನೋಡಿ ಸಾವಿರಾರು ಜನ ಜಮಾಯಿಸಿ ನಾನಾ ರೀತಿಯ ಚರ್ಚೆಗಳನ್ನು ಮಾಡಿದರು.
ಹಾಲು ಸುರಿಯುತ್ತಿದ್ದಂತೆ ಕೆಲವೇ ಕ್ಷಣದಲ್ಲಿ ಸುದ್ದಿ ವ್ಯಾಪಕವಾಗಿ ಹರಡಿದೆ ಇದರಿಂದ ದೊಡ್ಡ ಪವಾಡ ನಡೆಯುತ್ತಿದೆ ಎಂದು ಆಶ್ಚರ್ಯಕರ ಭಾವನೆಯಲ್ಲಿ ಸುತ್ತಮುತ್ತಲಿನ ಜನರು ಬಂದಿದ್ದಾರೆ.! ಇವರುಗಳು ಪೈಕಿ ಅನೇಕರು ಇದು ದೈವ ಸ್ವರೂಪಿ ಮರ ಎಂದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.
ವರದಿ: ಚಂದ್ರಶೇಖರ ಪಾಟೀಲ್ ಜೇವರ್ಗಿ
