ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

“ಹಂದಿಗುಂದ ಶ್ರೀ ಸಿದ್ಧೇಶ್ವರ ಮಠದ ಪರಂಪರೆ” ಕೃತಿ ಬಿಡುಗಡೆ

ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ ಕಾರ್ಯ ಶ್ಲಾಘನೀಯ : ನಿಡಸೋಸಿ ಜಗದ್ಗುರು

ಬಾಗಲಕೋಟೆ/ಹುನಗುಂದ :
ಹಳ್ಳಿಗಳ ಚರಿತ್ರೆಯೆ ಮುಂದೆ ರಾಜ್ಯದ ಚರಿತ್ರೆಯಾಗುತ್ತದೆ. ಸಣ್ಣಪುಟ್ಟ ಗ್ರಾಮಗಳ ಹಾಗೂ ದೈವ-ದೇವರು, ಜನ ಸಮುದಾಯದ ಇತಿಹಾಸ ದಾಖಲೆಗೊಳ್ಳಬೇಕಾಗಿರುವ ಅವಶ್ಯಕವಾಗಿದೆ. ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡುವ , ಮಾಗದರ್ಶಿಯಾಗವ ಇಂಥಹ ಮೌಲಿಕ ಕೃತಿಗಳ ರಚನೆಯಾಗಬೇಕಿದೆ . ಇಂಥ ಕಾರ್ಯ ಮಾಡಿದ ನರೋಡೆ ಹಾಗೂ ರೋಹಿಣಿಯವರು ಈ ಕೃತಿ ರಚಿಸಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ನಿಡಸೋಸಿಯ ಜಗದ್ಗುರು ಪೂಜ್ಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದ ಶ್ರೀ ಸಿದ್ಧೇಶ್ವರ ಮಹಾಶಿವಯೋಗಿಗಳ ೪೯ ನೇ ಜಾತ್ರಾಮಹೋತ್ಸವ ಸಮಾರಂಭದ ದಿವ್ಯಸಾನಿಧ್ಯವನ್ನು ವಹಿಸಿ ಡಾ.ಅಶೋಕ ನರೋಡೆ ಹಾಗೂ ರೋಹಿಣಿ ಯಾದವಾಡ ಅವರು ರಚಿಸಿದ ” ಹಂದಿಗುಂದ ಶ್ರೀ ಸಿದ್ಧೇಶ್ವರ ಮಠದ ಪರಂಪರೆ ” ಕೃತಿಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡುತ್ತಾ, ಹಂದಿಗುಂದ ಶ್ರೀಮಠದ ಪೂಜ್ಯರು ವಿಭಿನ್ನವಾಗಿ ಜಾತ್ರೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದು ಈ ಪರಿಸರದಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಾಹಿತ್ಯಿಕ ಅರಿವನ್ನು ಮೂಡಿಸಿದ್ದಾರೆ ಎಂದರು.

ಕೃತಿಯ ಕುರಿತು ಲೇಖಕರಾದ ಡಾ. ಅಶೋಕ ನರೋಡೆಯವರು ಪರಿಚಯಿಸುತ್ತಾ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗುತ್ತಿವೆ ಎಂಬ ಕೂಗಿರುವಾಗ, ಹಂದಿಗುಂದದಲ್ಲಿ ಜಾತ್ರೆಯು ಸಮ್ಮೇಳನ ರೂಪತಾಳಿ ಆಚರಿಸುತ್ತಿರುವುದು ವಿಶೇಷ ಎಂದರು.

ನೇತೃತ್ವ ವಹಿಸಿದ್ದ ಹಂದಿಗುಂದ ವಿರಕ್ತ ಮಠದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ಮುಚ್ಚಿಹೋಗುತ್ತಿರುವ ಇತಿಹಾಸವನ್ನು ಮುಂದಿನ ನಾಗಕರಿಗೆ ಕಟ್ಟಿಕೊಡುವ ಕಾರ್ಯ ಈರ್ವರೂ ಲೇಖಕರು ಮಾಡಿದ್ದಾರೆ. ಗ್ರಾಮದ ಶ್ರೀ ಮಠದ ಇತಿಹಾಸ ಎಲ್ಲರೂ ತಿಳಿಯಬೇಕು. ಪ್ರತಿಯೊಂದು ಮನೆಯಲ್ಲೂ ಈ ಕೃತಿ ಇರಬೇಕು ಎಂದರು.
ಬೆಲ್ಲದ ಬಾಗೇವಾಡಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಶೇಗುಣಸಿಯ ಶ್ರೀ ಮಹಾಂತಪ್ರಭು ಸ್ವಾಮೀಜಿ, ಕೃತಿಯ ಲೇಖಕಿ ರೋಹಿಣಿ ಯಾದವಾಡ, ಜಮಖಂಡಿಯ ಧರ್ಮಲಿಂಗಯ್ಯ ಜಗದೀಶ ಗುಡಗುಂಟಿ, ತೇರದಾಳದ ನಾಗಪ್ಪಣ್ಣ ಸನದಿ ಉಪಸ್ಥಿತರಿದ್ದರು.
ದೋಟಿಹಾಳದ ಶ್ರೀ ಚಂದ್ರಶೇಖರ ದೇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ರೇಖಾ ಬಿರಾದರ ಅವರ ವಚನ ಪ್ರಾರ್ಥನೆ ನೆರವೇರಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ