ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಇಂದು ಶ್ರೀ ಶ್ರೀ ಉಜ್ಜಿನಿ ಶಿವಾಚಾರ್ಯ ಮಹಾ ಸ್ವಾಮೀಜಿಗಳು
ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ನಿಂಬಳಗೆರೆ ಗ್ರಾಮದಿಂದ ಉಜ್ಜಿನಿ ಗ್ರಾಮದವರೆಗೆ ಹಾಗೂ ಶಾಂತನಹಳ್ಳಿಯಿಂದ ನಿಂಬಳಗೆರೆಯವರಿಗೆ ರಸ್ತೆ ಅಗಲೀಕರಣ ಹಾಗೂ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಶ್ರೀ ಜಗದ್ಗುರು ಶಿವಾಚಾರ್ಯ ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸಿ, ನಿಂಬಳಗೆರೆ ಗ್ರಾಮದಿಂದ ಉಜ್ಜಿನಿ ಗ್ರಾಮದವರೆಗೆ (990 ಲಕ್ಷಗಳು ), ಶಾಂತನಹಳ್ಳಿಯಿಂದ ನಿಂಬಳಗೆರೆಯವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಪಡಿಸುವ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಕೆ ತಿಪ್ಪೇಸ್ವಾಮಿಯವರು, ಮಂಗಾಪುರ ಹಾಗೂ ನಿಂಬಳಗೆರೆ ಗ್ರಾಮ ಪಂ. ಅಧ್ಯಕ್ಷರು, ಸದಸ್ಯರುಗಳು, ಗ್ರಾಮಗಳ ಪ್ರಮುಖ ಮುಖಂಡರು ಇದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
