
ವಿಜಯಪುರ: ದಿ. 16/ 2/2025 ರಂದು ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕಡಣಿ ಒಟ್ಟು 12 ಜನ ಸದಸ್ಯರ ಬಲವಿದ್ದು ಅದರಲ್ಲಿ 11 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದು ಉಳಿದ ಒಂದು ಬಿನ್ನ ಸಾಲಗಾರ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ಶ್ರೀ ಮಡಿವಾಳಪ್ಪ ಶಂಕ್ರಪ್ಪ ಜೆರಟಗಿ 101 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು.
ಅವರನ್ನು ಈ ಸಂದರ್ಭದಲ್ಲಿ ಅವಿರೋಧವಾಗಿ ಆಯ್ಕೆಯಾದ 11 ಜನ ಪಿ ಕೆ ಪಿ ಎಸ್ ಸದಸ್ಯರು, ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು, ಕಡಣಿ ಗ್ರಾಮದ ಗ್ರಾಮಸ್ಥರು ಮತ್ತು ತಾರಾಪುರ, ತಾವರಕೇಡ, ಮಡ್ನಳ್ಳಿ ಗ್ರಾಮದ ಎಲ್ಲಾ ಸದಸ್ಯರು,ಗ್ರಾಮಸ್ಥರು ಮತದಾರರು ಮಡಿವಾಳಪ್ಪ ಶಂಕ್ರಪ್ಪ ಜೇರಟಗಿ ಅವರನ್ನು ಸನ್ಮಾನಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಸಲಿಂಗಪ್ಪ ಕತ್ತಿ ಸದಸ್ಯರಾದ ಹನುಮಂತರಾಯ ಕಳಸಗೊಂಡ, ಬಸವರಾಜ ತಾವರಗೇರಿ, ಭೋಗಣ್ಣ ಲಾಳಸಂಗಿ ಖಾಜಪ್ಪ ಜಮಾದಾರ, ಯುವ ನಾಯಕರಾದ ಶರಣು ಕತ್ತಿ, ಅಣವೀರ ಕತ್ತಿ, ಗುರುಸಂಗ ಕತ್ತಿ, ನಾಗರಾಜ ಬಸಗೊಂಡ , ರೇವಣಸಿದ್ದ ಜೋಗುರ, ವೀರಭದ್ರಯ್ಯ ಗಂಗನಹಳ್ಳಿ, ಸಾಹೇಬಗೌಡ ಭೋಗೊಂಡಿ, ಪಿಕೆಪಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೀಮರಾಯ ತಾವರಿಗೇರಿ ಹಾಗೂ ಸಿಬ್ಬಂದಿ ವರ್ಗ, ಆಲಮೇಲ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ, ಊರಿನ ಹಿರಿಯರು, ಯುವಕರು ಎಲ್ಲಾ ಮುಖಂಡರು ಈ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು.
ವರದಿ ಹಣಮಂತ ಚ. ಕಟಬರ
