ಕಡಲ ತೊರೆಯ ಮೊರೆತದಲ್ಲಿ
ಮನದೊಳಗೆ ಒಲವಿಹುದು
ಅಲೆಗಳು ತೀರಕೆ ಅಪ್ಪಳಿಸಿದಾಗ
ಹೃದಯದಲಿ ಚಿಗುರಿತು ಪ್ರೇಮ ಭಾವವು
ಮರಳ ಹಾದಿಯ ತೀರದಲ್ಲಿ
ಸನಿಹವಾಯಿತು ನಮ್ಮಿಬ್ಬರ ಭಾವಗಳು
ನೋಟಗಳೇ ಮಾತಾಗಿ
ಮೌನವೇ ಹಾಡಾಯಿತು
ಕಡಲ ತೀರದ ಯಾನವದು
ನಮಗಾಗಿಯೇ ಇರುವುಹುದು
ಹೊಮ್ಮಿತು ಪ್ರೇಮಗಾನ
ಮೌನ ರಾಗದ ಲಯದಲಿ
ಮುಸ್ಸಂಜೆಯ ಕ್ಷಣವದು
ಪ್ರೇಮದ ತಂಗಾಳಿ ಬೀಸಿತು
ತಿಂಗಳನ ಬೆಳಕಿನಲ್ಲಿ ಮೂಡಿತು
ಹೊಸ ಕನಸೊಂದು
ಅಲೆಗಳೇ ಮಂತ್ರಘೋಷದಿ
ಮರಳಿನ ಹಾದಿಯ ಸಪ್ತಪದಿಯಲಿ
ಸಾಗೋಣ ನಾವು ಕೈ ಹಿಡಿದು
ಕಡಲಿಗೆ ನಮನ ಅರ್ಪಿಸಿ

— ಶ್ವೇತಾ ಸಂದೀಪ್ ,ಶಿವಮೊಗ್ಗ
