ವಿಜಯಪುರ/ಆಲಮೇಲ:
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ ಶಾಖಾ ಕಚೇರಿ ದೇವಣಗಾವ ಗ್ರಾಮೀಣ ಮಟ್ಟದ ಸಲಹಾ ಸಮಿತಿಗೆ ನಾಮ ನಿರ್ದೇಶಕ ಸದಸ್ಯರನ್ನಾಗಿ ಕಡಣಿ ಗ್ರಾಮದ ಯುವ ಉತ್ಸಾಹಿ ರೈತರ ನಾಯಕ ಶ್ರೀ ಮಾಂತೇಶ ಕತ್ತಿ ಅವರನ್ನು ಸಿಂದಗಿ ಮತ ಕ್ಷೇತ್ರದ ಶಾಸಕರ ಅನುಮತಿ ಮೇರೆಗೆ ಹೆಸ್ಕಾಂ ಇಲಾಖೆಯ ಎಂ ಡಿ ಯವರು ನೇಮಕ ಮಾಡಿರುತ್ತಾರೆ. ಗ್ರಾಮದ ಗೆಳೆಯರ ಬಳಗದ ವತಿಯಿಂದ ಶ್ರೀ ಮಹಾಂತೇಶ್ ಕತ್ತಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು. ನಂತರ ಸಿಹಿ ಹಂಚಿ ಸಂಭ್ರಮಿಸಿದರು. ಗೆಳೆಯರಾದ ಶ್ರೀ ವೇದಮೂರ್ತಿ ನಿಂಗಯ್ಯ ಮಠಪತಿ, ಶಿವಯೋಗಿ ಕತ್ತಿ, ಶರಣು ಜೇರಟಗಿ, ರಾಮಣ್ಣ ದೊಡ್ಡಿ, ಬೋಗೇಶ್ ಕತ್ತಿ, ಸಂಜು ತಳವಾರ್, ಸಂತೋಷ್ ಕತ್ತಿ, ಗಜಾನಂದ್ ಬಿರಾದಾರ್, ಅಂಬರೀಶ್ ಕತ್ತಿ, ಭೋಗೇಶ್ ಅಂಕಲಗಿ, ರೇವಣಸಿದ್ದಯ್ಯ ಹಿರೇಮಠ, ಮತ್ತು ಕೃಷ್ಣ ಪಾತ್ರೋಟಿ ಭಾಗಿಯಾಗಿದ್ದರು.
ವರದಿ: ಹಣಮಂತ ಚ. ಕಟಬರ
