ಚಾಮರಾಜನಗರ/ ಕೊಳ್ಳೇಗಾಲ : ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯ ಅವರ ಧರ್ಮಪತ್ನಿ ಹಾಗೂ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಆರ್. ಕೃಷ್ಣಮೂರ್ತಿ ಅವರ ತಾಯಿಯವರಾದ ಗೌರಮ್ಮನವರು ಶುಕ್ರವಾರ ಬೆಳಿಗ್ಗೆ 9 ಗಂಟೆಯಲ್ಲಿ ಮೈಸೂರಿನ ಅಪೊಲೋಚಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ವರಾಜಿ ಕಳೆದ ಹಲವು ದಿನಗಳಿಂದ
ವಯೋಸಹಜ ಗಂಭೀರ ಅನಾರೋಗ್ಯ ಸಮಸ್ಯೆಯಿಂದ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು ಅಲ್ಲಿನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗಿದೆ ಶುಕ್ರವಾರ ಬೆಳಿಗ್ಗೆ 9:00 ಗಂಟೆ ಸಮಯದಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ
ಮೃತ ಗೌರಮ್ಮ ರವರು ಮಕ್ಕಳಾದ ಎ.ಆರ್.ಉಮಾ, ಎ.ಆರ್ .ತ್ರಿವೇಣಿ. ಎ.ಆರ್.ವರಲಕ್ಷ್ಮಿ, ಹಾಗೂ ಅಳಿಯಂದಿರಾದ ಮಾಜಿ ಸಚಿವ ಬಿ.ಬಿ. ನಿಂಗಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಮರಿಸ್ವಾಮಿ, ಮಕ್ಕಳು ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.
ಮಾಜಿ ರಾಜ್ಯಪಾಲರಾದ ದಿವಂಗತ ಬಿ ರಾಚಯ್ಯರವರ ರಾಜಕೀಯ ಮುನ್ನುಡಿಗೆ ಬೆನ್ನೆಲುಬಾಗಿ ನಿಂತಂತಹ ಕೀರ್ತಿ ಪೂಜ್ಯನೀಯ ಧರ್ಮಪತ್ನಿ ಗೌರಮ್ಮ ರವರಿಗೆ ಸಲ್ಲುತ್ತದೆ ಹಾಗೂ ಅವರು ಮಾಡುವ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಸದಾ ಮಾರ್ಗದರ್ಶಕರಾಗಿ ರಾಜಕೀಯ ಏಳು ಬೀಳು ಸುಖ-ದುಃಖಗಳಲ್ಲಿ ಭಾಗಿಯಾಗಿದ್ದರು. ಹಾಗೆಯೇ ಕೊಳ್ಳೇಗಾಲ ಜನಪ್ರಿಯ ಶಾಸಕರಾದ ಎ. ಆರ್. ಕೃಷ್ಣಮೂರ್ತಿಯವರಿಗೂ ಕೂಡಾ ರಾಜಕೀಯ ಕ್ಷೇತ್ರದಲ್ಲಿ ಸ್ಫೂರ್ತಿಯಾಗಿ ಶಾಸಕರ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು ಅಂತಹ ಮಹ ತಾಯಿಯನ್ನು ಕಳೆದುಕೊಂಡ ಬಿ. ರಾಚಯ್ಯ ಕುಟುಂಬದವರು ಹಾಗೂ ಬಿ. ರಾಚಯ್ಯನವರ ಅಭಿಮಾನಿ ಬಳಗದವರ ದುಃಖ ಮುಗಿಲು ಮುಟ್ಟುವಂತಿದೆ.
ಮಾಜಿ ರಾಜ್ಯಪಾಲರಾದ ದಿ. ಬಿ. ರಾಚಯ್ಯನವರ ಧರ್ಮ ಪತ್ನಿ ಗೌರಮ್ಮ ನವರ ನಿಧನಕ್ಕೆ ಹನೂರು ಮಾಜಿ ಶಾಸಕರಾದ ಆರ್. ನರೇಂದ್ರ, ಕೊಳ್ಳೇಗಾಲ ಮಾಜಿ ಶಾಸಕರಾದ ಜಿ. ಎನ್. ನಂಜುಂಡಸ್ವಾಮಿ, ಚಾಮುಲ್ ನಿರ್ದೇಶಕರಾದ ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ರಾಜೇಂದ್ರ, ಮಧುವನಹಳ್ಳಿ ಶಿವಕುಮಾರ್ ಹಾಗೂ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿ: ಉಸ್ಮಾನ್ ಖಾನ್
