ಶಿವಮೊಗ್ಗ : ವ್ಯಕ್ತಿಯ ವಿಚಾರ ಯಾವಾಗಲೂ ಶುದ್ಧವಾಗಿರಬೇಕು ಎಂಬ ಅಣ್ಣಾ ಹಜಾರೆ ಅವರ ಮಾತು ಅಕ್ಷರಶಃ ಸತ್ಯವಾಗಿದೆ.
ದೇಶದ ಒಕ್ಕೂಟ ವ್ಯವಸ್ಥೆಯ ವಿರುದ್ಧ ನಡೆದುಕೊಳ್ಳುತ್ತಿದ್ದ ಪಕ್ಷಕ್ಕೆ ದೆಹಲಿಯ ಜನತೆ ತಕ್ಕ ಪಾಠ ಕಲಿಸಿದ್ದಾರೆ!
ಪ್ರಧಾನಿ ನರೇಂದ್ರಮೋದಿಯವರು 2025 ರಲ್ಲಿ ಅಲ್ಲ 2050ಕ್ಕೆ ದೆಹಲಿಯಲ್ಲಿ ಅಧಿಕಾರಕ್ಕೆ ಬರಬೇಕು ಎಂದರೆ, ಇನ್ನೊಂದು ಜನ್ಮವೇ ಹುಟ್ಟಿಬರಬೇಕು ಎಂದು ಹೇಳಿದ್ದ ಆಪ್ ನ ಮಹಾನ್ ನಾಯಕನನ್ನು (ಕೇಜ್ರಿವಾಲ್ ) ಇಂದು ಸೋಲಿಸುವ ಮೂಲಕ ದಿಲ್ಲಿ ಮತದಾರರು ದಿಟ್ಟ ಉತ್ತರ ನೀಡಿದ್ದಾರೆ!
ತುಕಡೆ ಗ್ಯಾಂಗ್ ನ ವಿಭಜಕ ರಾಜಕೀಯಕ್ಕಿಂತ ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ರಾಜಕಾರಣವನ್ನು ಜನರು ಆಯ್ಕೆ ಮಾಡಿದ್ದಾರೆ ಎಂಬುದನ್ನು ಇಂದಿನ ಫಲಿತಾಂಶಗಳು ಪ್ರತಿಬಿಂಬಿಸುತ್ತವೆ.
ಒಟ್ಟಾರೆ, ಹಗರಣಗಳ ‘ಪೊರಕೆ’ ಯನ್ನು ದೆಹಲಿಯ ಜನ ಅವರ ಪೊರಕೆಯಿಂದಲೇ ಗುಡಿಸಿ, ‘ಕೈ’ಗೆ ಕೈ ಕೊಡುವ ಮೂಲಕ ಆರ್ಯಭಟರ ‘0’ ಗೆ ಗೌರವಿಸಿ, ‘ಕಮಲ’ ಕ್ಕೆ ‘ಹಿಂದುತ್ವಕ್ಕೆ’ ಅಭೂತಪೂರ್ವ ಗೆಲುವಿನ ಸಿಹಿಯನ್ನು ತಿನ್ನಿಸಿದ್ದಾರೆ!
ದೆಹಲಿ ಅಧಿಕೃತ ಗೆಲುವಿಗೆ ಕಾರಣೀಕರ್ತರಾದ ಪಕ್ಷದ ನಾಯಕರಿಗೆ, ಹಗಲಿರುಳು ದುಡಿದ ಸಾವಿರಾರು ಕಾರ್ಯಕರ್ತರಿಗೆ ಹಾಗೂ ಮತದಾರ ಬಂಧುಗಳಿಗೆ ಅಭಿನಂದನೆಗಳನ್ನು ಶಿವಮೊಗ್ಗ ಶಾಸಕ ಶ್ರೀ ಎಸ್ ಏನ್ ಚನ್ನಬಸಪ್ಪ ಅವರು ತಿಳಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
