ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಮಾಲವಿ ಗ್ರಾಮ ಪಂಚಾಯಿತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕಾನೂನು ಬಾಹಿರವಾಗಿ ಸರ್ಕಾರಿ ಉದ್ಯೋಗ ಪಡೆದಿರುವ ಸಿಬ್ಬಂದಿಯು ಮಾಲವಿ ಗ್ರಾಮ ಪಂಚಾಯಿತಿಯಲ್ಲಿ ಕರ ವಸೂಲಿಗಾರರಾದ ಕೆ ರತ್ನಾ ನಾಯ್ಕ್ ವಿರುದ್ಧ ದೂರು ನೀಡಿದ್ದು ಈ ದೂರನ್ನು ತನಿಖೆ ಮಾಡಿ ತನಿಖೆ ಆದ ನಂತರ ತನಿಖಾ ವರದಿಯಲ್ಲಿ ಇವರು ನೀಡಿರುವ ದಾಖಲೆಗಳು ಸುಳ್ಳು ಎಂದು ಕಂಡು ಬಂದಿದ್ದು ಆ ತನಿಖಾ ವರದಿಯನ್ನು ಕಾರ್ಯನಿರ್ವಾಹಕ ಅಧಿಕಾರಿಯವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ವಿಜಯನಗರ ಅವರಿಗೆ ಮುಂದಿನ ಕ್ರಮಕ್ಕಾಗಿ ವರದಿಯನ್ನು ಸಲ್ಲಿಸುತ್ತಾರೆ ಆ ವರದಿಯನ್ನು ಪರಿಗಣಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮುಖಾಂತರ ಪಿಡಿಓ ಮಾಲವಿ ಅವರಿಗೆ ನಿಯಮ 8 ಪ್ರಕಾರ ಮುಂದೆ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲು ಆದೇಶವನ್ನು ಮಾಡಿರುತ್ತಾರೆ , ಆದರೆ ಪಿಡಿಒ ಮತ್ತು ಗ್ರಾಮ ಪಂಚಾಯತ್ ಸದಸ್ಯರುಗಳು ಸಾಮಾನ್ಯ ಸಭೆಯನ್ನ ಸೇರದೆ ಅಮಿಷಕ್ಕೆ ಬಲಿಯಾಗಿದ್ದಾರೆ ಎಂಬ ಅನುಮಾನ ನಮಗೆ ಕಾಡುತ್ತಿದೆ ಹಾಗಾಗಿ ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಪಿಡಿಓ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಜೊತೆಗೆ 20-02-2025ರ ಒಳಗಡೆ ಸಾಮಾನ್ಯ ಸಭೆಯನ್ನು ಮಾಡಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕೆಂದು ಪಿಡಿಓ ಅವರಿಗೆ ಸೂಚನೆ ನೀಡಬೇಕು ಒಂದು ವೇಳೆ 20-2-2025 ಒಳಗಡೆ ಏನಾದರೂ ನಿರ್ಣಯ ತೆಗೆದುಕೊಳ್ಳದಿದ್ದರೆ ಮಾಲವಿ ಗ್ರಾಮ ಪಂಚಾಯತಿಯ ಅವರಣದ ಮುಂದೆ ಅನಿರ್ಧಿಷ್ಟ ಅವಧಿ ಧರಣಿಯನ್ನು ಮಾಡುತ್ತೇವೆಂದು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು ಎಂದು ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್ ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ಚಿಂತಪಲ್ಲಿ ಮಂಜುನಾಥ್ , ಕೈಲಾಸ್ ಕತ್ರಿ ತಾಲೂಕು ಸಂಘಟನಾ ಕಾರ್ಯದರ್ಶಿ ಜಾಡರ ದುರ್ಗಪ್ಪ ,
ಗ್ರಾಮ ಘಟಕದ ಕಾರ್ಯಧ್ಯಕ್ಷರಾದ ಸಂತೋಷ್ ಎಲ್, ಸಂಘಟನಾ ಕಾರ್ಯದರ್ಶಿಗಳಾದ ಕೃಷ್ಣ ನಾಯ್ಕ್ ಆರ್, ಪಂಪ ನಾಯ್ಕ್ ಆರ್, ಶಿವಕುಮಾರ್ ಕೆ ಇನ್ನೂ ಮುಂತಾದವರು ಇದ್ದರು.
- ಕರುನಾಡ ಕಂದ
