ಬೀದರ್/ ಬಸವಕಲ್ಯಾಣ : ಪ್ರತಿ ವರ್ಷದಂತೆ ದಿ. 26.02.2025 ಬುಧವಾರ ಸಾಯಂಕಾಲ 04:00 ಗಂಟೆಗೆ ಬಸವಕಲ್ಯಾಣದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಪೂಜ್ಯ ಶ್ರೀ ಷ. ಬ್ರ. ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ದಿವ್ಯಸಾನಿಧ್ಯದಲ್ಲಿ ಸಂಸ್ಥಾನ ಗವಿಮಠ ಟ್ರಸ್ಟ್, ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಮತ್ತು ಸಮಸ್ತ ಸದ್ಭಕ್ತರ ಸಹಯೋಗದಲ್ಲಿ ಮಹಾಶಿವರಾತ್ರಿ ನಿಮಿತ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಆಯೋಜಿಸಲಾಗಿದೆ. ಆದ್ದರಿಂದ ಸದ್ಭಕ್ತರು ಪಾಲ್ಗೊಂಡು ಇಷ್ಟಲಿಂಗ ಪೂಜೆ ಗೈದು ಗುರುಗಳ ದರ್ಶನ ಮಾಡಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಲು ಕೋರಿಕೆ.
ವಿಶೇಷ ಸೂಚನೆ : ಗುರುಗಳಿಂದ ದೀಕ್ಷೆ ಪಡೆಯುವವರು ಮಹಾಶಿವರಾತ್ರಿ ದಿನದಂದು ಪಡೆಯಬಹುದು.
ವರದಿ : ಶ್ರೀನಿವಾಸ ಬಿರಾದಾರ
