ಬೀದರ್ : ದಿನಾಂಕ :14-02-2025 ಸಾಯಂಕಾಲ 7.30 ಗಂಟೆಗೆ ಬೀದರ್ ನಗರದ ಕೋಲಾರ್ (ಕೆ.) ಗ್ರಾಮದ ಬುದ್ಧ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಜಿಲ್ಲಾ ಸಮಿತಿ ಬೀದರ್ ವತಿಯಿಂದ, ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಈ ಕಾರ್ಯಕ್ರಮ ಪ್ರಾರಂಭ ಮಾಡಿದರು.
ರಾಜ್ಯ ಸಂಘಟನಾ ಸಂಚಾಲಕರಾದ ರಮೇಶ್ ಢಾಕೂಳಿಗಿರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಂಚಾಲಕರಾದ ರಮೇಶ್ ಮಂದಕ್ನಳ್ಳಿ ಅವರ ನೇತೃತ್ವದಲ್ಲಿ ಗ್ರಾಮ ಶಾಖೆ ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಶಿವ ಶರಣಪ್ಪ ಹುಗ್ಗೆ ಪಾಟೀಲ್ ಮತ್ತು ಕೋಲಾರ್ ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಶಾಂತ್ ಶರ್ಗರ, ಸುಭಾಷ್ ಜ್ಯೋತಿ ಜರಪ್ಪ ರಾಂಪುರೆ ಮಾರುತಿ ಸಿಂದೆ , ಗ್ರಾಮ ಶಾಖೆ ಸಂಚಾಲಕರಾದ ಬಸವರಾಜ್ ಬಾವಿಮನಿ, ಗ್ರಾಮ ಶಾಖೆ ಸಂಘಟನಾ ಸಂಚಾಲಕರಾದ ಮಹೇಂದ್ರ ಕುಮಾರ್ ಉಪ್ಪಕಾರ್, ಗ್ರಾಮ ಶಾಖೆ ಖಜಾಂಚಿಗಳಾದ ಬಂಡೆಪ್ಪ ಕೇಸರಿ, ಮಹಿಳಾ ಒಕ್ಕೂಟದ ಗೀತಾ ಶಿವಕುಮಾರ್ ಕೇಸರಿ,ದಲಿತ ಮುಖಂಡರಾದ ಮಲ್ಲಿಕಾರ್ಜುನ್ ಉಪ್ಪಾರ್, ನರಸಿಂಗರವ್ ಭಾವಿಮನಿ, ಗ್ರಾಮದ ಎಲ್ಲಾ ಗಣ್ಯರು ಮಹಿಳೆಯರು ಇನ್ನಿತರರು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
