ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಗೋಕುಲ ಪದವಿ ಮಹಾವಿದ್ಯಾಲಯದಲ್ಲಿಂದು ಶಹಾಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಹಯ್ಯಾಳಪ್ಪ ಸುರಪೂರಕರ್ ಅವರನ್ನು ಕಾಲೇಜು ಶಿಕ್ಷಣ ಇಲಾಖೆಯು ಇವರ ಶೈಕ್ಷಣಿಕ ಅಂತಸ್ತನ್ನು ಪರಿಗಣಿಸಿ ಸೇವಾ ನಿಯಮಗಳಿಗನುಗುಣವಾಗಿ ಪ್ರಾಧ್ಯಾಪಕರಾಗಿ ಬಡ್ತಿ ನೀಡಿದೆ. ಕ್ರಿಯಾಶೀಲ, ಬೌದ್ಧಿಕ ಉನ್ನತೀಕರಣದ ಪ್ರತೀಕದಂತಿರುವ ಶ್ರೀಯುತರು ಪ್ರಾಧ್ಯಾಪಕ ಹುದ್ದೆಗೇರಿದ್ದಕ್ಕೆ ಸಂತಸ ಪಡುತ್ತಾ ಜೇನುಗೂಡು ಮಕ್ಕಳ ಕವನ ಸಂಕಲನ ಪುಸ್ತಕ ನೀಡಿ ಗೌರವಿಸಿ ಶಾಲು ಹೊಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರಭುಗೌಡ, ಪ್ರಾಂಶುಪಾಲರಾದ ಎಂ.ಡಿ. ಇಮ್ರಾನ, ಇತಿಹಾಸ ಉಪನ್ಯಾಸಕರಾದ ಡಿ.ಪಿ.ಸಜ್ಜನ, ಧನರಾಜ ದೊಡ್ಮನಿ,ದೇವು ನಾಯಕ, ಹಣಮಂತ, ಪರಶುರಾಮ, ಕಾಶಿಂಸಾಬ, ಮಹೇಶ, ಶರಣಬಸಪ್ಪ, ಸಾಯಬಣ್ಣ, ಶಶಿಕುಮಾರ, ಶರಣಮ್ಮ, ಜ್ಯೋತಿ, ಸಂಗೀತ, ಸಿಬ್ಬಂದಿ ಅಡಿವೆಪ್ಪ ಮತ್ತು ಬಿ.ಎ / ಬಿ.ಕಾಂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
