ಉತ್ತರ ಪ್ರದೇಶದ ಪ್ರಯಾಗರಾಜ್ ಕುಂಭ ಮೇಳದಲ್ಲಿ ಮಾಜಿ ಗೃಹ ಸಚಿವರಾದ ಪಿ.ಜಿ.ಆರ್ ಸಿಂಧೆ ಅವರು ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಶಾಹಿ ಪುಣ್ಯ ಸ್ನಾನ ಮಾಡಿದರು. ಇವರ ಜೊತೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿಶ್ವಕರ್ಮ ಯುವ ಮುಖಂಡರಾದ ವೀರೇಶ ಚನ್ನಳ್ಳಿ ಅವರು ತ್ರಿವೇಣಿ ಸಂಗಮದಲ್ಲಿ ಶಾಹಿ ಪುಣ್ಯ ಸ್ನಾನ ಮಾಡಿದರು.
144 ವರ್ಷಗಳಿಗೊಮ್ಮೆ ಬರುವ ಈ ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಮುಳುಗಿ ಏಳುವುದು ಸುದೈವವೇ ಸರಿ. ಈ ಅಭೂತಪೂರ್ವ ಕುಂಭ ಮೇಳದಲ್ಲಿ ಭಾಗವಹಿಸಿದ ಸಂತಸ ನನಗಾಗಿದೆ ಅದರಲ್ಲೂ ರಾಜ್ಯಕ್ಕೆ ಗೃಹ ಮಂತ್ರಿಗಳಾಗಿ ತಮ್ಮದೇ ಕೊಡುಗೆ ನೀಡಿದ ಪಿ.ಜಿ.ಆರ್ ಸಿಂಧೆ ಅವರನ್ನು ಭೇಟಿ ಮಾಡಿ ಅವರ ಜೊತೆಯಲ್ಲಿ ಮಹಾ ಕುಂಭ ಮೇಳದಲ್ಲಿ ಭಾಗವಹಿಸಿರುವುದು ನನಗೆ ಅತ್ಯಂತ ಜೀವನ ಪರ್ಯಂತ ಸವಿನೆನಪು ಉಳಿಯುವಂತೆ ಮಾಡಿದೆ ಎಂದು ಸವಿನೆನಪುಗಳನ್ನು ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಸಮಸ್ತ ನಾಡಿನ ಜನತೆಗೆ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ಜನರ ಏಳಿಗೆಗೆ ಪ್ರಾರ್ಥನೆ ಸಲ್ಲಿಸಿರುವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗೋಜಿ ರಾವ್ ಮರಾಠ ಜಾಲಿಹಾಳ, ಸುರೇಶಗೌಡ ಕೆ ಹಂಚಿನಾಳ, ಮಂಜುನಾಥ ಸೂಗೂರು, ಶ್ರೀಧರ ಪಬ್ಲಿಕ್ ಸ್ಕೂಲ್ ಸಂಸ್ಥಾಪಕರು ಕೆ ಹಂಚಿನಾಳ ಅವರು ಇದ್ದರು.
