ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮ ಪಂಚಾಯತ್ ನಲ್ಲಿ ಇಂದು ದಿನಾಂಕ 19-02-2025 ರಂದು ಅಧ್ಯಕ್ಷ ಸ್ಥಾನದ ಚುನಾವಣೆಯು ಜರುಗಿತು.
ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಸರಸ್ವತಿ ದತ್ತು ಬಡಿಗೇರ್ ರವರು ನಾಮ ಪತ್ರ ಸಲ್ಲಿಸಿದರು.
ತರುವಾಯ ಇವರ ಎದುರಾಳಿ ಯಾರೂ ಇಲ್ಲದ ಕಾರಣದಿಂದ ಅಧ್ಯಕ್ಷರಾಗಿ ಶ್ರೀಮತಿ ಸರಸ್ವತಿ ದತ್ತು ಬಡಿಗೇರ್ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ಶ್ರೀ ನಂದೀಪ ರಾಠೋಡ್ ಹಾಗೂ ಶ್ರೀ ಎಂ ವಿ ನಾರಾಯಣಪುರ ವ್ಯವಸ್ಥಾಪಕರು ತಾಲೂಕಾ ಪಂಚಾಯತ್ ಇಂಡಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ
ಸವಿತಾ ಶ್ರೀಶೈಲ ಸಾವಳಗಿ, ವಿಠ್ಠಲಗೌಡ ಕ. ಪಾಟೀಲ್, ಭೀಮಾಶಂಕರ ಆಳೂರ, ಶ್ರೀ ಕಾಶಿನಾಥ್ ಮಾನೆ, ಶಾಯಿದ ಮುಲ್ಲಾ, ಕಲಾವತಿ ಮೋಹನ್ ರಾಠೋಡ್, ಚನ್ನಪ್ಪ ವಾಗದ್ದುರಗಿ, ಛಾಯಾ ಆರ್ ನಾಯಕೋಡಿ, ಕಲಾವತಿ ಸುಖದೇವ್ ಮೇಲಿನಮನಿ, ರೇಣುಕಾ ಅಶೋಕ್ ಖಂಡೇಕಾರ್, ವಿಲಾಸ್ ಅಂದೇವಾಡಿ, ನಜಮೀನ್ ಮ. ಮುಜಾವರ, ಹಣಮಂತ ಖಂಡೆಕಾರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ನೀಲಕಂಠ ಸಾವಳಗಿ, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಅಣ್ಣಾರಾಯ ಬಿದರಕೋಟಿ, ಶ್ರೀ ಸುರೇಶ್ ಬಿರಾದಾರ್, ಪ್ರಮೋದ್ ಸಾವಳೇ, ಸ್ವತಂತ್ರ ಶಿಂಧೆ, ಹಣಮಂತ ಬಡಿಗೇರ್, ಈರಣ್ಣ ಡಂಗಿ , ಶಿವಾನಂದ್ ಗೌಡ ಬಿರಾದಾರ್, ರಾಮನಗೌಡ ಪಾಟೀಲ್, ದಶರಥ ಚೌಹಾನ್, ಶಿವಾನಂದ ವಠಾರ, ಮಲ್ಲಣ್ಣ ಸಾಹುಕಾರ್ ತೋಳನೂರ್, ಗೌಡಪ್ಪಗೌಡ ಪಾಟೀಲ್, ಶ್ರೀ ತುಕಾರಾಮ ತಾಂಬೆ, ಪ್ರಭುಲಿಂಗ ಬೀದರಕೋಟಿ, ಸಿದ್ದಾರೂಢ ಪಾಟೀಲ್, ರಂಗನಾಥ ಭೋಸಲೆ, ಶಂಕರ ಹರಿಜನ, ಗೋಪಾಲ ಡೊಳ್ಳೆ, ಆಪ್ಪಷ್ ಮುಲ್ಲಾ, ರಮೇಶ್ ಬಡಿಗೇರ್, ಶಂಕರ್ ಬಡಿಗೇರ್, ಗುರುನಾಥ್ ಬಡಿಗೇರ್, ಉಮೇಶ್ ಭೋಸಲೆ ಹಾಗೂ ಪೊಲೀಸ್ ಸಿಬ್ಬಂದಿಯವರಾದ್ ಎ ಎಸ್ ಆಯ್ ಡಿ ಎಲ್ ರಾಠೋಡ್, ಹವಾಲ್ದಾರ್ ಎಸ್ ಎಸ್ ಶಿರಾಶ್ಯಾಡ್, ಸಹ ಸಿಬ್ಬಂದಿಯಾದ ಸಿದ್ದು ದಿಂಡ್ ವಾರ, ರಾಜಶೇಖರ್ ಕುಂಬಾರ ಮತ್ತು ಅಗರಖೇಡ ಗ್ರಾಮ ಪಂಚಾಯತಿ ಸಿಬ್ಬಂದಿಯವರಾದ ಪಿ ಡಿ ಓ ಸಂಗೀತಾ ಬಗಲಿ, ಬಸವರಾಜ್ ಆವರಾದಿ, ಬಸವರಾಜ್ ವಾಘ್ಮೋರೆ, ಕಂಪ್ಯೂಟರ್ ಆಪರೇಟರ್ ನಿಂಗಣ್ಣ ಬಿರಾದಾರ್, ಸುಭಾಷ್ ಶಿಂಧೆ, ರಾಜ ಕುಮಾರ ರಾಠೋಡ್, ದಯಾನಂದ ರೋಡಗಿ ಉಪಸ್ಥಿತರಿದ್ದರು.
ಇವರ ಆಯ್ಕೆಗೆ ಅಗರಖೇಡ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ ಗುಲಾಲ ಹಚ್ಚಿಕೊಂಡು ಪಟಾಕ್ಷಿ ಸಿಡಿಸಿ ಸಂಭ್ರಮಿಸಿದರು.
ವರದಿ ಮನೋಜ್ ನಿಂಬಾಳ
