ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿ ನಗರದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಎದುರಿಗೆ ರಬಕವಿ ಬನಹಟ್ಟಿ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿ ಅವಘಡಗಳ ಅರಿವು ಮತ್ತು ಅಗ್ನಿ ಅನಾಹುತ ತಡೆಗಟ್ಟುವ ದಿನವನ್ನಾಗಿ ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಗ್ನಿಶಾಮಕ ಠಾಣೆಯ ಜಾವೇದ್ ಸಯ್ಯದ್ ಅವರು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ವತಿಯಿಂದ ಪ್ರತಿ ವರ್ಷ ಫೆಬ್ರುವರಿ 23 ರಂದು ಅಗ್ನಿ ಅವಗಡಗಳ ಅರಿವು ಮತ್ತು ಅನಾಹುತ ತಡೆಗುಟ್ಟುವ ದಿನವನ್ನಾಗಿ ಆಚರಿಸಲಾಗುತ್ತಿದ್ದು , ಏಕೆಂದರೆ ಫೆಬ್ರುವರಿ 23 – 2010 ರಂದು ಬೆಂಗಳೂರಿನ ಕಾಟನ್ ಟವರಿನಲ್ಲಿ ಸುಮಾರು 9 ಜನ ಬೆಂಕಿ ಅನಾಹುತದಿಂದ ಮರಣ ಹೊಂದಿದ್ದರು. ಆದ್ದರಿಂದ ಕರ್ನಾಟಕ ರಾಜ್ಯದ ಇನ್ನಿತರ ಪ್ರದೇಶಗಳಲ್ಲಿ ಅಗ್ನಿ ಅವಘಡಗಳ ಅನಾಹುತದಿಂದ ಸಾರ್ವಜನಿಕರು ಮುಕ್ತಿ ಹೊಂದಲಿ ಎಂಬ ಉದ್ದೇಶದಿಂದ ಫೆಬ್ರವರಿ 23 ರಂದು ಅಗ್ನಿ ಅವಡಗಳ ಅರಿವು ದಿನವನ್ನಾಗಿ ರಾಜ್ಯ ಸರ್ಕಾರವು ಘೋಷಣೆ ಮಾಡಿದೆ ಆದ್ದರಿಂದ ಈ ಸಮಯದಲ್ಲಿ ಕರ್ನಾಟಕದ ಪ್ರತಿಯೊಂದು ಅಗ್ನಿಶಾಮಕ ಠಾಣೆಗಳಲ್ಲಿ, ಸಾರ್ವಜನಿಕ ಬಸ್ ನಿಲ್ದಾಣವಾಗಿರಬಹುದು, ರೈಲ್ವೆ ನಿಲ್ದಾಣವಾಗಿರಬಹುದು, ಮಾಲ್ ಆಗಿರಬಹುದು , ಕೈಗಾರಿಕಾ ಪ್ರದೇಶವಾಗಿರಬಹುದು ಇಂತಹ ಸ್ಥಳಗಳಗಳಲ್ಲಿ ಹೋಗಿ ನಾವು ಅಗ್ನಿ ಮತ್ತು ಅವಗಡಗಳ ಬಗ್ಗೆ ಅರಿವು ಮೂಡಿಸುತ್ತಾ ಇದ್ದೀವಿ ಬೆಂಕಿಯ ಪ್ರಮಾಣ ಸ್ವಲ್ಪ ಮಟ್ಟಿಗೆ ಇದ್ದಲ್ಲಿ ನಾವು ಸ್ಥಳಕ್ಕೆ ಬಂದು ಆರಿಸಬಹುದು ಅದೇ ಬೆಂಕಿ ಪ್ರಮಾಣ ದೊಡ್ಡ ಪ್ರಮಾಣವಾದಾಗ ಭಾರೀ ಪ್ರಮಾಣದಲ್ಲಿ ಸಾರ್ವಜನಿಕರ ಆಸ್ತಿಪಾಸ್ತಿಗಳ ಹಾನಿ ಉಂಟು ಮಾಡುತ್ತದೆ. ಆದ ಕಾರಣ ಫೆಬ್ರುವರಿ 23ರಂದು ಅಗ್ನಿ ಅವಗಡಗಳ ಅರಿವು ಮತ್ತು ಅನಾಹುತ ತಡೆಗಟ್ಟುವ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆ ರಬಕವಿ ಬನಹಟ್ಟಿ ಠಾಣಾಧಿಕಾರಿ ಆರ್ .ಜಿ ಚಿವಟೆ, ಪ್ರಮುಖ ಅಗ್ನಿಶಾಮಕ ಎ ಎಸ್ ಜಡೆನ್ನವರ,
ಅಗ್ನಿಶಾಮಕ ಚಾಲಕ ಶ್ರೀ ಪಿ ಆರ್ ರಾಥೋಡ್ ಅಗ್ನಿಶಾಮಕ ಎಸ್ ವಿ ಮೇಲಾಪುರ್
ಅಗ್ನಿಶಾಮಕ ಬಿ ಕೆ ಚೌಗುಲ
ಅಗ್ನಿಶಾಮಕ ಕೆ ಜಿ ಬಿಸಲ ನಾಯಕ್ ಹಾಜರಿದ್ದರು.
ವರದಿ ಮಹಿಬೂಬ್ ಎಂ. ಬಾರಿಗಡ್ಡಿ
