ಹೊಟ್ಟೆಗೆ ಹಸಿವಿತ್ತು,
ನಾಲಿಗೆಯು ಹೇಳಿತ್ತು
ಮೆದುಳಿನ ಬುದ್ಧಿಯು ಕೆಟ್ಟಿತು
ದೇಹಕ್ಕೆ ಆಯಾಸವಾಗಿತ್ತು
ಕ್ಷಣ ಕಾಲ ತಲೆ ತಿರುಗಿ ಬಿದ್ದಂತಾಯಿತು
ಮನಸೆ ನನ್ನ ಮಾತನ್ನು ಕೇಳಿದಂತಾಯಿತು
ನಾಲಿಗೆ ರುಚಿಯೂ ಕೇಳುವಂತಾಯ್ತು
ಮೂಗಿಗೆ ಗ್ರಹಿಸುವ ಶಕ್ತಿ ಇಲ್ಲದಂತಾಯ್ತು
ಯಾರು ಏನು ಹೇಳಿದರೇನು
ತಲೆ ಕೆಡಿಸಿಕೊಳ್ಳದಂತಹ ದೇಹ
ಬಿದ್ದಿದೆ ಸ್ವಾಧೀನ ಇಲ್ಲದಂತೆ ಕೆಳಗೆ ಇನ್ನು
ಉಪಕರಿಸಬೇಕಿದೆ ಮತ್ತೊಬ್ಬರು ಬಂದು ಇನ್ನು
- ಎಂ ಚಂದ್ರಶೇಖರ ಚಾರಿ ,ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ
