ಶಿವಮೊಗ್ಗ : ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಹಾಗೂ ಸಂಘಗಳ ಕಾರ್ಯದರ್ಶಿಗಳಿಗೆ ನಬಾರ್ಡ್ ಮತ್ತು ಡಿ ಸಿ ಸಿ ಬ್ಯಾಂಕಿಗೆ ನೂತನವಾಗಿ ಬಂದಿರುವ ಸಹಕಾರಿ ಕಾಯ್ದೆಗಳನ್ನು ಮತ್ತು ಬ್ಯಾಂಕಿನ ಯೋಜನೆಗಳನ್ನು ತಿಳಿಸುವ ಸಲುವಾಗಿ ಮೊದಲ ಪ್ರಯತ್ನವಾಗಿ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ ತದ ನಂತರ ಎರಡನೆಯದಾಗಿ ಸಾಗರ ಹೊಸನಗರ ಹಾಗೂ ಮೂರನೇದಾಗಿ ಸೊರಬ ಶಿಕಾರಿಪುರ ಸಹಕಾರಿಗಳಿಗೆ ಮಾಹಿತಿ ಕಾರ್ಯಾಗ್ರಹದ ಸಭೆಯನ್ನು ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶ್ರೀ ಆರ್ ಎಂ ಗೌಡರು ಯಶಸ್ವಿಯಾಗಿ ನಡೆಸಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಎಸ್ ಕೆ ಮರಿಯಪ್ಪ ಬ್ಯಾಂಕ್ ನ ಎಂ.ಡಿ. ಗಳಾದ ಅನ್ನಪೂರ್ಣಮ್ಮ ಹಾಗೂ ಎಲ್ಲಾ ನಿರ್ದೇಶಕರುಗಳು ಭಾಗವಹಿಸಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
