ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಂಗವಾಡಿ ಗ್ರಾಮದ ಹತ್ತಿರದ ಪಾರ್ವತಿ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಸಂಬಂಧ ಹನೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿ. 18-2-2025 ರಂದು ಹನೂರು ಪೊಲೀಸ್ ಠಾಣಾ ಸರಹದ್ದಿನ ಚಂಗವಾಡಿ ಗ್ರಾಮದ ಬಳಿ ಇರುವ ಶ್ರೀ ಪಾರ್ವತಿ ಬೆಟ್ಟದಲ್ಲಿ ಸುಮಾರು 30 ರಿಂದ 35 ವರ್ಷದ ಅಪರಿಚಿತ ಗಂಡಸಿನ ಶವವು ದೊರೆತಿದ್ದು ಹನೂರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದರಿ ಅಪರಿಚಿತ ವ್ಯಕ್ತಿಯ ಸಾವಿನ ಬಗ್ಗೆ ಅನುಮಾನವಿದ್ದು ಸದರಿ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಬೇಕಾಗಿರುತ್ತದೆ ಸದರಿ ಮೃತಪಟ್ಟಿರುವ ಅಪರಿಚಿತ ವ್ಯಕ್ತಿಯ ಎದೆಯ ಮೇಲೆ ನಂದ ಮತ್ತು ವಿವೇಕ ಎಂಬುದಾಗಿ ಅಚ್ಚೆ ಹಾಕಿಸಿಕೊಂಡಿರುತ್ತಾನೆ.
ಹಾಗೂ ಚಕ್ಸ್ ಶರ್ಟ್ ಹಾಕಿರುತ್ತಾನೆ. ಈತನ ಪತ್ತೆ ಬಗ್ಗೆ ಎಲ್ಲಾ ಸಿಬ್ಬಂದಿಗಳು ತಮ್ಮ ತಮ್ಮ ಬೀಟ್ ಗ್ರೂಪಿನಲ್ಲಿ ಹಾಗೂ ವೈಯಕ್ತಿಕ ವಾಟ್ಸಪ್ ಗ್ರೂಪಿನಲ್ಲಿ ಹಾಕಿ ಪ್ರಚಾರ ಮಾಡುವುದರ ಮೂಲಕ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಲು ಸಹಕರಿಸುವಂತೆ ಪೋಲಿಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ಉಸ್ಮಾನ್ ಖಾನ್
