ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಿತ್ಯೋತ್ಸವದ ಕವಿ ನಿಸಾರ್ ಅಹಮದ್

ಬಳ್ಳಾರಿ / ಕಂಪ್ಲಿ: ಜೋಗದ ಸಿರಿ ಬೆಳಕನ್ನು, ತುಂಗಾ ತೀರದ ತೆನೆಗಳ ಬಳುಕುವಿಕೆಯಲ್ಲಿ ಅಡಗಿರುವ ಸೊಬಗನ್ನು, ಸಹ್ಯಾದ್ರಿಯ ಉತ್ತುಂಗವನ್ನು ನಾಡಿನುದ್ದಗಲಕ್ಕೂ ಪರಿಚಯಿಸಿದ, ಕುರಿಗಳಂತೆ ನಮ್ಮೊಳಗಡಗಿರುವ ಅಮಾಯಕ ಮನಸ್ಥಿತಿಯನ್ನು ತಮ್ಮ ವಿಭಿನ್ನ ವಿಡಂಬನಾ ಶೈಲಿಯಲ್ಲಿ ಕಟ್ಟಿಕೊಟ್ಟ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಎಂದು ಶಿಕ್ಷಕಿ ವರ್ಷಾ ಮಂಜುಮದಾರ್ ಅಭಿಪ್ರಾಯ ಪಟ್ಟರು. ಅವರು ಇಲ್ಲಿನ ಕೋಟೆಯ ಶ್ರೀ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕೆ ಎಸ್ ನಿಸಾರ್ ಅಹಮದ್ ಅವರ ಜನ್ಮ ದಿನಾಚರಣೆಯ ಕುರಿತು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾಡಿ ಮಾತನಾಡುತ್ತಾ ತಮ್ಮ 10ನೇ ವಯಸ್ಸಿನಿಂದಲೇ ಬರವಣಿಗೆಯ ಗೀಳು ಹತ್ತಿಸಿಕೊಂಡ ನಿಸಾರ್ ಅಹ್ಮದ್ ಅವರು 21 ಕವನ ಸಂಕಲನಗಳು, 14 ವೈಚಾರಿಕೆ ಕೃತಿಗಳು, ತಲಾ ಐದು ಮಕ್ಕಳ ಸಾಹಿತ್ಯ ಹಾಗೂ ಅನುವಾದ ಕೃತಿಗಳು ಹಾಗೂ 13 ಸಂಪಾದನಾ ಗ್ರಂಥಗಳನ್ನು ಸಾಹಿತ್ಯ ಲೋಕಕ್ಕೆ ಕೊಟ್ಟುಹೋಗಿದ್ದಾರೆ. ಅವರು ರಚಿಸಿದ ಸಾಹಿತ್ಯ, ಭಾವಗೀತೆಗಳು ನಮ್ಮ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತವೆ ಸರಳ ಹಾಗೂ ಹೃದಯಸ್ಪರ್ಶಿ ಭಾಷೆಯ ಮೂಲಕ ಕನ್ನಡ ಕಾವ್ಯ ಲೋಕಕ್ಕೆ ‘ನಿತ್ಯೋತ್ಸವ‘ದ ರಂಗು ತುಂಬಿದ ನಿಸಾರ್ ಅವರು
ಥಳುಕು ಬಳುಕಿನಿಂದ ಹಿಡಿದು ಶಿವಮೊಗ್ಗೆಯಲ್ಲಿ ಜುಲೈನಲ್ಲಿ ಕಾಣಿಸುವ ಸೋನೆ ಮಳೆಯ ವೈಭವದವರೆಗಿನ ನಿತ್ಯವೂ ಎದುರಾಗುವ ಪ್ರಸಂಗಗಳನ್ನೇ ಬಳಸಿ ಕವಿತೆ ಹೊಸೆಯುತ್ತಾ, ಸಂಬಂಧಗಳ ಮಹತ್ವ ತಿಳಿಸುತ್ತಾ, ಬದುಕಿನಲ್ಲಿ ಸಾರ್ಥಕತೆಯತ್ತ ಹೆಜ್ಜೆ ಹಾಕುವ ಪರಿಯನ್ನು ಹೇಳಿಕೊಟ್ಟ ಮಗು ಮನಸ್ಸಿನ ಕವಿ ಅನಂತತೆಯನ್ನು ಮನಸ್ಸಿಗೆ ಕಚಗುಳಿ ಇಡುವ ಹೊಸಬಗೆಯ ಕವಿತೆಗಳು, ಚಿಂತನೆಗೆ ಒರೆಹಚ್ಚುವ ವೈಚಾರಿಕ ಬರಹಗಳು ಹಾಗೂ ಮಕ್ಕಳ ಸಾಹಿತ್ಯ ಕೃತಿಗಳ ಮೂಲಕ ಅವರು ಕನ್ನಡಿಗರ ಮನಸುಗಳಲ್ಲಿ ನಿತ್ಯೋತ್ಸವವಾಗಿಯೇ ಸದಾ ಉಳಿಯಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖ್ಯಗುರು ಬಡಿಗೇರ್ ಜಿಲಾನಸಾಬ್, ಕೆ .ಶ್ವೇತಾ, ಕೋಲ್ಕರ ಉಮಾ, ಮುಸ್ಕಾನ, ಸುನಿತಾ, ಮಣ್ಣೂರ ಲಕ್ಷ್ಮಿ , ಜೆ ಅಕ್ಷತಾ, ಗೌಸಿಯ ಸೇರಿದಂತೆ ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ