ಮೈಸೂರಿನಲ್ಲಿ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ವತಿಯಿಂದ ನಡೆದ ರಾಷ್ಟ್ರ ಕವಿ ಕುವೆಂಪು ಸಾಹಿತ್ಯೋತ್ಸವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಡಾ.ಭೇರ್ಯ ರಾಮಕುಮಾರ ಹಾಗೂ ಶ್ರೀಮತಿ ಸವಿತಾ ದಂಪತಿಗಳಿಗೆ ಕನ್ನಡ ನಾಡು ನುಡಿ ಸೇವೆಗಾಗಿ ಸುವರ್ಣ ಕರ್ನಾಟಕ ಅಪೂರ್ವ ದಂಪತಿ ಪ್ರಶಸ್ತಿ ನೀಡಿ ಅಭಿನಂದಿಸಿ ಸನ್ಮಾನಿಸಲಾಯಿತು.
ಹಿರಿಯ ಸಾಹಿತಿ ಪ್ರೊ.ಪಾರ್ಶ್ವನಾಥ , ಕವಿ ನೂತನ ಕುಮಾರ್, ಬೆಳಗಾವಿಯ ದೃಷ್ಟಿ ವಿಶೇಷ ಚೇತನ ಕವಿ ಜಯಾನಂದ,ಎಂ. ಡಿ.ಅಯ್ಯಪ್ಪ ,ಅಮೆರಿಕದ ಕವಯತ್ರಿ ಸವಿತಾ ರವಿಶಂಕರ್ , ಕವಯತ್ರಿ ಶ್ರೀಮತಿ ರತ್ನ ಚಂದ್ರಶೇಖರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
