ಚಾಮರಾಜನಗರ: ಕರ್ನಾಟಕ ಕಾವಲು ಪಡೆಯ ವತಿಯಿಂದ ದಿನಾಂಕ 12/02/2025ರಂದು ಗುಂಡ್ಲುಪೇಟೆ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಜಿ. ಎಸ್. ಮಧುಸೂದನ್ ರವರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಅಣ್ಣಯ್ಯಸ್ವಾಮಿರವರನ್ನು ಸಂಘಟನೆ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಾವಲು ಪಡೆಯ ತಾಲ್ಲೂಕು ಅಧ್ಯಕ್ಷರಾದ ಎ.ಅಬ್ದುಲ್ ಮಾಲಿಕ್ ಮಾತನಾಡಿ ಪಟ್ಟಣದಲ್ಲಿ ದುರಸ್ತಿಗೊಂಡ ರಸ್ತೆ ಚರಂಡಿಯ ದುರಸ್ತಿಗೆ ಹಾಗೂ ಫುಟ್ ಪಾತ್ ಸೇರಿದ ಹಾಗೆ ಕಬ್ಬಿಣದ ಗ್ರಿಲ್ ಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ಗುಂಡ್ಲುಪೇಟೆ ಕಾವಲು ಪಡೆ ವತಿಯಿಂದ ಪುರಸಭೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಅಭಿನಂದಿಸಲಾಯಿತು.
ಇದೇ ವೇಳೆ ಕನ್ನಡಪರ ಹಿರಿಯ ಹೋರಾಟಗಾರರಾದ ಬ್ರಹ್ಮಾನಂದ್, ತಾಲ್ಲೂಕು ಕಾರ್ಯದರ್ಶಿಗಳಾದ ಎಸ್.ಮುಬಾರಕ್, ತಾಲ್ಲೂಕು ಗೌರವಾಧ್ಯಕ್ಷರಾದ ರಾಮೇಗೌಡ, ಟೌನ್ ಉಪಾಧ್ಯಕ್ಷರಾದ ಸಾದಿಕ್ ಪಾಷಾ, ಟೌನ್ ಯುವಘಟಕದ ಅಬ್ದುಲ್ ಜಬ್ಬಾರ್, ಮನೋಜ್, ಟೌನ್ ಸಂಚಾಲಕರಾದ ಮಿಮಿಕ್ರಿರಾಜು, ರವಿಕುಮಾರ್, ಮಿಠಾಯಿ ಮಂಜುನಾಥ್, ಸೇರಿದಂತೆ ಪುರಸಭಾ ಸದಸ್ಯರುಗಳು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್
