
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿ ಗ್ರಾಮದ ಎಲ್ಲಾ ಪ್ರಮುಖ ಬೀದಿಗಳಲ್ಲಿ ಕಸದ ರಾಶಿಗಳು ಹಾಗೂ ಚರಂಡಿಗಳು ತುಂಬಿ ಗಬ್ಬು ನಾರುತ್ತಿದೆ ಇದನ್ನು ಪ್ರಶ್ನೆ ಮಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಳಿ ಹೋದರೆ ಗ್ರಾಮಸ್ಥರಿಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುಂಟು ನೆಪಗಳನ್ನು ಕೊಡುತ್ತಾ ನಮ್ಮಲ್ಲಿ ಕಸ ವಿಲೇವಾರಿ ಮಾಡುವ ವಾಹನಕ್ಕೆ ಚಾಲಕರಿಲ್ಲ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ನಮ್ಮ ಮಾತುಗಳನ್ನು ಕೇಳುವುದಿಲ್ಲ ಎಂದು ಕುಂಟು ನೆಪಗಳನ್ನು ಇಡುತ್ತಾ ಪಂಚಾಯಿತಿಯಲ್ಲಿ ಜವಾಬ್ದಾರಿಯಿಂದ ಇಲ್ಲದೆ ಕಾಟಾಚಾರಕ್ಕೆ ಕೆಲಸ ಮಾಡುತ್ತಿದ್ದಾರೆ.

ಇನ್ನೂ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಗ್ರಾಮದ ಶಾಲಾ ಮಕ್ಕಳಿಗೆ ಗ್ರಾಮದ ಯುವಕರಿಗೆ ಈ ರೀತಿ ಚರಂಡಿಯಲ್ಲಿ ಬರುವಂತಹ ಕೊಳಚೆ ನೀರುಗಳಿಂದ ಹಾಗೂ ಕಸದ ರಾಶಿಗಳಿಂದ ಅನೇಕ ಕಾಯಿಲೆಗಳು ಬಂದು ಗ್ರಾಮದಲ್ಲಿ ತುಂಬಾ ರೋಗ ರುಜಿನಗಳು ಬರುವ ಸಂಭವ ಇದೆ ಗ್ರಾಮದ ಸುಖ ಸಂತೋಷ ಕಿತ್ತು ಕೊಳ್ಳುವಂತ ದಿನಗಳು ದೂರ ಇಲ್ಲ ಆದ್ದರಿಂದ ಮಾಂಬಳ್ಳಿ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟವರು ಹಾಗೂ ಸಂಭಂದಪಟ್ಟ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಗ್ರಾಮದ ಸ್ವಚ್ಛತೆ ಕಾಪಾಡಬೇಕು ಹಾಗೂ ಇಂತಹ ನಿರ್ಲಕ್ಷ್ಯ ಮಾಡುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೆ ಪಂಚಾಯತಿಗಳಲ್ಲಿ ಕೆಲಸ ಮಾಡದ ಅಭಿವೃದ್ಧಿ ಅಧಿಕಾರಿಗಳನ್ನು ಜನಪ್ರತಿನಿಧಿಗಳು ಹಾಗೂ ಕ್ಷೇತ್ರದ ಶಾಸಕರು ಇಂತಹ ಅಭಿವೃದ್ಧಿ ಅಧಿಕಾರಿಗಳಿಗೆ ಚಳಿ ಬಿಡಿಸಬೇಕು,
ಹಾಗೆಯೇ ಗ್ರಾಮದಲ್ಲಿ ಇಷ್ಟಿದ್ದರೂ ಮೂಗು ಮುಚ್ಚಿ ಶಾಲಾ ಮಕ್ಕಳು ಪಾಠ ಕೇಳಬೇಕು, ಹಾಗೆಯೇ ವಯೋ ವೃದ್ಧರು ಉಸಿರು ಕಟ್ಟಿ ಬದುಕಬೇಕು ಇಂಥ ಸುಖಕ್ಕೆ ಯಾಕೆ ಬೇಕು ಗ್ರಾಮಕ್ಕೆ ಪಂಚಾಯ್ತಿ ಚುನಾವಣೆ ಅಭಿವೃದ್ಧಿ ಅಧಿಕಾರಿಗಳು ಎನ್ನುವುದು ಸ್ಥಳೀಯ ಗ್ರಾಮಸ್ಥರ ಪ್ರಶ್ನೆಯಾಗಿದೆ.
ವರದಿ ಉಸ್ಮಾನ್ ಖಾನ್
