ಕಲಬುರಗಿ/ ಜೇವರ್ಗಿ: ಭಾರತೀಯ ಜನತಾ ಪಾರ್ಟಿ ಜೇವರ್ಗಿ ಮಂಡಲ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.
ರಾಷ್ಟ್ರದ ರಾಜ್ಯಧಾನಿ ರಾಜಕಾರಣದ ಕೇಂದ್ರ ಬಿಂದು ದೇಶದ ಚಿತ್ತ ದೆಹಲಿಯತ್ತ ಎನ್ನುವಂತೆ ಇಡೀ ದೇಶದ ಗಮನ ಸೆಳೆದ ದೆಹಲಿ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿ ಇತಿಹಾಸ ನಿರ್ಮಿಸಿದ ದೆಹಲಿಯ ಬಿಜೆಪಿ ನಾಯಕರಿಗೂ ಮತ್ತು ಕಾರ್ಯಕರ್ತರಿಗೆ ಅಭಿನಂದನೆಗಳು ಸಲ್ಲಿಸಿದರು.
ಯಾರು ಭ್ರಷ್ಟಚಾರದ ವಿರುದ್ಧ ಹೋರಾಟ ಮಾಡಿ ದೆಹಲಿಯ ಚುಕ್ಕಾಣಿ ಹಿಡಿದಿದ್ದಾರೋ ಅದೇ ವ್ಯಕ್ತಿ ಮತ್ತು ಆತನ ಮಂತ್ರಿ ಮಂಡಲದ ಭ್ರಷ್ಟಚಾರ ಆರೋಪದಲ್ಲಿ ಜೈಲು ಸೇರಿದರು. ಸ್ವತಃ ಕೇಜ್ರಿವಾಲ್ ನಾನು ಜನಸಾಮಾನ್ಯರ ಮುಖ್ಯಮಂತ್ರಿ ಅಂತ ಹೇಳುತ್ತಾ ಸಸ್ಯ ಶಾಮಲ ಅನ್ನುವಂತ ಸರ್ಕಾರಿ ಗೃಹ ಕಚೇರಿಯ ನವೀಕರಣಕ್ಕಾಗಿ ಖರ್ಚು ಮಾಡಿದ ದುಡ್ಡು 33 ಕೋಟಿ ರೂಪಾಯಿಗಳು.
ದೆಹಲಿ ಜನರ ಜೀವನಾಡಿಯಾದ ಯಮುನಾ ನದಿ ನೀರನ್ನು ಶುದ್ಧೀಕರಣ ಮಾಡಿ ಜನರ ದಾಹ ನೀಗಿಸುತ್ತಿನಿ ಎಂದು ಹೇಳಿ 15 ವರ್ಷ ಅಧಿಕಾರ ನಡೆಸಿ ಯಮುನೆಯ ಮಾಲಿನ್ಯಕ್ಕೆ ಕಾರಣೀಭೂತರಾದ ದಿ ಗ್ರೆಟ್ ಮ್ಯಾನ್ ಕೇಜ್ರಿವಾಲನ ಪೊಳ್ಳು ಭರವಸೆ ಇವತ್ತು ಸುಳ್ಳಾಗಿದೆ.
ಮತ್ತೊಮ್ಮೆ ಬಿಜೆಪಿ ದೆಹಲಿ ಕಾರ್ಯಕರ್ತರಿಗೆ ಶುಭವಾಗಲಿ ಎಂದು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ದೇವೇಂದ್ರ ಮುತ್ಕೋಡ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವಣಸಿದ್ದಪ್ಪ ಸಂಕಾಲಿ,ಮತ್ತೋರ್ವ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮರೆಪ್ಪ ಬಡಿಗೇರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ ಹಳ್ಳಿ, ಭಾಗೇಶ ಹೋತಿನಮಡು ಹಾಗೂ ಸಾಹೇಬಗೌಡ ಕಡಲಿ ವಕೀಲರು ತಿಪ್ಪಣ್ಣ ರಾಠೋಡ್, ಭೀಮಾಶಂಕರ ಯಲಗೋಡ್, ರಾಯಪ್ಪ ಕೊಳ್ಕೂರ್, ಈರಣ್ಣ ಯಾದವ, ಚಂದ್ರು ಮಲ್ಲಬಾದ, ಸಿದ್ದುಗೌಡ ಅವರಾದ, ಮಲಶೆಟ್ಟೆಪ್ಪಗೌಡ ಹಿರೇಗೌಡ, ಸುರೇಶ್ ವರ್ಚನಲ್ಲಿ, ಬಸವರಾಜ ಸಂಕಾಲಿ, ವಿಶ್ವ ಆಲೂರು, ಬಸುಗೌಡ ಚನ್ನೂರ, ಬಸವರಾಜ ಮದ್ರಕಿ, ಶಿವಾನಂದ ಹಾಗೂ ಇನ್ನಿತರ ಮಂಡಲದ ಮುಖಂಡರು ಕಾರ್ಯಕರ್ತರು ಈ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.
ವರದಿ: ಚಂದ್ರಶೇಖರ ಪಾಟೀಲ್, ಗುಡೂರ ಎಸ್ ಎನ್
