ಅಧಿಕಾರಕ್ಕಾಗಿ ಕಚ್ಚಾಡುವ ಜನ
ಗೆದ್ದು ಗದ್ದುಗೆ ಏರಿದಾಗ ಬಡವರ ಒದ್ದ ಜನ,
ವಿದೇಶಿಯರಿಗೆ ಮರುಳಾಗಿ
ಅವರಿಗೆ ನಮ್ಮನ್ನೇ ಮಾರಿಕೊಂಡಂಥ ಜನ,
ಗಾಳಿ ಬಂದಾಗ ತೂರಿಕೊಳ್ಳುವ
ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ,
ಜಾತ್ಯಾತೀತ ದೇಶದಲ್ಲಿ ,
ಜಾತಿ, ಜಾತಿ ಎನುತ ಜಂಜಡದಲಿ, ಬಿದ್ದು ಒದ್ದಾಡುವ ಜನ,
ವಿದೇಶಿ ವ್ಯಾಮೋಹಕ್ಕೆ ಬಲಿಯಾಗಿ, ದೇಶಿಯತೆಯ
ಮರೆತ ಜನ, ಕೊನೆಗೊಂದು ದಿನ, ತಮ್ಮತನವನೇ ಮರೆತು
ಇದ್ದೂ ಇಲ್ಲದಂತಾಗಿಬಿಡುವ ಜನ, ನಾವು, ನೀವು ಇಂಥ ಜನ!
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.೫೮೩೨೩೧.
ಮೊಬೈಲ್ ಸಂಖ್ಯೆ ೭೯೯೬೭೯೦೧೮೯.
