ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ತಹಶೀಲ್ದಾರ್ ಕಾರ್ಯಲಯದ ಆವರಣದಲ್ಲಿ ನಡೆಯುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ದಿನಾಂಕ10-02-2025 ರಿಂದ ಪ್ರಾರಂಭವಾಗಿದೆ ಸರ್ಕಾರದ ಕೆಲಸ ದೇವರ ಕೆಲಸ ಎಂಬ ನುಡಿಯಂತೆ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಸೇವೆಯನ್ನು ನೀಡಲು ನಾವು ಬಂದಿರುತ್ತೇವೆ. ಆದರೆ ಗ್ರಾಮದಲ್ಲಿ ಸೇವೆಯನ್ನು ಮಾಡಲು ನಮಗೆ ಕೆಲವು ತೊಂದರೆ ಉಂಟಾಗುತ್ತಿದೆ. ಸರ್ಕಾರವು ಯಾವುದೇ ಮಾಹಿತಿಯನ್ನು ಆದಷ್ಟು ಬೇಗ ನೀಡಲು ಕೇಳಿರುತ್ತದೆ, ಆದರೆ ಮಾಹಿತಿ ನೀಡಲು ಅನಿವಾರ್ಯತೆಯಿಂದ ಆಗಿರುವುದಿಲ್ಲ. ಬೇರೆ ಬೇರೆ ಸರ್ಕಾರದ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಸಿಗುವ ಸೌಲಭ್ಯಗಳು ನಮಗೂ ಕೂಡ ದೊರೆತರೆ ನಾವು ಜನರಿಗೆ ಉತ್ತಮವಾದ ಸೇವೆಯನ್ನು ನೀಡಲು ಅನುಕೂಲವಾಗುತ್ತದೆ ಎಂದು ಮೋತಿಲಾಲ್ ಚೌವ್ಹಾಣ ಗ್ರಾಮ ಆಡಳಿತ ಸಂಘದ ಜಿಲ್ಲಾಧ್ಯಕ್ಷರು ಕಲ್ಬುರ್ಗಿ ಹೇಳಿದರು.
ಗ್ರಾಮದ ಜನರಿಗೆ ಪ್ರಾಮಾಣಿಕವಾಗಿ ಸೇವೆ ಮಾಡಲು ನಮಗೆ ಕೊಠಡಿ ವ್ಯವಸ್ಥೆ, ಮೊಬೈಲ್, ಲ್ಯಾಪಟಾಪ್, ಇಂಟರ್ನೆಟ್ ಸೇವೆ ಮುಂತಾದ ಸವಲತ್ತು ನಮಗೆ ದೊರೆತರೆ ನಾವು ಕೂಡಾ ಜನರ ಮನಸ್ಸಿನಲ್ಲಿ ಉಳಿಯುತ್ತೇವೆ ಈ ಸರ್ಕಾರವು ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟವು ಮುಂದುವರೆಯುತ್ತದೆ ಎಂದು ರಾಜು ಗೋಪಣೆ ಗ್ರಾಮ ಆಡಳಿತ ಸಂಘದ ಗೌರವ ಅಧ್ಯಕ್ಷರು ಕಲ್ಬುರ್ಗಿ ಹೇಳಿದರು.
ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳು ಈ ರೀತಿಯಾಗಿವೆ
1) ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ.
2) ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಗಳನ್ನು ಕಲ್ಪಿಸುವ ಬಗ್ಗೆ.
3) ಇತರೆ ಎಲ್ಲಾ ಇಲಾಖೆಗಳಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗ ಸೂಚನೆ ರಚಿಸುವ ಬಗ್ಗೆ ಸೇರಿದಂತೆ ಇನ್ನೂ 20 ಬೇಡಿಕೆಗಳು ಇರುತ್ತವೆ.
ಈ ಮುಷ್ಕರದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಸಿದ್ದಲಿಂಗ ಕ್ಷೇಮ ಶೆಟ್ಟಿ, ರವಿಕಿರಣ್ ಕೆ ಪಿ, ಸಂತೋಷ್ ಮನ್ವಿಕರ್, ಇಸ್ರಾದ ಅಲಿ,ಬಾಬುರಾವ್, ಮಹಾಂತೇಶ್ ಬಿಜ್ಜರಗಿ, ಬಸವರಾಜ್ ಕಟ್ಟೋಳಿ, ರುದ್ರಪ್ಪ ಯಲಗೋಡ, ಶಿವರಾಜ್, ಶಿಲ್ಪ, ಅಕ್ಕಮಹಾದೇವಿ, ಶರಣಪ್ಪ ಮರ್ತೂರ್, ಶಬ್ಬೀರ್ ಅಹ್ಮದ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
