ಬೀದರ/ ಬಸವಕಲ್ಯಾಣ : ಬಹುಜನ ಸಮಾಜ ಪಕ್ಷ ಬಸವಕಲ್ಯಾಣ ಘಟಕದ ವತಿಯಿಂದ ಇಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ವತಿಯಿಂದ ರಾಜ್ಯಾದ್ಯಂತ ಕೈಗೊಂಡ ಮುಷ್ಕರಕ್ಕೆ ಬೆಂಬಲ.
ದಿನಾಂಕ 18.02.2025 ರಂದು ಬಸವಕಲ್ಯಾಣ ತಹಸೀಲ್ ಕಚೇರಿ ಮುಂಭಾಗದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಂಘ ತಾಲೂಕು ಘಟಕ ಬಸವಕಲ್ಯಾಣ ವತಿಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಬಸವಕಲ್ಯಾಣ ಘಟಕದ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಭಾಗಿಯಾಗಿ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ದೈನಂದಿನ ಸರ್ಕಾರಿ ಕೆಲಸದಲ್ಲಿ ಸಮಸ್ಯೆಗಳು ಮತ್ತು ಕೆಲವು ಅತ್ಯವಶ್ಯಕ ಬೇಡಿಕೆಗಳನ್ನು ಆಲಿಸಲಾಗಿ ಸದರಿಉಂದದ ನ್ಯಾಯಯುತವಾದ ಬೇಡಿಕೆಗಳು ಈ ಕೆಳಕಂಡಂತಿರುತ್ತವೆ.
- ಈ ಪೌತಿ ಖಾತೆ ಆಂದೋಲನಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕರ ಇಚ್ಛೆ ಇಲ್ಲದೆ ಒತ್ತಾಯ ಪೂರ್ವಕ ಹಕ್ಕು ಬದಲಾವಣೆ ಕ್ರಮವು ಅಸಮಂಜಸ, ಖಾಸಗಿ ಒಡೆತನದ ಕೃಷಿ ಜಮೀನುಗಳ ಹಕ್ಕು ಬದಲಾವಣೆ ವಿಚಾರವು ಸಂಬಂಧಿಸಿದ ವಾರಸುದಾರರ ವೈಯಕ್ತಿಕ ವಿವೇಚನೆಗೆ ಬಿಟ್ಟ ವಿಚಾರವೇ ಆಗಿರುತ್ತದೆ. ತರಾತುರಿಯಲ್ಲಿ ಆಗದೆ ಇರುವ ಕೆಲಸವಾಗಿರುವುದರಿಂದ ಕಾನೂನು ಬದ್ಧ ವಾರಸುದಾರರನ್ನು ಕೈ ಬಿಡುವ ಪ್ರಸಂಗಗಳು ಎದುರಾಗುವ ಕಾರಣ ಸದರಿ ಆಂದೋಲನ ಕೈಬಿಡುವುದು ಸೂಕ್ತವಾಗಿರುತ್ತದೆ.
- ಸೇವಾ ವಿಷಯಕ್ಕೆ ಸಂಬಂಧಿಸಿದಂತೆ ದೈನಂದಿನ ಕೆಲಸ ಕಾರ್ಯಗಳಿಗೆ ಮೂಲಭೂತ ಸೌಲಭ್ಯಗಳು ಕಲ್ಪಿಸುವುದು ನ್ಯಾಯಯುತವಾಗಿರುತ್ತದೆ.
- ಗ್ರಾಮ ಆಡಳಿತ ಅಧಿಕಾರಿಗಳು ಪ್ರಸ್ತುತ ನಾವು ಕಂಡಂತೆ 10 ಹಲವಾರು ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಶನ್ ಮೂಲಕ ಕಾರ್ಯ ನಿರ್ವಹಿಸುತ್ತಿರುವುದರಿಂದ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ನೀಡುವುದು ಸೂಕ್ತವಾಗಿರುತ್ತದೆ.
ಹೀಗೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಕೇಂದ್ರ ಸಂಘ ನೀಡಿರುವ ಇತರೆ ನ್ಯಾಯಯುತ ಬೇಡಿಕೆಗಳ ಪಟ್ಟಿಯನ್ನು ಇಂದು ಬಹುಜನ ಸಮಾಜ ಪಕ್ಷ ಬಸವಕಲ್ಯಾಣ ಘಟಕದ ವತಿಯಿಂದ ಬಸವಕಲ್ಯಾಣ ತಹಸೀಲ್ದಾರರ ಮುಖಾಂತರ ಕರ್ನಾಟಕ ಸರ್ಕಾರದ ಮಾನ್ಯ ಕಂದಾಯ ಸಚಿವರಿಗೆ ಪತ್ರದ ಮುಖಾಂತರ ಆಗ್ರಹಿಸುತ್ತಾರೆ. ಒಂದು ವೇಳೆ ಸದರಿ ನೌಕರರ ಬೇಡಿಕೆ ಈಡೇರದೆ ಇದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ಸಮಸ್ತ ರೈತಾಪಿ ಹಾಗೂ ಕೃಷಿ ಕಾರ್ಮಿಕ ವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ದೈನಂದಿನ ಕೆಲಸ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದ್ದು ಕೂಡಲೇ ಘನ ಸರ್ಕಾರ ಕ್ರಮ ಕೈಗೊಳ್ಳಲು ಮತ್ತೊಮ್ಮೆ ಆಗ್ರಹಿಸಿರುತ್ತಾರೆ.
ಈ ಮುಷ್ಕರದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಅಶೋಕ್ ಮಂಟಾಳ್ಕರ್, ತಾಲೂಕು ಸಂಯೋಜಕರಾದ ಮಕ್ಬೂಲ್ ಸಾಬ್, ಬಹುಜನ ಸಮಾಜ ಪಕ್ಷ ಬಸವಕಲ್ಯಾಣ ಘಟಕದ ಅಧ್ಯಕ್ಷರಾದ ಶಂಕರ ಫುಲೆ, ಉಪಾಧ್ಯಕ್ಷರಾದ ರಮೇಶ ರಾಥೋಡ್, ಕಾರ್ಯದರ್ಶಿಗಳಾದ ಮಹಾದೇವ ಗಾಯಕವಾಡ, ಪ್ರಧಾನ ಕಾರ್ಯದರ್ಶಿಗಳಾದ ರವಿ ಉದಾತೆ, ವಿಷ್ಣುಕಾಂತ್ ಸೂರ್ಯವಂಶಿ ನಗರ ಘಟಕದ ಅಧ್ಯಕ್ಷರು ಚಂದ್ರಶೇಲ್ ಗಾಯಕವಾಡ ಇತರರು ಮುಷ್ಕರಕ್ಕೆ ಬೆಂಬಲ ನೀಡಿದರು.
ವರದಿ : ಶ್ರೀನಿವಾಸ ಬಿರಾದಾರ
