ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅದ್ದೂರಿಯಾಗಿ ಜರುಗಿದ ಒನಕೆ ಓಬವ್ವ ಉತ್ಸವ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದ ವೀರ ವನಿತೆ ಓಬವ್ವ ಉತ್ಸವವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.
ಈ ಆದ್ದೂರಿ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರು ಎನ್. ಟಿ. ಶ್ರೀನಿವಾಸ್ ಚಾಲನೆ ನೀಡಿದರು
ಹುಣಸೆ ನಾಡು ಎಂದು ಪ್ರಸಿದ್ಧ ಪಡೆದಿರುವ ನಮ್ಮ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಹುಟ್ಟಿ ಬೆಳೆದಂತಹ ವೀರ ವನಿತೆ ಓಬವ್ವ ತವರೂರು ಎಂದು ಪ್ರಸಿದ್ಧ ಪಡೆದ ಈ ಗುಡೆಕೋಟೆಯಲ್ಲಿ ಇದೇ ಮೊದಲ ಬಾರಿಗೆ ಒನಕೆ ಓಬವ್ವ ಉತ್ಸವ ವೇದಿಕೆಯನ್ನು ಮೊದಲ ಬಾರಿಗೆ ತುಂಬಾ ಅದ್ದೂರಿಯಾಗಿ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು.
ಕೋಟೆ ಕೊತ್ತಲಗಳ ನಾಡು, ಪಾಳೆಗಾರರ ನೆಲೆಬೀಡು ಎಂದು ಪ್ರಸಿದ್ಧವಾಗಿರುವ ಜರ್ಮಾಲಿ ಪಾಳೇಗಾರರು ಹಾಗೂ ಗುಡೆಕೋಟೆ ಪಾಳೇಗಾರರ ನಂಟು ಚಿತ್ರದುರ್ಗಕ್ಕೆ ಉಂಟು ಎಂಬ ಮಾತು ಮುಂದಿನ ಯುವ ಪೀಳಿಗೆ ಪರಿಚಯಿಸಿ ಕೊಡಬೇಕೆಂದು ನಮ್ಮ ಶಾಸಕರು ಗುಡೇಕೋಟೆ ಉತ್ಸವವಾಗಿ ನಡೆಸಿಕೊಂಡು ಬಂದಂತ ಈ ಕಾರ್ಯಕ್ರಮ ಇಂದು ತುಂಬಾ ದೊಡ್ಡದಾಗಿ ಅದ್ದೂರಿಯಾಗಿ “ವನಕೆ ಓಬವ್ವ ಉತ್ಸವ” ವೇದಿಕೆ ಸಜ್ಜಾಗಿಸಿ ಈ ಉತ್ಸವಕ್ಕೆ ಸಚಿವರು ಹಾಗೂ ಸ್ಥಳೀಯ ಪ್ರತಿಭಾವಂತರು, ವಿದ್ವಾಂಸರು ವಿಮರ್ಶಕರು, ವಿಚಾರವಂತರು, ಸಾಹಿತಿಗಳು, ಗುಡೆಕೋಟೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕಾ ಆಡಳಿತ ಆಶ್ರಯದಲ್ಲಿ ಆಯೋಜಿಸಿದ ವೀರ ವನಿತೆ ಓಬವ್ವ ಉತ್ಸವವಕ್ಕೆ ಚಾಲನೆ ಮಾಡಿಕೊಟ್ಟರು.
ಕಲೆ, ಸಂಸ್ಕೃತಿ ಹಾಗೂ ಪಾಳೇಗಾರರ ಹಾಗೂ ವೀರ ವನಿತೆಯ ಓಬವ್ವನ ಚರಿತ್ರೆಯನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತರಬೇಕೆಂದು ಈ ಉತ್ಸವವನ್ನು ಆಚರಿಸಲು ಸರ್ಕಾರದ ಕಡೆಯಿಂದಾನೂ ಅನುದಾನ ತರಲಾಗಿದೆ ಯಾಕಂದ್ರೆ ಚಿತ್ರದುರ್ಗದ ಕಲ್ಲಿನ ಕೋಟೆಯನ್ನು ರಾಜಾ ವೀರ ಮದಕರಿ ನಾಯಕ ಆಳಿದಂತ ನಾಡು ಕಲ್ಲಿನ ಕೋಟೆ ಆ ಕಲ್ಲಿನ ಕೋಟೆಯನ್ನು ಸುಭದ್ರವಾಗಿ ಕಾಪಾಡಲು ಅಳಿಲು ಸೇವೆ ಎಷ್ಟು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪಾಳೇಗಾರರ ಮಗಳಾಗಿ ಗುಡೆಕೋಟೆಯ ಅವರಾದಂತಹ ಒನಕೆ ಓಬವ್ವನ ಪಾತ್ರವೂ ಸಹ ತುಂಬಾ ಅಪಾರ ಎಂದು ಹೇಳಬಹುದು ಅದಕ್ಕಾಗಿ ಇಂದು ಗುಡಕೋಟೆ ಉತ್ಸವ ಅದಕ್ಕೆ ಸಾಕ್ಷಿ ಆಗಲಿದೆ, ಗುಡೆಕೋಟೆ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ವೀರಗಾಸೆ ಡೊಳ್ಳು ಕುಣಿತ,ಇನ್ನು ಮುಂತಾದ ಸಕಲ ವಾದ್ಯಗಳು ಬೀದಿಗಳಲ್ಲಿ ಓಬವ್ವನ ಬಿತ್ತಿ ಚಿತ್ರಗಳನ್ನು ಹಿಡಿದು ದಾರಿ ಉದ್ದಕ್ಕೂ ಘೋಷಣೆಗಳನ್ನೂ ಕೂಗುತ್ತಾ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಇನ್ನೊಂದು ಸಂತಸದ ವಿಷಯವೆಂದರೆ ದೇಶವೇ ತಿರುಗಿ ನೋಡುವ ಹಾಗೆ ಮಾಡಿರುವ ಒಂದು ವಿಶೇಷ “ಒನಕೆ ಓಬವ್ವರ ಅಂಚೆ ಚೀಟಿ”ಯನ್ನು ಬಿಡುಗಡೆ ಮಾಡಲಾಯಿತು. ಪ್ರೊಫೆಸರ್ ಲಕ್ಷ್ಮಣ ತೆಲಗಾವಿ ಅವರು ಮಾತನಾಡುತ್ತಾ ಕೆಲ ವಿದ್ವಾಂಸರು ಓಬವ್ವನ ಇತಿಹಾಸವನ್ನು ತಿರುಚಿವ ಹಾಗೆ ಮಾಡಿದರೆ ಅದನ್ನು ನಾವು ಇಂದು ಉತ್ಸವದ ಮೂಲಕ ಸಾರಿ, ದೇಶಕ್ಕೆ ಮುಟ್ಟುವ ಹಾಗೆ ನಾವು ಮಾಡಬೇಕು ಎಂದು ಹೇಳಿದರು. ಗಣ್ಯವ್ಯಕ್ತಿಗಳು ಹಾಗೂ ಮುಖಂಡರು ಒನಕೆ ಒಬ್ಬವನ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂ ರೇಣುಕಾ, ತಾಲೂಕು ಪಂಚಾಯಿತಿ ಇ.ಓ ನರಸಪ್ಪ, ಗುಡೇಕೋಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಎನ್ ಕೃಷ್ಣ, ಜರ್ಮಲಿ ಇಮ್ಮಡಿ ಸಿದ್ದಪ್ಪನಾಯಕ ದೊರೆ, ಒನಕೆ ಓಬವ್ವ ವಂಶಸ್ಥರಾದ ರಾಜಣ್ಣ, ಚಲವಾದಿ ಮಹಾಸಭಾ ಕೂಡ್ಲಿಗಿ ಅಧ್ಯಕ್ಷ ಮರಬನಹಳ್ಳಿ ಸಿ ಮಾರಪ್ಪ, ಕಾನಾಮಡಗು ಶಶಿಧರ ಸ್ವಾಮಿ, ರಾಮದುರ್ಗ ಪಾಪಣ್ಣ, ಪಾಳೆಗಾರ ರಾಜವಂಶಸ್ಥರಾದ ಶಿವರಾಜ್ ವರ್ಮ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಪುರ ವೆಂಕಟೇಶ್, ಕೆಇಬಿ ಗೋವಿಂದಪ್ಪ, ಜೆ ಎಂ ಬಸಣ್ಣ, ಅಂಚೆ ಇಲಾಖೆ ಅಧಿಕಾರಿ ಚಿದಾನಂದ ಪದ್ಮಶಾಲಿ, ಕಾಂಗ್ರೆಸ್ ಮುಖಂಡರಾದ ಎನ್ ಟಿ ತಮ್ಮಣ್ಣ, ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸುತ್ತ ಮುತ್ತಲಿನ ಹಳ್ಳಿಗಳ ಸಾವಿರಾರು ಜನರು ಹಾಗೂ ಸ್ಥಳೀಯ ಮುಖಂಡರು ಯಶಸ್ವಿ ಉತ್ಸವಕ್ಕೆ ಸಾಕ್ಷಿಯಾದರು.

ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ