ಅರಿಶಿನ ಎಂದರೆ ಎಲ್ಲರಿಗೂ ಗೊತ್ತು, ಆಡು ಮುಟ್ಟದ ಸೊಪ್ಪಿಲ್ಲ ಹಾಗೆ ಅರಿಶಿನವಿಲ್ಲದ ಅಡುಗೆ ಮನೆಯಿಲ್ಲ ಎನ್ನಬಹುದು.
ಅರಿಶಿನ ಕುರ್ಕ್ಯೂಮ್ ಲಾಂಗ್ ಸಸ್ಯ ಕುಟುಂಬಕ್ಕೆ ಸೇರುತ್ತೆ. ಭಾರತದಲ್ಲಿ ಸಾಂಬಾರ ಪದಾರ್ಥವಾಗಿ ಬೆಳೆಯುತ್ತಾರೆ. ಆರೋಗ್ಯ ಕೆಟ್ಟಿತೆಂದು ಆಸ್ಪತ್ರೆಗೆ ಓಡುವುದೇಕೆ.!.?…ಮನೆಯಲ್ಲೇ ಇರುವ ಅರಿಶಿನವನ್ನು ಅಗತ್ಯಕ್ಕೆ ತಕ್ಕಂತೆ ಬಳಸೋಣ.
ಅರಿಶಿನವು ಹಲವು ಪೋಷಕಾಂಶಗಳ ಆಗರವಾಗಿದೆ, ಅವು ಇಂತಿವೆ
- ಕರ್ಕ್ಯೂ ಮಿನ್ ಅರಿಶಿನದಲ್ಲಿರುವ ರಾಸಾಯನಿಕ ಸಂಯುಕ್ತವಾಗಿದೆ.
- ಅರಿಶಿನವು B೬ ಮತ್ತು ಕಾಲ್ ಯಂತಹ ವಿಟಮಿನ್ಗಳನ್ನು ಹಾಗೂ ಮ್ಯಾಂಗನಿಸ್ ಖನಿಜಗಳನ್ನು ಹೊಂದಿದೆ.
- ದಯೆಟರಿ ಫೈಬರ್ ಅರಿಶಿನದಲ್ಲಿ ಹೇರಳವಾಗಿದೆ.
- ಅರಿಶಿನವು ಆರೋಮ್ಯಾಟಿಕ್ ಎಸೆನಷಿಯಲ್ ಎಣ್ಣೆಯನ್ನು ಹೊಂದಿದೆ.
- ಕರ್ಕ್ಯೂ ಮ್ ನಾಯಡ್ಗಳನ್ನು ಹೇರಾಳವಾಗಿ ಹೊಂದಿವೆ.
ಈಗ ಪ್ರಮುಖವಾಗಿ ಅರಿಶಿನದ ಮಹತ್ವ ತಿಳಿಯೋಣ
- ಅರಿಶಿನವು ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ನಮ್ಮ ದೇಹವು ಸೋಂಕುಗಳ ವಿರುದ್ಧ ಹೋರಾಡಲು ಹೆಚ್ಚು ಸಹಾಯ ಮಾಡುತ್ತದೆ.
•ಅರಿಶಿನವು ಉರಿಯುತದ ಲಕ್ಷಣ ಹೊಂದಿರುವುದರಿಂದ ಕೀಲು ಹಾಗೂ ಸ್ನಾಯುನೋವಿನ ಭಾಗಕ್ಕೆ ಶ್ರೀಗಂಧದೊಂದಿಗೆ ತೇದು ಲೇಪನ ಮಾಡಿಕೊಳ್ಳುವುದರಿಂದ ನೋವನ್ನು ಶಮನಗೋಳಿಸುತ್ತದೆ.
•ಕರ್ಕ್ಯೂ ಮಿನ್ ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿ ಕೆಲಸ ಮಾಡುತ್ತದೆ.
•ಕೊಲೆಸ್ಟ್ರಾ ಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ
•ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಕೆಲವು ಅಧ್ಯಯನದ ಪ್ರಕಾರ ಅರಿಶಿನ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. - ಚರ್ಮದ ಮೇಲೆ ಅರಿಶಿನ ಹಚ್ಚಿಕೊಳ್ಳುವುದರಿಂದ ಈಗಾಗಲೇ ಇರುವ ಮೊಡವೆಗಳನ್ನು ನಿವಾರಿಸುತ್ತದೆ. ಅಲ್ಲದೆ ಮೊಡವೆ ಬರದಂತೆ ತಡೆಯುತ್ತದೆ.
ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಎಣ್ಣೆಯುಕ್ತ ಚರ್ಮದವರು ನೀರು ಅಥವಾ ಶ್ರೀಗಂಧದಲ್ಲಿ ತೇದು ಹಚ್ಚಬೇಕು.
ಒಣ ಚರ್ಮದವರು ಮೊಸರು ಅಥವಾ ಕೊಬ್ಬರಿ ಎಣ್ಣೆಯೊಂದಿಗೆ ಬೆರಸಿ ಹಚ್ಚಿಕೊಳ್ಳುವುದು ಉತ್ತಮ.
*ಮಧುಮೇಹ, ಕ್ಯಾನ್ಸರ್ ನಂತಹ ಕಾಯಿಲೆ ಸುಧಾರಿಸಲು ಸಹಾಯ ಮಾಡುತ್ತದೆ.
*ಸಣ್ಣ ಪುಟ್ಟ ಗಾಯಗಳಿಗೆ ಅರಿಶಿನ ಹಚ್ಚುವುದರಿಂದ ರಕ್ತಸ್ರಾವ ತಡೆಯುವುದಲ್ಲದೆ. ಗಾಯವಾಸಿಯಾಗುವರೆಗೆ ಹಚ್ಚುವುದರಿಂದ ಬೇಗ ಗಾಯ ಮಾಯವಾಗುತ್ತದೆ.
ಅಡುಗೆ ಮನೆಯ ಸಂಗಾತಿಯಾದ ಅರಿಶಿನವನ್ನು ಪ್ರತಿನಿತ್ಯ ಒಂದಿಲ್ಲೊಂದು ರೀತಿ ಅಡುಗೆಗೆ ಬಳಸುತ್ತಿರುತ್ತೇವೆ.
ಅವುಗಳನ್ನು ಮತ್ತೆ ಯಾವ ರೀತಿ ಆರೋಗ್ಯಕ್ಕಾಗಿ ಬಳಸಬಹುದೆಂದರೆ
*ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ನೀರಿನಲ್ಲಿ ಚಿಟಕಿ ಅರಿಸಿನ ಸೇರಿಸಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಚಿಟಕಿ ಅರಿಸಿನ ಸೇರಿಸಿ ಕುಡಿಯಬೇಕು.
ಇದರಿಂದ ಆರಾಮದಾಯಕ ನಿದ್ರೆ ಬರುತ್ತದೆ. ಹಾಗೆ ಖಿನ್ನತೆಯಂತಹ ಮಾನಸಿಕ ಕಾಯಿಲೆಯನ್ನು ತಡೆಗಟ್ಟುತ್ತದೆ.
*ಶೀತ ಕಫ ಆಗಿದ್ದಾಗ ಬಿಸಿನೀರಿಗೆ ಅರಿಸಿನ ಹಾಕಿ ಮುಖಕ್ಕೆ ಹಬೆ ತೆಗೆದುಕೊಳ್ಳಬಹುದು.
*ಬಾಂಣಂತಿಯರು ಕೊಬ್ಬರಿ ಎಣ್ಣೆಗೆ ಅರಿಶಿನ ಸೇರಿಸಿ ತೈಲ ಸ್ನಾನ ಮಾಡುವುದರಿಂದ ಗರ್ಭಾವಸ್ಥೆಯಲ್ಲಿ ಆಗಿದ್ದ ದೇಹದ ಡೊಳ್ಳುತನ ಬಿಗಿಯುವಂತೆ ಮಾಡುತ್ತದೆ. ಜೊತೆಗೆ ಹೊಟ್ಟೆಭಾಗದ ಗೆರೆಗಳು ಹೋಗುತ್ತವೆ.
*ಮನೆಯಲ್ಲಿ ಅರಿಶಿನಪುಡಿ ಸಿಂಪಡಿಸುವುದರಿಂದ ಸೊಳ್ಳೆ, ಜಿರಳೆ, ನುಸಿ ಕಾಟಗಳಿಂದ ತಪ್ಪಿಸಿಕೊಳ್ಳಬಹುದು.
ಅತಿಯಾದರೆ ಅಮೃತವೂ ವಿಷ ಹಾಗೆ ಅರಿಶಿನವನ್ನು ಹಿತಮಿತವಾಗಿ ಬಳಸಬೇಕು.
•ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇರುವವರು ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
•ಅರಿಶಿನ ಉಷ್ಣಕಾರಿಯಾಗಿವುದರಿಂದ ಬೇಸಿಗೆಯಲ್ಲಿ ಸ್ವಲ್ಪ ಕಡಿಮೆ ಬಳಸಬೇಕು.
ಕೊಂಬು ಅರಿಸಿನ ಬಳಸುವುದರಿಂದ ದುಷ್ಪರಿಣಾಮಗಳು ಇರುವುದಿಲ್ಲ.
ಇನ್ನು ಪ್ರಥಮ ಚಿಕಿತ್ಸೆಗಾಗಿ ನಮ್ಮ ಜೇಬಿನಲ್ಲಿ ಅಥವಾ ಕೈ ಚೀಲದಲ್ಲಿ ಅರಿಶಿನ ಪುಡಿ ಪೊಟ್ಟಣ ಇಟ್ಟುಕೊಂಡಿರೋಣ.
ಇಂಥ ಅತ್ಯುಪಯುಕ್ತವಾದ ಅರಿಶಿನವನ್ನು ಹದವರಿತು ಬಳಸೋಣ. ಆರೋಗ್ಯ ಕಾಪಾಡಿಕೊಳ್ಳೋಣ ಏನಂತೀರಾ.
✍️ ಭವ್ಯ ಸುಧಾಕರ ಜಗಮನೆ
