ವಿಜಯನಗರ/ ಕೊಟ್ಟೂರು : ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಲು ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ಮಾನ್ಯ ತಹಶೀಲ್ದಾರ್ ಕೊಟ್ಟೂರು ಇವರಿಗೆ ಮನವಿ.
ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ( ರಿ.) ಬೆಂಗಳೂರು ಇವರ ವತಿಯಿಂದ ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಲು ಬಜೆಟ್ ನಲ್ಲಿ ಘೋಷಿಸುವಂತೆ ರಾಜ್ಯ ಈರುಳ್ಳಿ ಬೆಳೆಗಾರ ಸಂಘ ಮತ್ತು ತಾಲೂಕು ರೈತರ ಜೊತೆಗೆ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಈರುಳ್ಳಿ ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿಕೊಂಡ ವಿಷಯಗಳು
- ರಾಜ್ಯದಲ್ಲಿ ಈರುಳ್ಳಿ ದರ ಕುಸಿದಾಗ ಸರ್ಕಾರದಿಂದ ಖರೀದಿ ಕೇಂದ್ರವನ್ನು ಪ್ರತಿ ತಾಲೂಕುಗಳಲ್ಲಿ ಖರೀದಿ ಕೇಂದ್ರವನ್ನು ತೆರೆಯಬೇಕು.
- ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಈರುಳ್ಳಿ ಸಂಗ್ರಹಣ ಘಟಕವನ್ನು ಸ್ಥಾಪಿಸಬೇಕು.
- ಈರುಳ್ಳಿ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ರೈತರಿಗೆ ವಿತರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು.
- ಅರಬಾವಿ – ಚಳ್ಳಕೆರೆಗೆ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ದಕ್ಷಿಣದ ಜಿಲ್ಲೆಗಳಿಗೆ ಈರುಳ್ಳಿ ಸಾಗಾಣಿಕೆ ಮಾಡಲು ಅನುಕೂಲ ಮಾಡಿಕೊಡಬೇಕು.
- ರೈತರು ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದ ರೈತರ ಮೈಕ್ರೋ ಫೈನಾನ್ಸ್ ನ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು.
- ಸಹಕಾರ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು.
ಈ ಎಲ್ಲಾ ವಿಷಯಗಳನ್ನು ಈಡೇರಿಸುವಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ರಾಜ್ಯಾಧ್ಯಕ್ಷರು ಎನ್ ಎಂ ಸಿದ್ದೇಶ್, ಉಪಾಧ್ಯಕ್ಷರು ವೀರಣ್ಣ ಚೌದ್ರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್ ಉಮೇಶ್, ಕಾನೂನು ಸಲಹೆಗಾರರಾದಂತ ಶಿವಶಂಕರ ಗಿ ಬೋಳ ಜಾಡರ್, ಕೆಎಂ ಮಲ್ಲಿಕಾರ್ಜುನ, ಮಾಧ್ಯಮ ಸಲಹೆಗಾರರು ವಿಶ್ವನಾಥ ಉತ್ತಂಗಿ, ರಾಜ್ಯ ವಕ್ತಾರರು ಬಿ.ಎಂ ವೀರಯ್ಯಸ್ವಾಮಿ, ಕಾರ್ಯಕಾರಣಿ ಸದಸ್ಯರು ಮಂಜಪ್ಪ, ಸಿದ್ದಪ್ಪ, ಜಿಲ್ಲಾಧ್ಯಕ್ಷರು ಕೊಚಾಲಿ ಮಂಜುನಾಥ , ತಾಲೂಕು ಅಧ್ಯಕ್ಷರು ಶಾಂತಕುಮಾರ ಚಪ್ಪರದಹಳ್ಳಿ , ಬಾರೀಕರ ಗೋಣಿಬಸಪ್ಪ, ಮಲ್ಲಿಕಾರ್ಜುನ ಗೌಡ್ರು ಹಾಗೂ ಕಾರ್ಯಕರ್ತರು, ರೈತರು ಉಪಸ್ಥಿತರಿದ್ದರು.
ವರದಿಗಾರಾರು – ಎನ್. ಚಂದ್ರಗೌಡ
