ಶಿರಸಿ : ಸೋಂದಾ ಶ್ರೀ ಸ್ವರ್ಣವಲ್ಲಿ ಮಠದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದ ಉಪಸ್ಥಿತಿಯಲ್ಲಿ ಯಲ್ಲಾಪುರದ ಇಡಗುಂಜಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪರಮಪೂಜ್ಯರು ಶ್ರೀ ದೇವರ ದರ್ಶನ ಮಾಡಿ ಪ್ರಸಾದವನ್ನು ಸ್ವೀಕರಿಸಿದರು.
ಜನಮಾನಸದಲ್ಲಿ ವ್ಯಾಪಕವಾಗಿ ಬೆಳೆದಿರುವ ಅನೇಕ ರೋಗಗಳ ಉಪಶಮನ, ಲೋಕಕಲ್ಯಾಣಕ್ಕಾಗಿ ಮಹಾರುದ್ರ ಅನುಷ್ಠಾನ ನಡೆಯಿತು. ಮಹಾರುದ್ರ ಪೂರ್ಣಾಹುತಿ ಶ್ರೀಗಳವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಭಕ್ತರು ಶ್ರೀಪಾದುಕಾಪೂಜೆ, ಭಿಕ್ಷಾ ಸೇವೆಯನ್ನು ಭಕ್ತಿಯಿಂದ ನಡೆಸಿದರು. ನಂತರ ಶ್ರೀಗಳು ಭಕ್ತರನ್ನು ಉದ್ದೇಶಿಸಿ ತಮ್ಮ ಆಶೀರ್ವಚನಗೈದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
