ಹಾಸನ/ ಚನ್ನರಾಯಪಟ್ಟಣ:
ನಮ್ಮ ದೇಶದ ಸಂವಿಧಾನವು ಅತ್ಯಂತ ಶ್ರೇಷ್ಠ ಹಾಗೂ ಮಹತ್ವವನ್ನು ಹೊಂದಿದ್ದು ಇಂತಹ ಸಂವಿಧಾನವನ್ನು ನಾವೆಲ್ಲರೂ ರಕ್ಷಿಸಿಕೊಂಡು ಹೋಗಬೇಕಿದೆ ಇಂದಿನ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಇಲ್ಲದಂತಾಗಿದೆ. ಅದಕ್ಕಾಗಿ ಸಂವಿಧಾನದಲ್ಲಿರುವ ಪ್ರತಿಯೊಂದು ಕಾನೂನಿನ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗಾಗಿಯೇ ಅರಿವು ನೆರವು ಕಾರ್ಯಕ್ರಮ ಅಗತ್ಯ ವಾಗಿದೆ. ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಸರಿಯಾದ ಅರಿವನ್ನು ಮೂಡಿಸಬೇಕಿದೆ.
ಮೊಬೈಲ್‌ನ ದುಶ್ಚಟಕ್ಕೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು ಮೊಬೈಲ್‌ನ್ನು ಕೇವಲ ಧನಾತ್ಮಕವಾಗಿ ಉಪಯೋಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಶಿಕ್ಷಕರು ಹೇಳಬೇಕು, ಇಂದಿನ ವ್ಯವಸ್ಥೆಯಲ್ಲಿ ಕೆಲವರು ಸಂವಿದಾನವನ್ನು ಬದಲಾವಣೆಯ ಮಾತನ್ನು ಆಡುತ್ತಿದ್ದಾರೆ ಅಂತಹ ಮನಸ್ಥಿತಿ ಇರುವವರು ನಮ್ಮ ದೇಶದಲ್ಲಿ ಇರಲು ಅರ್ಹರಲ್ಲ, ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಯಲ್ಲಿಯೇ ಅಂಬೇಡ್ಕರವರ ಜೀವನ ಚರಿತ್ರೆ ಮತ್ತು ಸಂವಿಧಾನ ಎನ್ನುವುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಭಾರತ ದೇಶದ ದೊಡ್ಡ ಗ್ರಂಥವಾಗಿದೆ. ಸಂವಿಧಾನದಲ್ಲಿರುವ ನ್ಯಾಯಾಂಗ ಕಾರ್ಯಾಂಗ ಹಾಗೂ ಶಾಸಕಾಂಗ ಇನ್ನಿತರ ಅಂಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕಿದೆ ಸರಿಯಾದ ರೀತಿಯಿಂದ ನಾವೆಲ್ಲರು ಕಾನೂನಿನ ಅಂಶಗಳೆಲ್ಲವನ್ನೂ ಪಾಲಿಸಿಕೊಂಡು ಕಾನೂನಿನ ರಕ್ಷಣೆಯ ಜೊತೆಗೆ ನಮ್ಮನ್ನು ನಾವೇ ರಕ್ಷಣೆ ಮಾಡಿಕೊಂಡು ಹೋಗಬೇಕು
1} ತಾಲೂಕಿನ ಶಿಕ್ಷಣ ಇಲಾಖೆಯು ತಾಲೂಕಿನ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಲು ಕಾಲೇಜಿನ ಮುಖ್ಯ ಪ್ರಾಂಶುಪಾಲರಿಗೆ ಶಾಲೆಯ ಶಿಕ್ಷಕರಿಗೆ ಒಂದು ಮಾರ್ಗದರ್ಶನ ನೀಡಬೇಕು
2} ತರಗತಿ ದಿನಗಳಲ್ಲಿ ಸಮಯದ ಅಭಾವದೊಂದಿಗೆ ಯಾವುದಾದರೂ ಒಂದು ಅವಧಿಗೆ ಒಂದು ಗಂಟೆಗಳ ಕಾಲ ವಾರದಲ್ಲಿ ಒಂದು ದಿನ ಶಿಕ್ಷಕರು ಕಾನೂನಿನ ಅರಿವು ಮತ್ತು ಸಮಾಜದಲ್ಲಿ ವಿದ್ಯಾರ್ಥಿಗಳ ಪಾತ್ರ ತಿಳಿಸಬೇಕು
ಶಿಕ್ಷಣ ಇಲಾಖೆಯ ಬಿಇಒ ಅವರು ದಯಮಾಡಿ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ಮಾರ್ಗದರ್ಶನ ನೀಡಬೇಕು ಶಿಕ್ಷಣ ಮುಖ್ಯ ವ್ಯವಸ್ಥಾಪಕರು ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಕಾಂಗ್ರೆಸ್ ಮಾನವ ಹಕ್ಕು ಆಯೋಗದ ಅಧ್ಯಕ್ಷರು ವರುಣ್ ಚಕ್ರವರ್ತಿ ಮತ್ತು ಸಾಮಾಜಿಕ ಹೋರಾಟಗಾರ ಮನೋಜ್ ನಾಯ್ಕ್. ಅಯೂಬ್. ಸಾಕಿಬ್. ಅಜನ್ ಉಪಸ್ಥಿತರಿದ್ದರು
