
ಯಾದಗಿರಿ ಜಿಲ್ಲೆಯ ಸುರಪುರ ನಗರದ ಕಬಡಗೇರ ಓಣಿಯ ಜಗನ್ಮಾತೆ ಕಾಳಮ್ಮ ದೇವಸ್ಥಾನದಿಂದ ತಿಂಥಣಿಗೆ ಶ್ರೀ ಸೂಗುರೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ದಿ. ಶ್ರೀಮತಿ ರಾಣಿ ಪಾಪಮ್ಮ ಜೇಜಾ ಅವರ ಸ್ಮರಣಾರ್ಥ ಅಂಗವಾಗಿ ಟ್ರಸ್ಟಿನ ಗೌರವಾಧ್ಯಕ್ಷರಾದ ಶ್ರೀ ರಾಜಾ ಸುಭಾಶ್ಚಂದ್ರ ನಾಯಕ ಹುಲಿಹೈದರ್ ಸಂಸ್ಥಾನ ಹಾಗೂ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ರಾಜಾ ಚನ್ನಪ್ಪ ನಾಯಕ ಅವರ ನೇತೃತ್ವದಲ್ಲಿ ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ R C ನಾಯಕ ಜನಸೇವಾ ಶೈಕ್ಷಣಿಕ ಟ್ರಸ್ಟ್ (ರಿ.) ವತಿಯಿಂದ ಭಕ್ತಾದಿಗಳಿಗೆ ಉಚಿತವಾಗಿ ತಂಪು ಪಾನೀಯ ವಿತರಿಸಲಾಯಿತು. ಕಾಳಮ್ಮ ದೇವಿ ದೇವಸ್ಥಾನದ ಅರ್ಚಕರಾದ ಮೌನೇಶ್ ಅವರು ಪೂಜೆ ನೆರವೇರಿಸಿದರು. ಯಾದಗಿರಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ರಾಜ ಕುಮಾರ್ ನಾಯಕ ಉದ್ಘಾಟಿಸಿದರು, ತಿಮ್ಮಪ್ಪ ನಾಯಕ ಸರ್ವ ಭಟ್ ಪಾನೀಯ ವಿತರಿಸಿದರು. ಈ ಸಂದರ್ಭದಲ್ಲಿ ಬಂಗಾರ ವ್ಯಾಪಾರಿಗಳ ದಿಲೀಪ್ ಕುಮಾರ್, ಕೊಡೆಕಲ್ ಪವನ್ ಕುಮಾರ್, ಕೊಡೆಕಲ್ ಪ್ರಭು ಪತ್ತರ್ ಹಾಗೂ ಟ್ರಸ್ಟಿನ ಸದಸ್ಯರಾದ ಶ್ರೀ ರಾಜಾ ಉಡಚಪ್ಪ ನಾಯಕ, ರಾಘವೇಂದ್ರ ನಾಯಕ, ಬಲಭೀಮ ನಾಯಕ, ನೀಲಕಂಠ, ಅಂಬರೀಶ್, ಪ್ರಕಾಶ್ ಹರ್ಷವರ್ಧನ್ ನಾಯಕ, ಆಕಾಶ್, ಭಾರತ್, ಋತಿಕ್ ನಾಯಕ, ಪ್ರಜ್ವಲ್, ಶ್ರೀರಾಮ್, ಲಕ್ಷ್ಯ ವ್ಯಾಸ ಇನ್ನಿತರರು ಭಾಗವಹಿಸಿದ್ದರು.
