ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಮಾನ್ಯ ಪೋಲಿಸ್ ಅಧ್ಯಕ್ಷರು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಜಯನಗರ ರವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ ಮತ್ತು ಸಾರ್ವಜನಿಕ ಕುಂದು ಕೊರತೆ ಸಭೆ ಜರುಗಿದ್ದು ಈ ಸಭೆಯಲ್ಲಿ ಗುಡೆಕೋಟೆ ಭೀಮಸಮುದ್ರ , ಗುಂಡ ಮುಡುಗು, ಕಾನ ಹೊಸಳ್ಳಿ ಹಾಗೂ ಕೂಡ್ಲಿಗಿ ನಗರದ ಸೇರಿದಂತೆ ಇತರೆ ಗ್ರಾಮದಿಂದ ಸಾರ್ವಜನಿಕರು ಕಂದಾಯ ಇಲಾಖೆ , ಗ್ರಾಮ ಪಂಚಾಯಿತಿ , ತಾಲೂಕು ಪಂಚಾಯಿತಿ ಭೂಮಾಪನ ಇಲಾಖೆ ಮೊದಲಾದ ಇಲಾಖೆಗಳಲ್ಲಿ ತಮ್ಮ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಸುಮಾರು 13 ಕುಂದು ಕೊರತೆ ಅರ್ಜಿಗಳನ್ನು ಸಲ್ಲಿಸಿದ್ದು ಮಾನ್ಯ ಪೋಲಿಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ರವರು ಅರ್ಜಿಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ನೀಡಿ ನಿಗದಿತ ದಿನದಲ್ಲಿ ನಿಯಾಮನುಸಾರ ವಿಲೇ ಮಾಡುವಂತೆ ಸೂಚನೆ ನೀಡಿದರು.
ಅಲ್ಲದೆ ಎಲ್ಲಾ ಇಲಾಖೆಯವರು ಸಕಾಲ ಬೋರ್ಡ್, ಆರ್ ಟಿ ಐ ಮಾಹಿತಿ ಬೋರ್ಡ್, ಲೋಕಾಯುಕ್ತ ಇಲಾಖೆಯ ಬೋರ್ಡ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮಾಹಿತಿ ತಲುಪಿಸುವುದು ಹಾಗೂ ಸಾರ್ವಜನಿಕರಿಗೆ ವಿನಾಕಾರಣ ಸತಾಯಿಸದೆ ಅವರ ಕೆಲಸವನ್ನು ನಿಯಮನುಸಾರ ಮಾಡಿಕೊಡಬೇಕೆಂದು ಸೂಚನೆಗಳನ್ನು ನೀಡಿದರು.
ಈ ಸಭೆಯಲ್ಲಿ ಶ್ರೀ ಸಿದ್ದರಾಜು ಮಾನ್ಯ ಪೊಲೀಸ್ ಅಧಿಕ್ಷಕರು, ಕರ್ನಾಟಕ ಲೋಕಾಯುಕ್ತ ಬಳ್ಳಾರಿ ವಿಜಯನಗರ, ಶ್ರೀ ಅಮರೇಶ್ ಹುಬ್ಬಳ್ಳಿ, ಪೊಲೀಸ್ ಇನ್ಸ್ಪೆಕ್ಟರ್ ಕರ್ನಾಟಕ ಲೋಕಾಯುಕ್ತ ವಿಜಯನಗರ ಜಿಲ್ಲೆ, ಶ್ರೀಮತಿ ರೇಣುಕಾ ತಹಶೀಲ್ದಾರರು ಕೂಡ್ಲಿಗಿ, ಶ್ರೀ ನರಸಪ್ಪ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯಿತಿ ಕೂಡ್ಲಿಗಿ, ನೇತ್ರಾವತಿ ಸೇರಿದಂತೆ ಮೊದಲಾದ ಅಧಿಕಾರಿಗಳು ಹಾಜರಿದ್ದರು. ಸಭೆಯ ನಂತರ ಕೂಡ್ಲಿಗಿ ತಾಲೂಕಿನ ಆಸ್ಪತ್ರೆ ಹಾಗೂ ಹೊಸಪೇಟೆ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರ ಪರಿಶೀಲನೆ ಮಾಡಿದರು ಹಾಗೂ ಸೂಕ್ತ ಸೂಚನೆ ಸಲಹೆಗಳನ್ನು ನೀಡಿದರು.
