
ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಮಾಚ್೯-7 ರಂದು ಮಂಡಿಸಲಿರುವ ಪ್ರಸಕ್ತ ಸಾಲಿನ ಈ 2025 -26 ನೇ ಸಾಲಿನ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿಯು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದು 100 ಕೋಟಿ ರೂ.ಮೀಸಲಿಡುವಂತೆ ಡಾ. ಎಂ.ಬಿ ಹಡಪದ
ಒತ್ತಾಯಿಸಿದ್ದಾರೆ.
ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿಯು ಕಳೆದ ಎರಡು ವರ್ಷದಲ್ಲಿ ಬಿಜೆಪಿ ಸರ್ಕಾರದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಘೋಷಣೆ ಮಾಡಿ ಆದೇಶ ಹೊರಡಿಸಿದರು. ಈ ನಿಗಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಬೇಕು,
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಡಿಸಿಎಂ. ಡಿ.ಕೆ ಶಿವಕುಮಾರ್ ಮತ್ತು ಅನೇಕ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಹಡಪದ ಅಪ್ಪಣ್ಣ ಸಮಾಜದ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿ ಹಾಗೇಯೇ ಬಸವಕಲ್ಯಾಣದಲ್ಲಿ ಇರುವ ಬಸವಣ್ಣನವರ ಗವಿ (ಅರಿವಿನ) ಮನೆಯ ಪಕ್ಕದಲ್ಲಿ ಹಡಪದ ಅಪ್ಪಣ್ಣ ನವರ ಗವಿ( ಅರಿವಿನ ಮನೆಯನ್ನು ) ಬಿಕೆಡಿಬಿ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸಬೇಕು ಮತ್ತು ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಜನ್ಮಸ್ಥಳ ಹಾಗೂ ದೇಗಿನಾಳ ಗ್ರಾಮದಲ್ಲಿ ಇರುವ ಹಡಪದ ಲಿಂಗಮ್ಮನವರ ಜನ್ಮಸ್ಥಳವನ್ನು ಕೂಡಲಸಂಗಮ ಪ್ರಾಧಿಕಾರಕ್ಕೆ ಸೇರಿಸಿ ಅಭಿವೃದ್ಧಿ ಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ಜಿಲ್ಲೆಯ ವಿಶ್ವ ವಿದ್ಯಾಲಯದಲ್ಲಿ ಇರುವ ಶರಣ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠಕ್ಕೆ ಪ್ರತ್ಯೇಕ ಕಟ್ಟಡದ ಅಭಿವೃದ್ಧಿಗೆ 10. ಕೋಟಿ ರೂಪಾಯಿಗಳು ನೀಡಬೇಕು ಮತ್ತು ಈ ಹಡಪದ ಅಪ್ಪಣ್ಣ ಸಮಾಜಕ್ಕೆ ಪರ್ಯಾಯ ಪದವಾದ ನಾಯಿಂದ ಉಪ ಜಾತಿಯನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಆಗಬೇಕು. ಈ ನಾಯಿಂದ ಉಪ ಜಾತಿಯಲ್ಲಿ ಬರುವ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ರಾಜ್ಯಾದ್ಯಂತ ಅನೇಕ ಗ್ರಾಮೀಣ ಭಾಗದಲ್ಲಿ ಇರುವ ಕ್ಷೌರಿಕ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ” ಕ್ಷೌರ ಕುಟೀರಗಳು’ ನೀಡುವಂತೆ ಮತ್ತು ಸಮಾಜದ ಜನತೆಯು ಯಾವುದೇ ಗ್ರಾಹಕರು ಬರಲಿ ಅವರಿಗೆ ಯಾವುದೇ ರೋಗ ರುಜಿನಗಳು ರೋಗದ ಲಕ್ಷಣಗಳು ಇದ್ದರೂ ಸಹ ಅವರಿಗೆ ಕ್ಷೌರ ಸೇವೆ ಸಲ್ಲಿಸುತ್ತಾರೆ ಈ ಕ್ಷೌರಿಕ ಕುಟುಂಬಕ್ಕೆ ಈ ವೃತ್ತಿಯನ್ನು ಮಾಡುವ ಕಾಯಕ ಬಂಧುಗಳಿಗೆ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ವಿಮೆ ಮತ್ತು ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆರೋಗ್ಯ ಇಲಾಖೆಯ ಅಡಿಯಲ್ಲಿ ಸ್ಮಾರ್ಟ್ ಕಾರ್ಡ್ ನೀಡುವಂತೆ ಮನವಿ ಮತ್ತು ಈ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜಕ್ಕೆ ಅನ್ಯಾಯ ವಾಗದಿರಲಿ ಇನ್ನು ಈ ಸಮುದಾಯದ ಬೇಡಿಕೆಯನ್ನು ಪರಿಗಣಿಸಿ ಇದೇ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡದೆ ಅನೇಕ ಶಾಸಕರು ಈ ಸಮಾಜದ ಪರವಾಗಿ ಧ್ವನಿಯಾಗದೆ ಅನ್ಯಾಯ ವಾಗಿದೆ.?
ಬರಿ ನಿಮಗೆ ಸಮಾಜದ ಮತಗಳು ಚುನಾವಣೆಯಲ್ಲಿ ಪಡೆದು ಈಗ ಈ ಸಮಾಜಕ್ಕೆ ಮೀಸಲಾತಿ ನೀಡಿದೆ ಇದ್ದರೆ ಹೇಗೆ.? ಈ ಸಮಾಜವನ್ನು ಪರಿಗಣಿಸಿ ಈ ಹಿಂದುಳಿದ ಸಮಾಜವನ್ನು ಎಸ್ ಸಿ ಗೆ ಅಥವಾ ಎಸ್ ಟಿ ಗೆ ಸೇರಿಸುವ ಕೆಲಸ ರಾಜ್ಯ ಸರ್ಕಾರ ಮಾಡಲಿ.? ಈ ಸಣ್ಣ ಸಣ್ಣ ಸಮುದಾಯದ ಅಭಿವೃದ್ದಿಗೆ ನ್ಯಾಯ ಸಿಗಲಿ. ತಾವು ಇದೇ ಮಾರ್ಚ-೭ ರಂದು ಮಂಡನೆ ಮಾಡಲಿರುವ ರಾಜ್ಯ ಬಜೆಟ್ ನಲ್ಲಿ ಹಡಪದ ಅಪ್ಪಣ್ಣ ಸಮಾಜಕ್ಕೆ ,ಅನ್ಯಾಯ ಆಗದಿರಲಿ.?
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನತೆಯ ಹರಿಕಾರ ಎಂಬುದು ಎಲ್ಲರ ಮಟ್ಟಿಗೆ ಹುಸಿಯಾಗಬಾರದು ಎಂದು ರಾಜ್ಯ ಸರ್ಕಾರಕ್ಕೆ ಕಲಬುರ್ಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಒತ್ತಾಯಿಸಿದರು.
~ ಕರುನಾಡ ಕಂದ
