
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ 3ನೇ ಮೇಲ್ ಕ್ಯಾಂಪ್ ನಲ್ಲಿ ವನಸಿರಿ ಫೌಂಡೇಷನ್ (ರಿ). ರಾಯಚೂರು ಹಾಗೂ ನಿಸರ್ಗ ಯುಕೋ ಕ್ಲಬ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪ್ರಾಣಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಇದೇ ಸಂದರ್ಭದಲ್ಲಿ ವನಸಿರಿ ತಂಡದ ಸದಸ್ಯರು, ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಊರಿನ ಯುವಕರೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಪರಿಸರ ಜಾಥಾ ಕಾರ್ಯಕ್ರಮ ಮಾಡುವ ಮೂಲಕ ಸಾರ್ವಜನಿಕರಿಗೆ ಪರಿಸರದ ಮಹತ್ವದ ಅರಿವನ್ನು ಮೂಡಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಪ್ರಕೃತಿಯನ್ನು ನಾವು ಕಾಪಾಡಿದರೆ ಪ್ರಕೃತಿ ನಮ್ಮನ್ನು ಕಾಪಾಡುತ್ತದೆ. ಮನುಷ್ಯರಾದ ನಾವುಗಳು ಗಿಡಮರಗಳನ್ನು ನೆಟ್ಟು ಉಳಿಸಿ ಬೆಳಸಬೇಕು. ಈ ಪ್ರಕೃತಿಯಲ್ಲಿ ಹಲವಾರು ಪ್ರಾಣಿ ಪಕ್ಷಿಗಳಿವೆ ಅವುಗಳಿಗೆಲ್ಲಾ ಮಾತುಗಾರಿಕೆ ಇಲ್ಲ. ಮನುಷ್ಯನಿಗೊಂದೆ ಮಾತನಾಡಲು, ಬುದ್ಧಿಶಕ್ತಿ ಇರೋದು. ಆದ್ದರಿಂದ ಪ್ರತಿಯೊಬ್ಬರೂ ಒಂದೊಂದು ಗಿಡವನ್ನು ನೆಟ್ಟು ಪೋಷಣೆ ಮಾಡಿ ಅವುಗಳನ್ನು ರಕ್ಷಿಸಬೇಕು.ಪ್ರತಿವರ್ಷ ವನಸಿರಿ ಫೌಂಡೇಷನ್ ವತಿಯಿಂದ ಮೂಕ ಪ್ರಾಣಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರಿನ ಅರವಟ್ಟಿಗೆ ನಿರ್ಮಿಸಿ ಕಾಳು ನೀರು ಹಾಕುವ ಕಾರ್ಯದಲ್ಲಿ ತೊಡಗಿದ್ದೇವೆ ಇದನ್ನು ಪ್ರತಿವರ್ಷ ಏಪ್ರಿಲ್ ತಿಂಗಳಿನಿಂದ ಪ್ರಾರಂಭಿಸುತ್ತೆವೆ. ಈ ವರ್ಷ ಏಪ್ರಿಲ್ ಗೂ ಮೊದಲೇ ನಿಮ್ಮ ಶಾಲೆಯಲ್ಲಿ ನೀರಿನ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅಭಿಯಾನ ಕೈಗೊಳ್ಳಲಾಗಿದೆ.ಮತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರದ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಿಗೂ ಪರಿಸರದ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳ ಪಥ ಸಂಚಲನ ತುಂಬಾ ಆಕರ್ಷಕವಾಗಿ ಅಚ್ಚುಕಟ್ಟಾಗಿ ಮಾಡಿ ಪರಿಸರ ಜಾಗೃತಿಗೆ ಮೆರುಗು ತಂದಿದ್ದಾರೆ. ಅದಕ್ಕಾಗಿ ನಿಸರ್ಗ ಯುಕೋ ಕ್ಲಬ್ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಹೃದಯ ಪೂರ್ವಕ ಧನ್ಯವಾದಗಳು ಮತ್ತು ಪ್ರತಿಯೊಬ್ಬರೂ ಬೇಸಿಗೆಯಲ್ಲಿ ತಮ್ಮ ಮನೆ,ಶಾಲೆಯ, ದೇವಸ್ಥಾನಗಳಲ್ಲಿನ ಗಿಡಗಳಿಗೆ ನೀರಿನ ಅರವಟ್ಟಿಗೆ ಕಟ್ಟಿ, ಪ್ರಾಣಿ ಪಕ್ಷಿಗಳಿಗೆ ನೀರು ಹಾಗೂ ಕಾಳು ಇರಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ CRP ಪ್ರಮೋದ, ಮುಖ್ಯ ಗುರುಗಳಾದ ಶರಣಮ್ಮ, ಸಂಗಮ್ಮ, M.P.ಕಮತಗಿ, ಲಚಮಪ್ಪ, ಬಸವಂತಪ್ಪ, ಮೇಘನಾ, ಪ್ರಮೀಳಾ, ಚನ್ನಪ್ಪ ಕೆ. ಹೊಸಹಳ್ಳಿ, ಮುದುಕಪ್ಪ ಹೊಸಳ್ಳಿ ಕ್ಯಾಂಪ್ ವನಸಿರಿ ತಂಡದ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.
