ಶಿವಮೊಗ್ಗ / ಬಾಗಲೂರು : ಸರಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಗ್ರಂಥಾಲಯಕ್ಕೆ ಬ್ಯಾಂಕರ್ಸ್ ಕನ್ನಡಿಗರ ಬಳಗದ ವತಿಯಿಂದ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲಾಯಿತು. ಬಳಗದ ಅಧ್ಯಕ್ಷ ಶ್ರೀ ವೆಂಕಟೇಶ ಶೇಷಾದ್ರಿ ಯವರು ಪುಸ್ತಕವನ್ನು ಶಾಲೆಯ ಮುಖ್ಯ ಉಪಾಧ್ಯಾಯಿನಿ ಎಂ ಎಸ್ ಸಂಗೀತಾ ಮತ್ತು ಎನ್ ಪಿ ವೀಣಾರವರಿಗೆ ನೀಡಿದರು.
ಈ ಸಂದರ್ಭದಲ್ಲಿ ಬಳಗದ ಕಾರ್ಯದರ್ಶಿ ಶ್ರೀ ಕೆಜಿ ಸಂಪತ್ ಕುಮಾರ್ ಉಪಸ್ಥಿತರಿದ್ದರು.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
