ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ದೇಶದ ಅಭಿವೃದ್ಧಿಗಾಗಿ ಯುವ ಪೀಳಿಗೆಯ ಪಾತ್ರ ತುಂಬಾ ಮುಖ್ಯ : ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಸರಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಡಾಕ್ಟರ್ ಎನ್. ಟಿ. ಶ್ರೀನಿವಾಸ್ ನೇತೃತ್ವದಲ್ಲಿ ಸಂತೋಷ್ ಎಸ್ ಲಾಡ್ ಫೌಂಡೇಶನ್ ನಿಂದ ಭಾನುವಾರ ಆಯೋಜಿಸಿದ ಬೃಹತ್ ಉದ್ಯೋಗ ಸಾವಿರಾರು ಯುವಕ ಯುವತಿಯರು ಈ ಉದ್ಯೋಗ ಮೇಳಕ್ಕೆ ಸೇರಿದ್ದರು. ಕೂಡ್ಲಿಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರುದ್ಯೋಗದ ಸಮಸ್ಯೆ ತುಂಬಾ ತಾಂಡವಾಡುತ್ತಿದೆ ಎಂದು ಮಾನ್ಯ ಕ್ಷೇತ್ರದ ಶಾಸಕರಾದ ಎನ್. ಟಿ. ಶ್ರೀನಿವಾಸ್ ಯುವ ಪೀಳಿಗೆಗೋಸ್ಕರ ಹಾಗೂ ತನ್ನ ಕ್ಷೇತ್ರದ ಅಭಿವೃದ್ಧಿಗೋಸ್ಕರ ನಿರುದ್ಯೋಗದ ಸಮಸ್ಯೆ ಅರಿತು ಪ್ರತಿ ಕ್ಷೇತ್ರದ ಹಳ್ಳಿ-ಹಳ್ಳಿಗೆ ಹೋಗಿ ನಿರುದ್ಯೋಗದ ಸಮಸ್ಯೆ ಹಾಗೂ ಶಿಕ್ಷಣದ ಸಮಸ್ಯೆ ಹತ್ತು ಹಲವರು ಸಮಸ್ಯೆಗಳನ್ನು ಕಂಡುಕೊಂಡು ಕ್ಷೇತ್ರದ ಏಳಿಗೆಗೋಸ್ಕರ ಭಾನುವಾರ ನಡೆದಂತ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆಯನ್ನು ಸಹ ನೀಡಿರುತ್ತಾರೆ, ಕ್ಷೇತ್ರದ ಯುವ ಪೀಳಿಗೆ ನಿರುದ್ಯೋಗದಿಂದ ಇರೋದನ್ನು ಗಮನಿಸಿ ಅವರು ನಮ್ಮ ಕ್ಷೇತ್ರದ ಜನರು ತುಂಬಾ ಬಡತನ ಹಾಗೂ ಕೃಷಿನೇ ಅವಲಂಬಿಸಿ ಜೀವನ ನಡೆಸುವಂತಹ ಭಾಗವಾಗಿದೆ ಆದ್ದರಿಂದ ಎಷ್ಟು ಯುವ ಯುವಕರು ಯುವತಿಯರು ಮನೆಯಲ್ಲಿ ಕೆಲಸ ಇಲ್ಲದೆ ಆರ್ಥಿಕ ಸಮಸ್ಯೆ ಎದುರಿಸುತ್ತಿರುವುದನ್ನು ಅರಿತು ಶಾಸಕರು ಇಂದು ಉದ್ಯೋಗ ಮೇಳಕ್ಕೆ ಒಂದು ಅವಕಾಶ ಕಲ್ಪಿಸಿದ್ದಾರೆ ಅದನ್ನು ಎಲ್ಲಾ ಈ ಕ್ಷೇತ್ರದ ಯುವಕ ಯುವತಿಯರು ಹಾಗೂ ನಾನಾ ಜಿಲ್ಲೆ, ತಾಲೂಕುಗಳಿಂದ ಬಂದು ಉದ್ಯೋಗವನ್ನು ಸಹ ಗಿಟ್ಟಿಸಿಕೊಂಡಿದ್ದಾರೆ ಇಂದು ಹೇಳಬಹುದು ಈಗಿನ ಯುವಕ ಯುವತಿಯರು ಹಲವಾರು ದುಶ್ಚಟಗಳಿಗೆ ಮಾರುಹೋಗಿ ಜೀವನವನ್ನೇ ಹಾಳು ಮಾಡಿಕೊಳ್ಳುವುದರ ಬದಲು ಒಂದು ಸುವರ್ಣ ಅವಕಾಶ ಉಪಯೋಗ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಒಂದು ದಾರಿ ಆಗಿದೆ ಎಂದು ಹೇಳಿದರೆ ತಪ್ಪಾಗಲಾರದು, ತನ್ನ ಮನೆಯ ಆರ್ಥಿಕತೆ ಹಾಗೂ ತನ್ನ ಬದಲಾವಣೆ ಹಾಗೂ ದೇಶದ ಬದಲಾವಣೆ ತರುವುದರಲ್ಲಿ ಯುವಪೀಳಿಗೆ ತುಂಬಾ ಮುಖ್ಯ ಪಾತ್ರವಾಗಿದೆ ಏಕೆಂದರೆ ದೇಶದ ಪ್ರಗತಿ ನಿಲ್ಲುವುದೇ ಯುವ ಪೀಳಿಗೆಯ ಮೇಲೆ ಅದಕ್ಕಾಗಿ ನಿರುದ್ಯೋಗದಿಂದ ಹೊರಬಂದು ಎಲ್ಲರೂ ಉದ್ಯೋಗದ ಪಡೆದು ತನ್ನ ಮನೆ ಹಾಗೂ ದೇಶದ ಪ್ರಗತಿಯನ್ನು ಸಾಧಿಸಲು ತುಂಬಾ ಅನುಕೂಲಕವಾಗಿದೆ ಯುವ ಪೀಳಿಗೆಯರ ಪಾತ್ರ ಮುಖ್ಯವಾಗಿದೆ ಎಂದರು.

ದೇಶದ ಬೆಳವಣಿಗೆ ಹಾಗೂ ಪ್ರಗತಿ ಯುವ ಪೀಳಿಗೆಯಿಂದ ಮಾತ್ರ ಸಾಧ್ಯ ಎಂದು ಕಾರ್ಮಿಕ ಸಚಿವರಾದ ಸಂತೋಷ ಎಸ್ ಲಾಡ್ ಅವರು ವ್ಯಕ್ತಪಡಿಸುತ್ತಾರೆ 50 ಕ್ಕೂ ಹೆಚ್ಚು ಉದ್ಯೋಗದಾತರು ಹಾಗೂ ನಾಲ್ಕು ಸಾವಿರಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಆಯೋಜಿಸಲಾಗಿದೆ ಹಾಗೂ ಇನ್ನೂ ವಿಶೇಷ ಚೇತನರಿಗೂ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಇದರಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಬಿಎ, ಬಿ ಕಾಂ, ಬಿಬಿಎಂ ಪ್ಯಾರಾ ಮೆಡಿಕಲ್, ನರ್ಸಿಂಗ್ ಇನ್ನೂ ಮುಂತಾದ ವಿದ್ಯಾರ್ಥಿಗಳು ಉಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಕಾವಲ್ಲಿ ಶಿವಪ್ಪ ನಾಯಕ್, ಬಳ್ಳಾರಿ ಸಂಸದ ಈ ತುಕಾರಾಂ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಕಾಂಗ್ರೆಸ್ ಮುಖಂಡರಾದ ಎನ್ ಟಿ ತಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಗುರುಸಿದ್ದನಗೌಡ, ರಾಜ್ಯ ಮಹಿಳಾ ಕಾಂಗ್ರೆಸ್ ನಾಗಮಣಿ ಜಂಕಲ್, ಗ್ಯಾರೆಂಟಿ ಸಮಿತಿಯ ಜಿಲ್ಲಾಧ್ಯಕ್ಷರು, ಪಟ್ಟಣ ಪಂಚಾಯತಿ ಅಧ್ಯಕ್ಷರು ಸದಸ್ಯರು, ಕಾಂಗ್ರೆಸ್ ಮುಖಂಡರು ಇನ್ನೂ ಮುಂತಾದ ಹಲವಾರು ಹಳ್ಳಿಯಿಂದ ಸಾರ್ವಜನಿಕರು ಸೇರಿದ್ದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ