ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ಕ್ಯಾನ್ಸರ್ ಜಾಗೃತಿಗಾಗಿ ಸೈಕ್ಲೋಥಾನ್‌: ಚಳಿಬಿಟ್ಟು ಸೈಕಲ್‌ ತುಳಿದ ಜನತೆ

ಶಿವಮೊಗ್ಗ: ಭಾನುವಾರ ಬೆಳಿಗ್ಗೆ ಇಬ್ಬನಿ, ನಡುಗುವ ಚಳಿಯಲ್ಲಿ, ಶಿವಮೊಗ್ಗ ನಿವಾಸಿಗಳು ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರು ಸೇರಿ ನೂರಾರು ಸೈಕ್ಲಿಂಗ್ ಪ್ರೇಮಿಗಳು ಉತ್ಸಾಹ ಭರಿತರಾಗಿ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಶಿವಮೊಗ್ಗ ಸೈಕಲ್ ಕ್ಲಬ್ ಸಹಯೋಗದಲ್ಲಿ ಕ್ಯಾನ್ಸರ್‌ ಜಾಗೃತಿಗಾಗಿ ಆಯೋಜಿಸಲಾದ ಸೈಕ್ಲೋಥಾನ್ ನಲ್ಲಿ ಪಾಲ್ಗೊಂಡರು.

ಈ ಸೈಕ್ಲೋಥಾನ್‌ಗೆ ಎಲ್ಲಾ ವಯಸ್ಸಿನ ಸುಮಾರು 300 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಶಿವಮೊಗ್ಗ ಸೈಕಲ್ ಕ್ಲಬ್ ನಿರ್ದೇಶಕರಾದ ಡಾ. ಹೆಚ್.ಎಂ. ನಟರಾಜ್, ವಾಯುಪಡೆ ನಿವೃತ್ತ ಅಧಿಕಾರಿ ಹಾಗೂ ರಾಜ್ಯ ಲೆಕ್ಕಪತ್ರ ವಿಭಾಗದ ಮಾಜಿ ಜಾಯಿಂಟ್ ಕಂಟ್ರೋಲರ್, ಮತ್ತು ಡಾ. ಅಪರ್ಣ ಶ್ರೀವತ್ಸ, ಮೆಡಿಕಲ್‌ ಅಂಕೋಲೋಜಿಸ್ಟ್‌, ಎಸ್‌ಎನ್‌ಎಂಎಚ್‌, ಅವರು ಹಸಿರು ನಿಶಾನೆ ತೋರಿಸಿದರು.

ಸೈಕ್ಲೋಥಾನ್‌ವು ಕುವೆಂಪು ರಸ್ತೆಯ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನಿಂದ ಪ್ರಾರಂಭವಾಗಿ ಉಷಾ ನರ್ಸಿಂಗ್ ಹೋಮ್, ವಿನೋಬನಗರ ಪೋಲೀಸ್ ಠಾಣೆ, ಅಲ್ಕೋಲ್ ಸರ್ಕಲ್, ಗೋಪಾಳ್ ಬಸ್ ನಿಲ್ದಾಣ, ಎನ್.ಟಿ. ರಸ್ತೆ ಮೂಲಕ ಸಾಗಿ ಸಹ್ಯಾದ್ರಿ ನಾರಾಯಣ ಆಸ್ಪತ್ರೆ, ಹರಕೆರೆಯಲ್ಲಿ ಮುಕ್ತಾಯಗೊಂಡಿತು.

ಜನರನ್ನು ಉದ್ದೇಶಿಸಿ ಮಾತನಾಡಿದ ಡಾ. ಅಪರ್ಣಾ ಶ್ರೀವತ್ಸ ಕ್ಯಾನ್ಸರ್‌ನ ಮುನ್ಸೂಚನೆ ಮತ್ತು ತಡೆಗಟ್ಟುವಿಕೆ ಕುರಿತು ಮಾತನಾಡಿದರು. ಕೆಲವರಲ್ಲಿ ಕ್ಯಾನ್ಸರ್‌ಗೆ ಕಾರಣವೇನೆಂದು ತಿಳಿಯುವದಿಲ್ಲ ಆದರೆ ಇದು ಯಾರಿಗಾದರೂ ಬರುವ ಸಾಧ್ಯತೆ ಇದೆ, ಅನಾರೋಗ್ಯಕರ ಗಡ್ಡೆ, ಅನಿರೀಕ್ಷಿತ ರಕ್ತಸ್ರಾವ (ಮೂಗು, ಮೂತ್ರ ಅಥವಾ ಗುದದ್ವಾರದಿಂದ) ಕಂಡು ಬಂದರೆ ವೈದ್ಯಕೀಯ ಸಲಹೆ ಪಡೆಯುವುದು ಅಗತ್ಯ. 40 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ. ಅಪರ್ಣಾ ಶ್ರೀವತ್ಸ್‌ ಸಲಹೆ ನೀಡಿದರು.

ಸರ್ಜಿಕಲ್‌ ಅಂಕಾಲಿಜಿಸ್ಟ್‌ ಡಾ. ವಿವೇಕ್ ಎಂ.ಎ. ಅವರು ಮಾತನಾಡಿ, ಧೂಮಪಾನ, ಮದ್ಯಪಾನ, ಅನಾರೋಗ್ಯಕರ ಆಹಾರ ಪದ್ಧತಿ, ಚಟುವಟಿಕೆ ಇಲ್ಲದ ಜೀವನಶೈಲಿ ಮುಂತಾದವು ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳು. ಜನರು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಶಿಷ್ಟ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೆಲವು ಕ್ಯಾನ್ಸರ್‌ಗಳನ್ನು ಲಸಿಕೆ ಮೂಲಕ ತಡೆಯಬಹುದು ಎಂದು ಹೇಳಿದರು.

ಸೈಕ್ಲಿಂಗ್: ಆರೋಗ್ಯಕರ ಜೀವನದ ದಾರಿ

ಡಾ. ಹೆಚ್.ಎಂ. ನಟರಾಜ ಅವರು ಸೈಕ್ಲಿಂಗ್‌ನ ಸೌಂದರ್ಯ ಮತ್ತು ಪ್ರಯೋಜನಗಳನ್ನು ವಿವರಿಸಿದರು.

-ಸೈಕ್ಲಿಂಗ್ ಶಾರೀರಿಕ ಆರೋಗ್ಯದ ಅವಿಚ್ಛಿನ್ನ ಭಾಗವಾಗಿದೆ. “ಹಲವರು ನಾನು ಸೈಕ್ಲಿಂಗ್ ಮಾಡಲಾಗದು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ, ಆದರೆ ಇದು ಸುಳ್ಳು ಕಲ್ಪನೆ. ನಾನು ಈ ಇಳಿ ವಯಸ್ಸಿನಲ್ಲೂ ನಿರಂತರ ಸೈಕ್ಲಿಂಗ್ ಮಾಡುತ್ತೇನೆ ಮತ್ತು ಆಗಾಗ ನನ್ನ ಊರಿಗೂ ಸೈಕಲ್‌ನಲ್ಲಿ ಹೋಗುತ್ತೇನೆ,” ಎಂದು ಹೇಳಿದರು.

ವಿಶೇಷವಾಗಿ ಡಾಕ್ಟರ್‌ಗಳು ಸಹ ಸಾಧ್ಯವಾದಾಗ ಸೈಕ್ಲಿಂಗ್‌ ಅಥವಾ ಆಸ್ಪತ್ರೆಗೆ ಸೈಕಲ್‌ ಮೂಲಕ ತೆರಳುವಂತೆ ಕರೆ ನೀಡಿದರು.

  • “ಸೈಕ್ಲಿಂಗ್ ಕೇವಲ ಸಾರಿಗೆ ವಿಧಾನವಲ್ಲ, ಇದು ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುವ ಒಂದು ಸುಂದರ ವಿಧಾನ ,” ಎಂದರು.

ಈ ಸಮಾರಂಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ವರ್ಗೀಸ್ ಪಿ. ಜಾನ್, ಡಾ. ಶ್ರೀವತ್ಸ ನಾಡಿಗ್, ಡಾ. ರವಿ ಕೆ.ಆರ್., ಡಾ. ವಿಕ್ರಮ್ ಎಂ.ಜೆ., ಡಾ. ರಾಮಸುಂದರ್, ಮಾರ್ಕೇಟಿಂಗ್‌ ಜನರಲ್‌ ಮ್ಯಾನೇಜರ್‌ ರಾಜಸಿಂಗ್ ಎಸ್.ವಿ., ಮಾರ್ಕೆಟಿಂಗ್‌ ಮ್ಯಾನೇಜರ್‌ ಶೈಲೇಶ್ ಎಸ್.ಎನ್., ರೋಟರಿ ಕ್ಲಬ್ ಸದಸ್ಯರಾದ ವಿಜಯಕುಮಾರ, ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಈ ಸೈಕ್ಲೋಥಾನ್ ಕ್ಯಾನ್ಸರ್ ಜಾಗೃತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಮಹತ್ವದ ಸಂದೇಶವನ್ನು ಸಾರಲು ಯಶಸ್ವಿಯಾಯಿತು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ