
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗೋಕುಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ 9ನೇ ಜಾತ್ರಾಮಹೋತ್ಸವ ನಿಮಿತ್ತ ಪೆ.26 ರಿಂದ ಮಾರ್ಚ್ 2 ವರೆಗೆ ಹುಮನಾಬಾದ ಶ್ರೀಶ್ರೀಶ್ರೀ ಷ.ಬ್ರ.ವೀರ ರೇಣುಕಾ ಗಂಗಾಧರ ಶಿವಾಚಾರ್ಯರ ಸಾನಿಧ್ಯದಲ್ಲಿ, ಶ್ರೀ ಅಭಿನವ ಘನಲಿಂಗ ದೇವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬುಧವಾರ ಮಹಾ ಶಿವರಾತ್ರಿ ಉತ್ಸವ ಮೂರ್ತಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮ ಹಾಗೂ ಸಾಯಂಕಾಲ 7 ರಿಂದ 8 ಗೆ ಪ. ಪೂಜ್ಯ. ಶ್ರೀ ಷ.ಬ್ರ.ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಗವಿ ಮಠ ತಿಪುರಾಂತ ಇವರಿಂದ ಪ್ರವಚನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಗುರುವಾರ ಬೆಳಿಗ್ಗೆ ಉತ್ಸವ ಮೂರ್ತಿಗೆ ನಿರಂತರ ರುದ್ರಾಭಿಷೇಕ ರಾತ್ರಿ 8 ಗಂಟೆಗೆ ಪ. ಪೂಜ್ಯ. ಶ್ರೀ. ಷ. ವೀರ ಮಹಾಂತ ಶಿವಾಚಾರ್ಯರು ಇವರಿಂದ ಪ್ರವಚನ ನಡೆಸಿಕೊಡಲಿದ್ದಾರೆ.
ಶುಕ್ರವಾರ ಬೆಳಗ್ಗೆ ಉತ್ಸವ ಮೂರ್ತಿಗೆ ನಿರಂತರ ಸಂಗೀತ ರುದ್ರಭಿಷೇಕ ರಾತ್ರಿ 8 ಗಂಟೆಗೆ
ಪ. ಪೂಜ್ಯ. ಷ. ಬ್ರ. ಶಿವಾನಂದ ಶಿವಾಚಾರ್ಯರು ಶಿವಾನಂದ ಆಶ್ರಮ ತಮೂಲರ ಇವರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ.
ಸಂಜೆ ಸಾಂಸ್ಕೃತಿಕ ವೈಭವದೊಂದಿಗೆ ಪಲ್ಲಕ್ಕಿ ಉತ್ಸವಕ್ಕೆ ತಡೋಳಾದ ರಾಜೇಶ್ವರ್ ಶಿವಾಚಾರ್ಯರಿಂದ ಚಾಲನೆ,
ಶನಿವಾರ ಬೆಳಿಗ್ಗೆ ಅಗ್ನಿ ಪೂಜೆ
ರವಿವಾರ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ರಥೋತ್ಸವ ಜರುಗಲಿದೆ. ಶಾಸಕ ಶರಣು ಸಲಗರ ಸೇರಿ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಗೋಕುಳ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಾಯಿ ಸಮಿತಿ ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ
