
ಬೀದರ/ಬಸವಕಲ್ಯಾಣ : ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಯರಂಡಿಯಲ್ಲಿ 1 ಕೋಟಿ 9 ಲಕ್ಷ K.K.R.D.B ಮ್ಯಾಕ್ರೋ ಸಾಮಾಜಿಕ ಯೋಜನೆ ಅನುದಾನ ಅಡಿಯಲ್ಲಿ ದಿ. 10-02-2025 ರಂದು ಸ. ಮಾ.ಪ್ರಾ.ಶಾಲೆಯಲ್ಲಿ ಹುಮನಾಬಾದ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ 8 ಕೋಣೆಗಳ ಕಟ್ಟಡದ ನಿರ್ಮಾಣದ ಅಡಿಗಲ್ಲು ಸಮಾರಂಭವನ್ನು ಭೂಮಿ ಪೂಜೆಯೊಂದಿಗೆ ಉದ್ಘಾಟಿಸಿದರು.

ಶಾಸಕರು ಈ ಸಮಾರಂಭವನ್ನು ಕುರಿತು ಸುತ್ತ ಮುತ್ತ ಹಳ್ಳಿಯಲ್ಲಿ ಈ ಶಾಲೆಯ ಕಟ್ಟಡವು ಮಾದರಿಯಾಗುವಂತೆ ಕಟ್ಟಬೇಕು ಮತ್ತು ಆದಷ್ಟು ಬೇಗನೆ ಕಟ್ಟಡ ನಿರ್ಮಾಣವನ್ನು ಮುಗಿಸಿಕೊಡಬೇಕೆಂದು ಅಭಿಯಂತರರಿಗೆ ತಿಳಿಸಿದರು.
ಈ ಸಮಾರಂಭದಲ್ಲಿ ವೇದಿಕೆ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಾಮಲಾಬಾಯಿ ಸಿಂಧೆ, ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ಧವೀರಯ್ಯ ರುದನೂರ್, ಗಿರೀಶ್ ತುಂಬಾ, ನಾಗಭೂಷಣ, ಸಂಗಮ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯರಂಡಿ, ಅನಿಲ್ ಪಸರ್ಗಿ, ಪ್ರಕಾಶ್ ಕಲ್ಯಾಣಕರ್ ಗ್ರಾಮ ಮುಖಂಡರು, ರೈತರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್ ಜಮಖಂಡೆ, ಕೆ.ಬಿ ಕಟ್ಟಿಮನಿ ಸಹಾಯಕ ಅಭಿಯಂತರು, ಶ್ರೀ ಧನರಾಜ್ ಚೌಹಾಣ್ ಸಹಾಯಕ ಕಾರ್ಯನಿರ್ವಾಹಕ ಪಿಡಬ್ಲ್ಯೂಡಿ ಬಸವಕಲ್ಯಾಣ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸಂಚಾಲನೆಯನ್ನು ಶ್ರೀ ನಾಗಶೆಟ್ಟಿ ಬಾವಗೆ ಸಹ ಶಿಕ್ಷಕರು ನೆರವೇರಿಸಿ ಕೊಟ್ಟರು ಮತ್ತು ಗ್ರಾಮದ ಬಿಜೆಪಿ ಮುಖಂಡರು ಸಂತೋಷ ಹಳ್ಳೆ, ಲೋಕೇಶ ಜಮಖಂಡೆ, ರಾಜಕುಮಾರ ಸೋನಾರ, ನಾಗೇಶ್ ಗಾಜರೆ, ಸಂತೋಷ ಒಬ್ಬಾರೆ, ಸೂರ್ಯಕಾಂತ್ ಗುಜ್ಜೆ, ಸರ್ವರ್ ಗಿರಣಿವಾಲೆ, ಬಲ ಭೀಮ್ ಹಳ್ಳೆ, ಪ್ರಕಾಶ್ ಜಮಖಂಡಿ, ಭೀಮಣ್ಣ ಕೊಪ್ಪಟೆ, ಗುಂಡಪ್ಪ ಪೂಜಾರಿ, ರಾಜಕುಮಾರ ಜಮಖಂಡೆ, ದಿಲೀಪ್ ಮಿರಕಲೆ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ : ಶ್ರೀನಿವಾಸ ಬಿರಾದಾರ
