ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ :
ದಿ: 21/02/2025 ರಂದು ಬೆಳಗಾವಿಯ ಬಾಳೆಕುಂದ್ರಿಯಲ್ಲಿ ನಮ್ಮ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಟಿಕೆಟ್ ಪಡೆದುಕೊಳ್ಳಿ ಎಂದು ತಿಳಿಸಿದ ಕಾರಣಕ್ಕೆ ಹಣ ಕೊಟ್ಟು ಟಿಕೆಟ್ ಪಡೆಯುವ ಬದಲು ಕನ್ನಡ ಮಾತನಾಡುತ್ತೀಯ ಮರಾಠಿ ಮಾತನಾಡು ಎಂದು ನಿರ್ವಾಹಕ (ಕಂಡೆಕ್ಟರ್) ಮೇಲೆ ಹಲ್ಲೆ ಮಾಡಿ ನಂತರ ಗ್ರಾಮದ ಅನೇಕ ಜನರನ್ನು ಕರೆಸಿ ಬಸ್ ತಡೆದು ಪುನಃ ಗುಂಪಿನ ಜೊತೆಗೂಡಿ ನಿರ್ವಾಹಕ ಮತ್ತು ಚಾಲಕ ಇಬ್ಬರ ಮೇಲೆ ಹಲ್ಲೆ ಮಾಡಿರುವುದನ್ನ ಜಯ ಕರ್ನಾಟಕ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ .
ಹಲ್ಲೆ ಮಾಡಿರುವ ಕನ್ನಡ, ಕರ್ನಾಟಕ ದ್ರೋಹಿಗಳನ್ನು ಕೇವಲ ಬಂಧಿಸಿರುವುದು ಸಾಲದು ಇಂತಹ ಕೃತ್ಯಗಳು ಮರುಕಳಿಸಬಾರದು ಎಂದರೆ ಹಲ್ಲೆಗೊಳಗಾದ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಮತ್ತು ಉಳಿದ ಚಾಲಕರುಗಳು ಹಾಗೂ ನಿರ್ವಾಹಕರು ನಿರ್ಭೀತಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದರೆ ಹಲ್ಲೆ ಮಾಡಿದ ಪುಂಡರನ್ನು ಗಡಿಪಾರು ಮಾಡಿ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ಕೊಡಬೇಕೆಂದು ಮತ್ತು ಹಲ್ಲೆಗೊಳಗಾದ ತಮ್ಮ ಇಲಾಖೆಯ ಸಿಬ್ಬಂದಿಗೆ ಧೈರ್ಯ ತುಂಬಾ ಕೆಲಸ ಮಾಡಬೇಕೆಂದು ವೈಯಕ್ತಿಕವಾಗಿ ಮತ್ತು ಸಾರ್ವಜನಿಕವಾಗಿ ಹೇಳಿಕೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಜಯ ಕರ್ನಾಟಕ ಸಂಘಟನೆಯ ವತಿಯಿಂದ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಡಾ.
ಬಿ.ಎನ್.ಜಗದೀಶ್ ರವರ ಪರವಾಗಿ ತಮಗೆ ಆಗ್ರಹದ ಮನವಿ ಸಲ್ಲಿಸುತ್ತೇವೆ. ಸಿ.ಪಿ.ಐ ಅನುಪಸ್ಥಿತಿಯಲ್ಲಿ ಹೆಡ್ ಕಾನ್ಸ್ಟೇಬಲ್ ಶಂಕರ್ ಗೌಡ ಮನವಿಯನ್ನ ಸ್ವೀಕರಿಸಿದರು ಎಂದು ಜಯ ಕರ್ನಾಟಕ ಸಂಘಟನೆ ಗ್ರಾಮ ಘಟಕದ ಅಧ್ಯಕ್ಷ ಪ್ರಕಾಶ್ ಆರ್. ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಉಪಾಧ್ಯಕ್ಷರಾದ ಮಂಜುನಾಥ್ ಸಿ ಉಪಾಧ್ಯಕ್ಷರಾದ ಸಿದ್ದೇಶ್ ಕೆ.ಬಿ ಗ್ರಾಮ ಕಾರ್ಯಾಧ್ಯಕ್ಷರಾದ ಸಂತೋಷ್ ಎಲ್. ಪ್ರಧಾನ ಕಾರ್ಯದರ್ಶಿ ದೇವರಮನಿ ನಿಂಗಪ್ಪ ಉಪಾಧ್ಯಕ್ಷರು ಈಶ್ವರ್ ನಾಯ್ಕ್ ಸಂಘಟನಾ ಕಾರ್ಯದರ್ಶಿ ಕೃಷ್ಣ ನಾಯ್ಕ್ , ಶಿವಕುಮಾರ್ ಕೆ ಸದಸ್ಯರಾದ ಬೋವಿ ಅಭಿಷೇಕ್ , ಕರಿಬಸವರಾಜ್ ಪೊಲೀಸ್ ಸಿಬ್ಬಂದಿಗಳಾದ ದಶರಥ್ , ಮಲ್ಲೇಶ್ ನಾಯ್ಕ ಇತರರು ಇದ್ದರು.
