ಕೊಪ್ಪಳ :ಕನ್ನಡ ಶಬ್ದವನ್ನೇ ಸರಿಯಾಗಿ ಬರೆಯಲು ಬಾರದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯಲು ಅರ್ಹವಾಗಿಲ್ಲ ಎಂದು ಜೈ ಕರುನಾಡು ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಧ್ಯಕ್ಷರಾದ ಚನ್ನಬಸವರಾಜ ಕಳ್ಳಿಮರದ ಕಿಡಿಕಾರಿದರು ಕಳೆದ ಮೂರು ದಿನಗಳ ಹಿಂದೆ ಕಾರಟಗಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶುಭವಾಗಲಿ ಎಂದು ಬರೆಯಲು ಒದ್ದಾಡಿದ್ದನ್ನು ರಾಜ್ಯದ ಜನತೆಯೇ ನೋಡಿದ್ದು ಹಾಗಾಗಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿದರು.
