ಕಲಘಟಗಿ: ಶಿಗಿಗಟ್ಟಿ ತಾಂಡಾದ ನಿವಾಸಿ ಲಾಲವ್ವ ಲಮಾಣಿ ಮಹಿಳೆ (50) ಸಾವಿಗೀಡಾದ ದುರ್ದೈವಿ.
ರೈತ ಮಹಿಳೆ ತಮ್ಮ ಹೊಲದಲ್ಲಿ ಮೆಕ್ಕೆ ಜೋಳಕ್ಕೆ ನೀರು ಹಾಯಿಸಬೇಕು ಎಂದು ಬೋರ್ ಚಾಲೂ ಮಾಡಲು ಜಮಿನಿಗೆ ಹೋದಾಗ ವಿದ್ಯುತ್ ತಗುಲಿ ಲಾಲವ್ವ ಲಮಾಣಿ ಮಹಿಳೆ ಸ್ಥಳದಲ್ಲಿ ಸಾವು ಘಟನೆ ತಾಲೂಕಿನ ಶಿಗೀಗಟ್ಟಿ ತಾಂಡಾದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ ಶಿಗಿಗಟ್ಟಿ ತಾಂಡಾದ ನಿವಾಸಿ ಲಾಲವ್ವ ಲಮಾಣಿ ಎಂಬುವವರು ಸಾವನ್ನಪ್ಪಿದ್ದಾರೆ.
ಕರೆಂಟ್ ಬಂದಿದ್ದರಿಂದ ಬೋರ್ ಚಾಲೂ ಮಾಡಲು ಮುಂದಾದಾಗ ಏಕಾಏಕಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಲಾಲವ್ವ ಲಮಾಣಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ರೈತ ಮಹಿಳೆ ಲಾಲವ್ವ ಅವರಿಗೆ ಕೈ ಹಾಗೂ ಹೊಟ್ಟೆ ಭಾಗಕ್ಕೆ ಗಂಬೀರ ಗಾಯವಾಗಿದೆ.
ಹೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.
ವರದಿ: ಉಸ್ಮಾನ ಬಾಗವಾನ (ಬಳಗಾನೂರ)
