ಮಕ್ಕಳ ಕಲಿಕೆಗೆ ಕಲಿಕೋತ್ಸವ ಸೂಕ್ತ ವೇದಿಕೆ ಬಿಇಒ ಮಹೇಶ್ ಪೂಜಾರ್ ಅಭಿಮತ
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲೂಕು ಹೂಳಲು ಗ್ರಾಮದ ಸೆಂಟ್ ಥಾಮಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಅದ್ದೂರಿಯಾಗಿ ಕಲಿಕಾ ಜಾತ್ರೆ ನಡೆಯಿತು.
ಹೂವಿನಹಡಗಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ಮಹೇಶ್ ಪೂಜಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅವರ ಕಲಿಕೆಗೆ ಪ್ರೇರಣೆ ನೀಡುವ ಸೂಕ್ತ ವೇದಿಕೆಯಾಗಿದೆ, ನೋಡಿ ಕಲಿ ಮಾಡಿ ಕಲಿ ಎಂಬ ಮಾತಿನಂತೆ ಮಕ್ಕಳು ತಾವು ಕ್ರಿಯಾಶೀಲರಾಗಿ ತಯಾರಿಸಿದ ವಿವಿಧ ಬಗೆಯ ಕಲಿಕಾ ಸಾಮಾಗ್ರಿಗಳು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಆ ಬಗ್ಗೆ ಮಕ್ಕಳು ತುಂಬಾ ಚೆನ್ನಾಗಿ ವಿವರಣೆ ನೀಡುವುದು ಇತರೆ ಮಕ್ಕಳಿಗೂ ಕಲಿಯುವ ಉತ್ಸಾಹ ಹೆಚ್ಚಿಸುತ್ತದಲ್ಲದೆ ಮತ್ತಷ್ಟು ಅಕ್ಷರ ಜ್ಞಾನ ಪಡೆದುಕೊಳ್ಳಲು ಅನುಕೂಲ- ವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿ.ಆರ್.ಪಿ ಭಾಷಾ ಮಾತನಾಡಿ ಮಕ್ಕಳಿಗೆ ಕಲಿಕೆ ಬಗ್ಗೆ ಆಸಕ್ತಿ ಹಾಗೂ ಅದರ ಮಹತ್ವವನ್ನು ತಿಳಿಸಿಕೊಡುವ ಕಾರ್ಯಕ್ರಮ ಇದಾಗಿದ್ದು, ಪ್ರತಿ ವರ್ಷ ಈಶಾಲೆ ವಿಭಿನ್ನ ಮತ್ತು ವಿನೂತನ ಕಾರ್ಯಕ್ರಮಗಳ ಮೂಲಕ ಶಾಲಾ ಹಿರಿಮೆಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದರು.
ಶಾಲೆಗೆ ಬೇಟಿ ನೀಡಿದ ಪೋಷಕರು ತಮ್ಮ ಮಕ್ಕಳು ಸ್ವತಹ ತಾವೇ ವಿವಿಧ ಕಲಿಕಾ ಮಾದರಿಗಳನ್ನು ತಯಾರಿಸಿ ಆ ಬಗ್ಗೆ ಅತ್ಯಂತ ಸೊಗಸಾಗಿ ವಿವರಿಸಿದ ರೀತಿಯನ್ನು ಕಂಡು ಉತ್ಸುಕರಾದರಲ್ಲದೆ ನಾವು ಮಕ್ಕಳನ್ನು ಕಲಿಯಲು ಶಾಲೆಗೆ ಕಳಿಸಿದ ನಮಗೆ ಇಂದು ಮಕ್ಕಳು ನಮಗೆ ಹೇಳಿದ್ದು ಕೇಳಿ ಮರೆತಿರುವ ಎಷ್ಟೋ ವಿಷಯಗಳನ್ನು ಮತ್ತೆ ಇಂದು ತಿಳಿದುಕೊಳ್ಳಲು ಅನುವಾಯಿತು ಎಂದರು.
ಗ್ರಾ.ಪಂ ಅಧ್ಯಕ್ಷ ಚನ್ನಬಸಪ್ಪ ಗುಡಗೂರ, ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಜೆ., ಕಾರ್ಯದರ್ಶಿ ಪಿ.ಬಿ ಹಾವನೂರು ಸೇರಿದಂತೆ ಶಿಕ್ಷಕರು ಮತ್ತು ಪೋಷಕರು ಪಾಲ್ಗೊಂಡಿದ್ದರು.
- ಕರುನಾಡ ಕಂದ
