ಯಾದಗಿರಿ : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಗೆ ಪಕ್ಷದ ವತಿಯಿಂದ ನಡೆದ ಆನ್ಲೈನ್ ಚುನಾವಣೆಯಲ್ಲಿ 1838 ಮತ ಪಡೆಯುವ ಮೂಲಕ ಯಾದಗಿರಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ಸಂಜಯ್ ಕುಮಾರ್ ಕವಲಿ ಅವರು ಆಯ್ಕೆಯಾಗಿದ್ದಾರೆ ಈ ಸಂಬಂಧ ಅವರಿಗೆ ಯಾದಗಿರಿ ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು. ನಂತರ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್ ಸಿ ವಿಭಾಗ ಸಂಘಟನಾ ಕಾರ್ಯದರ್ಶಿ ಹಾಗೂ ಕುರಕುಂದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಮಲ್ಲು ಹಲಗಿ ಅವರು ಮಾತನಾಡಿ ಸಂಜಯ್ ಕುಮಾರ್ ಕವಲಿ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಪ್ರಮಾಣಿಕರಾಗಿ ಕಾಂಗ್ರೆಸ್ ಪಕ್ಷದ ಹಲವಾರು ಹೋರಾಟಗಳನ್ನು ಮಾಡಿದ್ದಾರೆ ಮತ್ತು ಮೂರು ಬಾರಿ NSUI ಜಿಲ್ಲಾಧ್ಯಕ್ಷರಾಗಿ ಹಾಗೂ NSUI ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ತುಂಬಾ ಹರ್ಷ ಸಂಗತಿಯಾಗಿದೆ ಮುಂದೆ ದೇವರು ಇನ್ನು ಉನ್ನತ ಹುದ್ದೆಗಳು ಸಿಗುವಂತೆ ಆಶೀರ್ವದಿಸಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಣಮಂತ ಮಾಲಹಳ್ಳಿ, ಯಲ್ಲಪ್ಪ ಹೊರಟೂರ್, ಮರಲಿಂಗಪ್ಪ ಹೊನಗುಡಿ ಹಾಲಗೇರಾ, ವೆಂಕಟೇಶ ದಾಸನಕೇರ, ವ ಶಿವಶರಣಪ್ಪ ಗೋನಲ್ ಹಾಜರಿದ್ದರು.
