ನೀ ಬರುವ ದಾರಿ ಕಾಯುತಿರುವೆ ಯಾವ ದಾರಿಯಾದರೂ ಬಾ ಆವ ರೂಪದಲ್ಲಾದರೂ ಬಾ ತೆರೆದ ಹೃದಯ ಭಕ್ತಿಯಿಂದ ಕರೆವೆ ಪ್ರೀತಿಯಿಂದ ಪ್ರೇಮದಿಂದ ಸ್ವಾಗತಿಸುವೆ ಮನದಾಳದ ಅಂತರಂಗದಿಂದ ಕರೆಯುವೆ ಎನ್ನ ಕರೆಗೆ ಓಗೊಟ್ಟು ಓಡೋಡಿ ಬಾ ಬಾ ಬಾ ಬಾ ಬಾ//
ನೀನೇ ನನ್ನ ಪ್ರಾಣ ನೀನೇ ನನ್ನ ಮಾನ ನೀನಿಲ್ಲದೆ ಬದುಕಲಾರೆ ಜೀವನ
ನಿನ್ನದೇ ಧ್ಯಾನ ನಿನ್ನದೇ ಗ್ಯಾನ ಹಗಲಿರುಳು ನಿನ್ನ ನಾಮವೇ ಪಠಣ ಅರ್ಪಣೆ ನಿನಗೆ ಎನ್ನ ಸರ್ವಸ್ವ ಪ್ರೇಮ ಪ್ರೀತಿ ಮೋಹ ಮದ ಮತ್ಸರ ನಿನಗಿಂತ ಎನಗಾರಿಲ್ಲ ನೀನೇ ಎನ್ನ ಜೀವ ನೀನೆ ಎನ್ನ ಭಾವ ಭಕ್ತಿ ಪ್ರೀತಿ ಪ್ರೇಮದಿಂದ ಕರೆದರೆ ಬರಲಾರೆಯಾ?
ಜೀವ ಇರುವವರೆಗೂ ಕಾಯುತಿರುವೆ ಇಂದು ಬಾ ನಾಳೆ ಬಾ
ಯಾವಾಗಲಾದರೂ ಬಾ ಬಾ ಬಾ ಬಾ ಬಾ//
ಜೀವ ನೀನೆ ಜನ್ಮ ನೀನೇ ಸೃಷ್ಟಿ ನೀನೇ ಸೃಜನ ನೀನೇ ಆಕಾರವು ನೀನೆ ನಿರಾಕಾರವು ನೀನೆ ಎನ್ನೊಳಗಿನ ಪ್ರೀತಿಯೂ ನೀನೆ ಅಗ್ನಿಯು ನೀನೇ ಹೇಗಾದರೂ ಬಾ ಹಾಗಾದರೂ ಬಾ ಹೀಗಾದರೂ ಬಾ
ಎನ್ನೊಳು ನೀ ನಿನ್ನೊಳು ನಾ ಸಮರ್ಪಿತರಾಗೋಣ ಬಾ ಬಾ ಬಾ ಬಾ ಬಾ//.
ಕವಿ : ಹನುಮಂತರಾವ್ ನಾಗಪ್ಪಗೋಳ ಗೋಕಾಕ
